ಹೂವಿನಹಡಗಲಿ: ಶಾಸಕ ಪರಮೇಶ್ವರನಾಯ್ಕ ಹೇಳಿಕೆ ಡಿವೈಎಸ್ಪಿ ಕಚೇರಿ ಮುಂದುವರಿಕೆ ಭರವಸೆ

ಲೋಕದರ್ಶನ ವರದಿ

ಹೂವಿನಹಡಗಲಿ 29: ಡಿವೈಎಸ್ಪಿ ಕಚೇರಿಯನ್ನು ಪಟ್ಟಣದಲ್ಲೇ ಉಳಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು. 

ಕಗ್ಗಲಗಟ್ಟಿ ತಾಂಡಾದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ವೀಕ್ಷಿಸಿದ ಬಳಿಕ ಮಾತನಾಡಿದರು. ಡಿವೈಎಸ್ಪಿ ಕಚೇರಿ ಸ್ಥಳಾಂತರ ಕುರಿತು ಮುಖ್ಯಮಂತ್ರಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಿದ್ದು, ಎಲ್ಲವನ್ನೂ ಮನವರಿಕೆ ಮಾಡಿಕೊಡಲಾಗಿದೆ. 

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಲಾಖೆ ಕಡತಗಳ ಪರಿಶೀಲಿಸಿ ದಾವಣಗೆರೆ ಜಿಲ್ಲೆಗೆ ಸ್ಥಳಾಂತರಿಸದೆ ಹಡಗಲಿಯಲ್ಲೇ ಕಚೇರಿ ಮುಂದುವರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ಮಾಹಿತಿ ನೀಡಿದರು.