ಲೋಕದರ್ಶನ ವರದಿ
ಹೂವಿನಹಡಗಲಿ 04: ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಲಿಂ.ಪುರವರ್ಗ ಮಠದ ಪಿ.ಎಂ.ಗುರುನಂಜಯ್ಯಾ ಸ್ವಾಮಿಯವರ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಹರಪನಹಳ್ಳಿಯ ನಿವೃತ್ತ ಕನ್ನಡ ಉಪನ್ಯಾಸಕ ವಿಶೇಷ ಉಪನ್ಯಾಸದಲ್ಲಿ ಮೊಬೈಲ್ ಸಂಸ್ಕೃತಿಯನ್ನ ಮಕ್ಕಳಲ್ಲಿ ದೂರವಾಗಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಗೆ ಉತ್ತಮ ವ್ಯಕಿತ್ವವನ್ನ ರೂಪಿಸಿರಿ ಎಂದು ಹೇಳುತ್ತಾ ಮಕ್ಕಳಿಗಾಗಿ ಆಸ್ತಿಯನ್ನ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಪಾಲಕರಿಗೆ ಕರೆ ನೀಡಿದರು.
ಮಾನಿಹಳ್ಳಿ ಪುರವರ್ಗ ಮಠದ ಷ.ಬ್ರ. ಮಳಿಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸಾನಿಧ್ಯ ಗವಿಮಠದ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ನಂದಿಪುರದ ಮಹೇಶ್ವರ ಮಹಾಸ್ವಾಮಿಗಳು, ಮಂಗಾಪುರದ ಪ್ರಭುದೇವಾ ಮಹಾಸ್ವಾಮಿಗಳು, ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲ ಸೋಮಶೇಖರ ಮಹಾಸ್ವಾಮಿಗಳು, ಹಾಲ ಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಳವುಂಡಿ ಸಿದ್ದೇಶ್ವರ ಮಠದ ನಿಯೋಜಿತ ಮರಿದೇವರಾದ ಸಿದ್ದವೀರ ದೇವರು ಸಾನಿಧ್ಯ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಎಂ.ಪಿ.ಎಂ.ದಯಾನಂದ ಸ್ವಾಮಿ,ನಿವೃತ್ತ ಗ್ರಾಮ ಲೆಕ್ಕಾದಿಕಾರಿ ಪಿ.ಎಂ.ಶ್ರೀಧರಯ್ಯಾ, ಪಶು ನಿರೀಕ್ಷಕ ಪಿ.ಎಂ.ಚನ್ನವೀರಯ್ಯಾ, ಪಿ.ಎಂ.ದೊಡ್ಡಬಸಯ್ಯಾ ಶಾಸ್ತ್ರಿ,ಪ್ರಗತಿ ಪರ ರೈತರಾದ ದೇವಗೊಂಡನಹಳ್ಳಿ ನಾಗಪ್ಪ, ಮೋರಗೇರಿ ಈರಪ್ಪಾ, ಹೆದ್ದಾರಿ ಆನಂದ, ಗುತ್ತಲ ಚನ್ನವೀರಪ್ಪ, ನಿವೃತ್ತ ಯೋಧರಾದ ಜಗನ್ನಾಥ್ ಹಿರೇಮಠ್, ಹ್ಯಾರಡದ ನಾಯಕರ ಚಂದ್ರಪ್ಪ, ಮೀರಾಕೊರ್ನಹಳ್ಳಿ ಮೊಹಮದ್ ರಫೀ, ಎಸ್.ಬಿ,ಐ. ಸೆಕ್ಯುರಿಟಿ ಗಾರ್ಡ ಗುರುಶಾಂತಪ್ಪ ಇವರಿಗೆ ಗೌರವಿಸಿ ಗುರುರಕ್ಷೆ ನೀಡಲಾಯಿತು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಗ್ರಾಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾಥರ್ಿಗಳಾದ ಅಂಗಡಿ ಕರಿಬಸವರಾಜ, ದಿಬ್ಬದಹಳ್ಳಿ ಪೂಣರ್ಿಮಾ, ವಾಲಿ ಸುಷ್ಮಾ ಇವರಿಗೆ ಪ್ರತಿಭಾ ಪುರಸ್ಕಾರ ಮಾಡಿಲಾಯಿತು.
ಮದುವೆಯಾಗಿ 50ವರ್ಷ ಪೂರೈಸಿದ ದಂಪತಿಗಳಾದ ಪಿ.ಎಂ.ಹೇಮಾಕ್ಷಮ್ಮ ಪಿ.ಎಂ.ಶ್ರೀಧರಯ್ಯಾ, ಕರಿಶೆಟ್ಟಿ ರುದ್ರಮ್ಮ ಕರಿಶೆಟ್ಟಿ ಶಿವಕುಮಾರ್ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಪಿ.ಎಂ.ಬಸವರಾಜಯ್ಯಾ, ಹೆಚ್.ಎಂ.ದ್ವಾರಕಯ್ಯಾ ಸ್ವಾಮಿ, ಪಿ.ಎಂ.ಕೊಟ್ರಯ್ಯಾ ಸ್ವಾಮಿ, ಎಂ.ಎಂ.ರುದ್ರಯ್ಯಾ, ಎಂ.ಎಂ.ಮಲ್ಲಯ್ಯಾ ಮತ್ತು ಕ.ರಾ.ಸ.ನೌ.ಸಂಘದ ನೂತನ ಅಧ್ಯಕ್ಷ ಎಂ.ಪಿ.ಎಂ.ಅಶೋಕ, ಕ.ರಾ.ಸ.ನೌ.ಸಂಘದ ನಿದರ್ೇಶಕರಾದ ವಿ.ಬಿ.ಜಗದೀಶ್, ಡಾ.ಎಂ.ನೇಮ್ಯಾನಾಯ್ಕ್ ಮತ್ತು ಜೆಸ್ಕಾಂ ನೌಕರ ಶ್ರವಣ್ ಕುಮಾರ್ ರವರನ್ನ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದ ಹೆಚ್.ಎಂ.ಸಿದ್ಧಲಿಂಗಸ್ವಾಮಿ ಪ್ರಾರ್ಥಿಸಿದರು ಶಿಕ್ಷಕರಾದ ಹೆಚ್.ಎಂ.ಬಸವರಾಜ್ ಸ್ವಾಗತಿಸಿದರು, ಪಿ.ಎಂ.ಶಿವಾಚರ್ಯ ವಂದಿಸಿದರು, ಪತ್ರಕರ್ತರಾದ ಹೆಚ್.ಕೆ.ಮಹೇಶ್ ಮತ್ತು ಎಂ.ದಯಾನಂದ ನಿರೂಪಿಸಿದರು.