ಲೋಕದರ್ಶನ ವರದಿ
ಹೂವಿನಹಡಗಲಿ 15: ತಾಲೂಕಿನ ನವಲಿ ಗ್ರಾಮದಲ್ಲಿ ಗ್ರಾಮಸ್ಥರು ಊರಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.
ಗ್ರಾಮದ ದೈವಸ್ಥರು ಮಳೆ, ಬೆಳೆ ಹಾಗೂ ಊರಿನ ಸಮೃದ್ಧಿಗೆ ಪ್ರಾಥರ್ಿಸಿ, ದೇವಿಗೆ ಮೊದಲ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಮಹಿಳೆಯರು ಶ್ರದ್ದಾಭಕ್ತಿಯಿಂದ ಗ್ರಾಮ ದೇವತೆಗೆ ನೈವೇದ್ಯ ಅಪರ್ಿಸಿ, ಉಡಿ ತುಂಬಿದರು.
ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಸರದಿ ಸಾಲಿನಲ್ಲಿ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು. ಉಡಿ ತುಂಬುವ ಕಾರ್ಯಕ್ರಮ ನಿಮಿತ್ತ ದೇವಸ್ಥಾನಕ್ಕೆ ತಳಿರು, ತೋರಣ ಕಟ್ಟಲಾಗಿತ್ತು. ದೇವತೆಯನ್ನು ವಿವಿಧ ಪುಷ್ಪ, ಆಭರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಗ್ರಾಮದ ವಿವಿಧ ದೇವಸ್ಥಾನಗಳಲ್ಲೂ ಪೂಜೆ, ಹೆಣ್ಣು ದೇವತೆಗೆ ಉಡಿ ತುಂಬಲಾಯಿತು. ರಾತ್ರಿ ಮದ್ದು ಸುಡುವ ಕಾರ್ಯಕ್ರಮ ಜರುಗಿತು.