ಲೋಕದರ್ಶನ ವರದಿ
ಹೂವಿನಹಡಗಲಿ 22: ಸಮಾಜಕ್ಕೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುತ್ತಾ ಬಂದಿರುವುದು ಮಠಗಳ ಕಾರ್ಯ ಎಂದು ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಅಂಗೂರು ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾದಿದರು. ಶ್ರೀಮಠಕ್ಕೆ ಆಗಮಿಸಿದ ಭಕ್ತರಿಗೆ ಹಿರೇಮಠವು ಧರ್ಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು. ಶರಣರ ಕಾಯಕ ನಿಷ್ಟೆ ಮತ್ತು ದಾಸೋಹ ಪರಂಪರೆಯನ್ನು ಶ್ರೀಗಳು ಅಳವದಿಸಿಕೊಂದು ಸನ್ಮಾರ್ಗ ತೋರುತ್ತಿದ್ದಾರೆ ಎಂದರು.
ಅಂಗೂರೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಇದೇ ಸಂದರ್ಭದಲ್ಲಿ ಕೋಟಿಹಾಳ ಗ್ರಾಮದ ಮಹಾದೇವಕ್ಕ ಅಮೃತಗೌದೆಉ ದೊಡ್ಮನಿ ಹಿರೇಮಠ ಹಾಗೂ ಹಿರೇಬನ್ನಿಮಟ್ಟಿ ಗ್ರಾಮದ ಸವಿತಾ ಗುರುಪಾದಗೌಡ ಲಿಂಗನಗೌಡ್ರು ಶ್ರೀಮಠದ ಅಂಗೂರೇಶ್ವರ ಪೂಜ್ಯರಿಗೆ ನಾಣ್ಯಗಳ ತುಲಾಭಾರ ಸೇವೆ ಅರ್ಪಿಸಿದರು
ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಉಪನ್ಯಾಸ ನೀಡಿದರು. ಆನೆಕಲ್ಲಿನ ಪಂಡಿತ ಪ್ರಕಾಶ ಶಾಸ್ರಿಗಳು ಜಗದ್ಗುರು ವೀರಗಂಗಾಧರ ಶಿವಾಚಾರ್ಯರರ ಪುರಾಣ ಪ್ರವಚನ ನಡೆಸಿಕೊಟ್ಟರು. ಜಿ.ನಾಗಲಾಪುರದ ಬಿ.ಎಂ.ವಿರೂಪಾಕ್ಷಯ್ಯ, ಹ.ಬೊ.ಹಳ್ಳಿಯ ವಿರೂಪಾಕ್ಷಾಚಾರ್ಯ ಸಂಗೀತ ಸೇವೆ ಸಲ್ಲಿಸಿದರು.
ಮಾಗಡಿ ಪ್ರಾಶಂತ ಸ್ವಾಗತಿಸಿದರು. ಕುಮಾರಯ್ಯ ಕಾಶೀನಾಥಯ್ಯ ಚನ್ನಬಸಯ್ಯ ಶಾಸ್ತ್ರಿಗಳು ವೇದಘೋಷ ನದೆಸಿಕೊಟ್ಟರು.
ಬಣಕಾರ ಬಸವರಾಜ ನಿರ್ವಹಿಸಿದರು.