ಲೋಕದರ್ಶನ ವರದಿ
ಹೂವಿನಹಡಗಲಿ 09: ಎಲ್ಲಾ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ತಾಯಿ ಬೇರು. ಜಾನಪದ ಕಲೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಇರುವುದರಿಂದ ಆಭಾಗದ ಕಲಾವಿದರಿಗೆ ಪ್ರೋತ್ಸಾಹಿಸಿದರೆ ಕಲೆ ಜೀವಂತ ಉಳಿಯಲು ಸಾದ್ಯ ವೆಂದು ಹಿರಿಯ ಸಾಹಿತಿ ಡಾ.ಅಂಜನಾ ಕೃಷ್ಣಪ್ಪ ಹೆಳಿದರು.
ಹಡಗಲಿಯ ಗವಿಮಠದಲ್ಲಿ ಮಲ್ಲಿಗೆ ಯುವಕ ಸಂಘ ಹಾಗೂ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜನ ಅಡಿಯಲ್ಲಿ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಿಜಿ ಯುಗದಲ್ಲಿ ಜಾನಪದ ಸಾಹಿತ್ಯ ಕಲೆಗಳು ನಶಿಸಿ ಹೊರಟಿವೆ ಇಂದಿನ ಯುವ ಪೀಳಿಗೆ ಅವುಗಳನ್ನು ಉಳಿಸಿ ಬೆಳಸಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗವಿಶ್ರೀ ಅಕ್ಕನ ಬಳಗದ ಮಹಿಳಾ ಟ್ರಷ್ಟಿನ ಕಾರ್ಯದಶರ್ಿ ಜಿ. ಗಂಗಮ್ಮ ವಹಿಸಿದ್ದರು. ಅತಿಥಿಗಳಾಗಿ ಕಲಾಪೋಷಕ ನಾವಡೆ ಮಂಜುನಾಥ ಶ್ರೀಮತಿ ಶಕುಂತಲ ನಿವೃತ್ತ ಎ.ಎಸ್.ಐ. ಕೆ.ವೀರಣ್ಣ ಉಪಸ್ಥಿತರಿದ್ದರು ನಂತರ ಜನಪದ ಸಂಭ್ರಮವನ್ನು ಜಾನಪದ ಕಲಾವಿದ ಕೆ.ಸಿ.ಪರಶುರಾಮ ಅಂಗೂರು, ಕೆ.ಅಶೋಕ, ತಬಲಾ ಸಾತ್ ಟಿ.ರಾಮಪ್ಪ, ಕ್ಯಾಸಿಯೋ ಟಿ.ತಿಮ್ಮಣ್ಣ ಸಾದರ ಪಡಿಸಿದರು. ಆರಂಭದಲ್ಲಿ ಬಿ.ಎಂ. ಪರಶುರಾಮ ಸ್ವಾಗತಿಸಿದರು ಕೊನೆಯಲ್ಲಿ ಕೆ.ದುರುಗೇಶ ವಂದಿಸಿದರು.