ಲೋಕದರ್ಶನ ವರದಿ
ಹೂವಿನಹಡಗಲಿ 02: ಇಂಗ್ಲಿಷ್ ಕಬ್ಬಿಣದ ಕಡಲೆ ಅಲ್ಲ. ಅದನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಸುಲಭವಾಗಿ ಕಲಿಯಬಹುದು ಎಂದು ಬೆಂಗಳೂರಿನ ಇಂಗ್ಲಿಷ್ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ಡಾ.ಶಾಂತನಾಯ್ಕ ಹೇಳಿದರು.
ತಾಲೂಕಿನ ಹ್ಯಾರಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಸಕರ್ಾರಿ ಪ್ರೌಢಶಾಲೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಹ ಶಿಕ್ಷಕರ ಇಂಗ್ಲಿಷ್ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಅಭ್ಯಸಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂಗ್ಲಿಷ್ ವಿಷಯದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಬೇಕು ಎಂದರು.
ಮುಂಬಯಿಯ ಭೂ ಗರ್ಭ ಶಾಸ್ತ್ರಜ್ಞ ಪಾಲಾಕ್ಷ ಕರ್ಜಗಿ ಮಾತನಾಡಿ, ಪ್ರಪಂಚದ ಶಿಕ್ಷಣ ನೀತಿಯನ್ನು ಗ್ರಾಮೀಣ ಮಕ್ಕಳಲ್ಲಿ ಬೆಳೆಸಬೇಕು ಎಂದು ಸಲಹೆ ನೀಡದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಪ್ರಕಾಶ ಹರವಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಬಿ.ದುರುಗಮ್ಮ, ಬಿಇಒ ಸಿ.ನಾಗರಾಜ, ಇಂಗ್ಲಿಷ್ ಭಾಷೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಶೇಕ್ ಅಹಮ್ಮದ್, ಶಿಕ್ಷಕ ಎಚ್.ಎಂ ಕೊಟ್ರಯ್ಯ, ಎಸ್ಡಿಎಂಸಿ ಅಧ್ಯಕ್ಷ ಎಸ್.ಬಸವಕುಮಾರ, ಶಿಕ್ಷಕರಾದ ಎಸ್.ಚಂದ್ರಪ್ಪ, ನಾಗರಾಜ, ಮಂಜುಳಾ ಇತರರಿದ್ದರು.