ಲೋಕದರ್ಶನ ವರದಿ
ಹೂವಿನಹಡಗಲಿ 29: ಆರೋಗ್ಯ ವಂತ ಮಗು ಈ ದೇಶದ ಸಂಪತ್ತು, ಹಸಿರು ತರಕಾರಿ ಸೊಪ್ಪುಗಳನ್ನು ಹೆಚ್ಚು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಾ.ಪಂ.ಇಒ ಯು.ಎಚ್.ಸೋಮಶೇಖರ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಷರ ದಾಸೋಹ ನಿರ್ದೇಶಕ ಸಿ.ಜೆ.ಮಲ್ಲಪ್ಪ ಮಾತನಾಡಿ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಿಸಿಯೂಟ ಸೌಲಭ್ಯವನ್ನು ಕೊಡುತ್ತದೆ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಅಪೌಷ್ಟಿಕತೆಯಿಂದ ಅನೇಕ ರೋಗಗಳು ಉಲ್ಬಣಿಸಿ ರಕ್ತಹೀನತೆಯಿಂದ ತೊಂದರೆ ಉಂಟಾಗುತ್ತದೆ. ಆದರಿಂದ ವಿದ್ಯಾಥರ್ಿಗಳು ಬಿಸಿಯೂಟ, ಕ್ಷೀರಭಾಗ್ಯದ ಹಾಲು ತಪ್ಪದೇ ಸೇವಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಬದ್ಯಾನಾಯ್ಕ ಆರೋಗ್ಯ ಕಡೆಗೆ ಗಮನ ಹರಿಸಿ ಹೊರತು ನಿರ್ಲಕ್ಷ್ಯ ಮಾಡಬೇಡಿ ಎಂದರು. ಶಿಕ್ಷಕಿ ಪಿ.ಎಂ.ಗೀತಾ ಮಾತನಾಡಿ ಪ್ರೋಟಿನ್ಗಳ ಬಗ್ಗೆ ತಿಳಿಸಿಕೊಟ್ಟರು. ಮುಖ್ಯ ಶಿಕ್ಷಕ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ತಪಾಸಣಾಧಿಕಾರಿ ಡಾ.ಶಿವಕುಮಾರ, ವೈ.ಜಯಮ್ಮ, ಲಂಬಾಣಿ ಗಿಡ್ಡಾನಾಯ್ಕ, ಸ್ವಾಮಿನಾಥ ರಾಮಸ್ವಾಮಿ ಇದ್ದರು.