ಲೋಕದರ್ಶನ ವರದಿ
ಹೂವಿನಹಡಗಲಿ 26: ಯುಗ ಯುಗಗಳಿಂದ ಪಂಚಪೀಠಗಳ ಪರಂಪರೆ ನಡೆದುಕೊಂಢು ಬಂದಿದ್ದು, ಪೀಠಗಳ ಕೊಡುಗೆ ಅಪಾರವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ತಾಲೂಕಿನ ಹಿರೇಕುರುವತ್ತಿ ಗ್ರಾಮದಲ್ಲಿ ಹಿರೇಮಠದ ಸಿದ್ಧ ನಂದೀಶ್ವರ ಶ್ರೀಗಳ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಪ್ರಯುಕ್ತ ಜರುಗಿದ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ವೀರಶೈವ ಧರ್ಮ, ಧರ್ಮದ ಅನುಯಾಯಿಗಳನ್ನು ಉದ್ದಾರ ಮಾಡಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು. ಪಂಚಪೀಠಗಳ ಸಾವಿರಾರು ಶಾಖಾಮಠಗಳು ಜನರಿಗೆ ಸಂಸ್ಕೃತಿಯನ್ನು ನೀಡುತ್ತಾ ಬಂದಿವೆ.
ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯವಹಿಸಿದ್ದರು.
ಸಿದ್ದಾಪುರದ ಪಶುಪತಿ ಶಿವಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೀಶ್ವರ ಸ್ವಾಮೀಜಿ ಉಪದೇಶಾಮೃತ ನೀಡಿದರು.
ಹಿರೇಮಠದ ಸಿದ್ಧನಂದೀಶ್ವರ ಸ್ವಾಮೀಜಿ, ಮಣಕೂರಿನ ಮಲ್ಲಿಕಾರ್ಜುನ ಸ್ವಾಮೀಜಿ, ಜಮಖಂಡಿಯ ಗೌರಿಶಂಕರ ಸ್ವಾಮೀಜಿ, ಮಂಗಳೂರಿನ ಸಿದ್ಧಲಿಂಗ ಸ್ವಾಮೀಜಿ, ಶಾಂತಪುರಮಠದ ಶಿವಾನಂದ ಸ್ವಾಮೀಜಿ, ಚಾಮರಾಜನಗರದ ಶಿವಮೂತರ್ಿ ಸ್ವಾಮೀಜಿ, ಕಣ್ಣೂರು ಸ್ವಾಮೀಜಿ ಉಪಸ್ಥಿತರಿದ್ದರು.
ಶ್ರೀಮಠದಲ್ಲಿ ನಾಲ್ವಾತ್ತಾಡ ವೀರೇಶ್ವರ ಪುರಾಣ ಮಂಗಲ, ಜಗದ್ಗುರು ವಿಶ್ವಾರಾಧ್ಯರ, ಚೌಡೇಶ್ವರಿ, ಈಶ್ವರ, ನಂದೀಶ್ವರ, ನಾಗಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ಜರುಗಿದವು.
ಕಾರ್ಯಕ್ರಮಕ್ಕೂ ಮುನ್ನ ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಬೀದಿಗಳಲ್ಲಿ 151 ಕುಂಭ, 101ಕಳಸ, ಸಮಾಳ, ಡೊಳ್ಳು, ನಂದಿಕೋಲು ಮಂಗಳವಾದ್ಯಗಳದೊಂದಿಗೆ ವೈಭವವಾಗಿ ಜರುಗಿತು.
ಚನ್ನಯ್ಯ ಶಾಸ್ತ್ರಿ ವೇದಘೋಷ ನಡೆಸಿಕೊಟ್ಟರು ಜಯಶ್ರೀ ಪುರಾಣಿಕಮಠ ಮತ್ತು ಸಂಗಡಿಗರು ಪ್ರಾಥರ್ಿಸಿದರು. ಪುರಾಣಿಕಸ್ವಾಮಿ ಪುರಾಣಿಕ ಮಠ ಸ್ವಾಗತಿಸಿದರು. ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ನಿರ್ವಹಿಸಿದರು.