ಹೂವಿನಹಡಗಲಿ: ಆಚಾರ-ವಿಚಾರಗಳು ಬದುಕಿಗೆ ಅವಶ್ಯ: ಅಂಗೂರು ಶ್ರೀ

ಲೋಕದರ್ಶನ ವರದಿ

ಹೂವಿನಹಡಗಲಿ 17: ಮಾನವನ ನಿತ್ಯ ಬದುಕಿನಲ್ಲಿ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳು ಅವಶ್ಯ ಎಂದು ಅಂಗೂರು ಹಿರೇಮಠದ ಶಿವಯೋಗಿಶ್ವರ ಸ್ವಾಮೀಜಿ ಹೇಳಿದರು. 

ತಾಲೂಕಿನ ಮಾಗಳ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಕೊಟ್ಟೂರೇಶ್ವರ ಸೇವಾ ಸಮಿತಿ, ಶ್ರೀಗುರು ಜನ ಸೇವಾ ಪ್ರತಿಷ್ಠಾನ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ನೂಲ ಹುಣ್ಣಿಮೆಯ ದ್ವಿತೀಯ ಮಾಸಿಕ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದ್ದು, ಹಿರಿಯರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕಾಗಿದೆ ಎಂದರು. 

ಜಿಬಿಆರ್ ಕಾಲೇಜಿನ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಉಪನ್ಯಾಸ ನೀಡಿದ ಅವರು, ಶ್ರಾವಣ ಮಾಸದ ಹಬ್ಬ-ಹರಿದಿನಗಳ ಚಾರಿತ್ರಿಕ ಹಿನ್ನೆಲೆ ಹಾಗೂ ಆಚರಿಸುವ ವಿಶೇಷ ಮಹತ್ವವಿದ್ದು, ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಿಕೊಂಡು ಬರಬೇಕಿದೆ ಎಂದು ಹೇಳಿದರು. ನಮ್ಮ ಹಬ್ಬಗಳನ್ನು ಗುರು ಮುಖೇನ ಆಚರಿಸುವುದರ ಮೂಲಕ ಗುರು-ಶಿಷ್ಯರ ಸಂಬಂಧ, ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದರು. ತಾಯಂದಿರು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸಂಸ್ಕಾರ ನೀಡುವುದು ಇಂದಿನ ದಿನಮಾನಗಳಲ್ಲಿ ಅವಶ್ಯವಾಗಿದೆ ಎಂದು ಹೇಳಿದರು.

ಪ್ರಗತಿಪರ ರೈತರಾದ ಅರವಳ್ಳಿ ವೀರಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರಳಿಹಳ್ಳಿಯ ಎಸ್.ಎಂ.ವೀರಭದ್ರಯ್ಯ, ಪಿ.ಎಂ.ವಿಜಯಕುಮಾರ್, ಅರವಳ್ಳಿ ಮಹಾಂತೇಶಪ್ಪ, ಬಾವಿಹಳ್ಳಿ ವೀರೇಶ್, ಗದ್ದಿಕೆರೆಮಠದ ವೀರಯ್ಯ, ಕುಮಾರ ಲಕ್ಕಣ್ಣನವರ್, ಬಾಗಳಿ ಷಣ್ಮುಖಪ್ಪ, ಶ್ರೀಗುರು ಜನ ಸೇವಾ ಪ್ರತಿಷ್ಠಾನ ಸದಸ್ಯರು ಉಪಸ್ಥಿತರಿದ್ದರು. ಮಾಗಳ, ಹೊಸಹಳ್ಳಿ, ಅಂಗೂರು ಭಕ್ತರು ಭಾಗವಹಿಸಿದ್ದರು. ಕಲಾವಿದಾರಾದ ಹೊಸಹಳ್ಳಿ ವೀರೇಶ್, ಕೆ.ರಾಮಣ್ಣ ಸಂಗೀತ ನಡೆಸಿಕೊಟ್ಟರು. ಸೇವಾಥರ್ಿಗಳನ್ನು ಪ್ರತಿಷ್ಟಾನದಿಂದ ಗೌರವಿಸಲಾಯಿತು.

ಪಿ.ಎಂ.ಹೇಮಾಶ್ರೀ ಸನಿಲ್ಕುಮಾರ್ ಪ್ರಾಥರ್ಿಸಿದರು. ಹೊಸಹಳ್ಳಿಯ ಹಸಬಿ ಗೋಣೆಪ್ಪ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಸ್.ಎಂ.ಕೂಡ್ಲಯ್ಯ ನಿರ್ವಹಿಸಿದರು.