ಹೂವಿನಹಡಗಲಿ: ಕಿತ್ತು ಹೋದ ಡಾಂಬರ್ ರಸ್ತೆ ಪರಿಶೀಲನೆ

ಲೋಕದರ್ಶನ ವರದಿ

ಹೂವಿನಹಡಗಲಿ 17: ತಾಲೂಕಿನ ನಂದಿಹಳ್ಳಿ ಗ್ರಾಮದ ಸಂಪರ್ಕ ರಸ್ತೆ ನಿರ್ಮಿಸಿ ಇನ್ನೂ 90ದಿನಗಳು ಕಳೆದಿಲ್ಲ.ರಸ್ತೆ ಸಂಪೂರ್ಣ ಕಿತ್ತು ಹೋಗಿದೆ.ಡಾಂಬರು ಪದರು ಕಿತ್ತು ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ವಾಹನಗಳ ಓಡಾಟಕ್ಕೆ ಆಡಚಣೆ ಉಂಟಾಗಿದ್ದರಿಂದ ಮತ್ತೆ ಇದೀಗ ಪುನ: ಕಾಮಗಾರಿ ಪ್ರಾರಂಭಿಸಲಾಗಿದ್ದು ಭಾನುವಾರ ಶಾಸಕ ಪಿ.ಟಿ.ಪರಮೇಶ್ವರನಾಯಕ ರಸ್ತೆ ಕಾಮಗಾರಿ, ಪುರಾತನ ಕಾಲದ ಬಾವಿಯ ದುರಸ್ತೆ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ಸೋಗಿ ಮುಖ್ಯ ರಸ್ತೆಯಿಂದ ನಂದಿಹಳ್ಳಿ ಗ್ರಾಮಕ್ಕೆ ಕಲ್ಪಿಸುವ 2.20 ಕಿ.ಮೀ.ಕೂಡು ರಸ್ತೆಗೆ 1.02 ಕೋಟಿ ಖಚರ್ು ಮಾಡಲಾಗಿದೆ ಇದೀಗ ಸಂಪೂರ್ಣ ಡಾಂಬರು ರಸ್ತೆ ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ.ಕಳೆದ ವರ್ಷ ದುರಸ್ತಿ ಕೈಗೊಳ್ಳಲಾಗಿತ್ತು. ಕಾಮಗಾರಿ ಕಳಪೆಯಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಬಂಡಿ,ದ್ವಿಚಕ್ರ ವಾಹನಗಳು ಓಡಾಟಕ್ಕೆ ತೀವ್ರತೊಂದರೆಯಾಗಿದ್ದರಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಇದೀಗ ಡಾಂಬರ್ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

ಈ ಸಂದರ್ಭದಲ್ಲಿ ತಹಶೀಲ್ದಾರ ಕೆ.ರಾಘವೇಂದ್ರರಾವ್, ತಾ.ಪಂ.ಮಾಜಿ ಅಧ್ಯಕ್ಷ ಸೋಗಿ ಹಾಲೇಶ, ಗ್ರಾ.ಪಂ.ಅಧ್ಯಕ್ಷ ಕಂಠಿ ವೀರೇಶ, ಗ್ರಾಮದ ಮುಖಂಡರಾದ ಕಂಠಿ ಕಂಠೆಪ್ಪ, ಅರುಣಿ ಬಸವರಾಜ, ಅಂಗಡಿ ಬಸವರಾಜ, ಕಾಂಗ್ರೆಸ್ ವಕ್ತಾರ ಬಿ.ಎಲ್.ಶ್ರೀಧರ, ಶಿಕ್ಷಕ ವಿ.ಬಿ.ಜಗದೀಶ, ಈಶಪ್ಪ,