ಲೋಕದರ್ಶನ ವರದಿ
ಹೊಸಪೇಟೆ 12: ಇದೇ ಆಗಷ್ಟ 16 ರಿಂದ 18ರವರೆಗೂ ದಕ್ಷಿಣ ಕೋರಿಯಾದ ಇಂಜಿನಿಯಾದಲ್ಲಿ ನಡೆಯವುವ 2ನೇ ಏಷಿಯಾ ಜಂಪ್ರೋಪ್ ಚಾಂಪಿಯನ್ ಶಿಫ್ನಲ್ಲಿ ದೇಶದ 43 ಸ್ಪರ್ದಾಳುಗಳ ಪೈಕಿ ರಾಜ್ಯದಿಂದ 15 ವಿದ್ಯಾಥರ್ಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ರಾಜ್ಯ ಜಂಪ್ರೋಪ್ ಅಸೋಶಿಯೇಷನ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಹಗ್ಗದಾಟ (ಬದಲಾದ ಜಂಪ್ರೋಪ್) ಎಲ್ಲಾ ಕ್ರೀಡೆಗಳ ಮೂಲವಾಗಿದ್ದು ಭಾರತೀಯ ಕ್ರೀಡಾ ಪ್ರಾಧಿಕಾರವೂ ಇದೀಗ ಕ್ರೀಡಾ ಮಾನ್ಯತೆಯನ್ನು ಮಾಡಲು ಮುಂದಾಗುತ್ತಿರುವ ಈ ಸಂದರ್ಭದಲ್ಲಿ 2ನೇ ಏಷಿಯಾ ಚಾಂಪಿಯನ್ ಶಿಫ್ ನಡೆಯಲಿದೆ. ಈ ಭಾರಿಯ ವಿಶೇಷ ರಾಜ್ಯದ 15 ಸ್ಪಧರ್ಾಳುಗಳು ಪಾಲ್ಗೊಳ್ಳುತ್ತಿರುವುದು ಅದರಲ್ಲೂ 11 ಸ್ಪರ್ದಾಳುಗಳು ಹೊಸಪೇಟೆಯವರು ಎಂಬುವುದು ಮತ್ತೊಂದು ಹೆಮ್ಮೆ ಎಂದರು.
15 ಕ್ಕೂ ಹೆಚ್ಚು ದೇಶಗಳು 7 ವಿವಿಧ ಹಂತದ ಸ್ಪಧರ್ೆಗಳು ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುಲು ಆಗಷ್ಟು 13 ರಂದು ಹೊಸಪೇಟೆಯಿಂದ ಹೈದ್ರಾಬಾದ, ನವದೆಹಲಿ ಮಾರ್ಗವಾಗಿ ದಕ್ಷಿಣ ಕೋರಿಯಾಗೆ ಪ್ರಯಾಣ ಬೆಳಸಲಿದ್ದಾರೆ.
ಕ್ರೀಡಾ ಪಟುಗಳು:
ಚಿನ್ನಮ್ಮಯಿ ದೇಶಪಾಂಡೆ, ಅನನ್ಯ ಜಮ್ಮಿಲಾ, ಶುಶಾಂತ ಗೌಳಿ, ಮಂಜುಶ್ರೀ ಶೆಟ್ಟರ್, ಶಶಾಂತ ಮೂತರ್ಿಣ್ಣವರ್, ರೀಶಿಕುಮಾರ ಬೈರಪ್ಪ, ದೇವಕಿಶೋರ್ ರಾಹುಲ್, ದೀಪ್ತಿ ಮದೂಲ್, ಮಹಮ್ಮದ ಅಜೀಮ್ ಪಟೇಲ್, ವರ್ಷಾ ಪೂಜಾರ್, ರಿತೇಶ್ ಕುದರಿಮೋತಿ ಹೊಸಪೇಟೆಯ ಡಿಎವಿ ಪಬ್ಲಿಕ್ ಶಾಲೆಯ ಪ್ರತಿನಿಧಿಗಳಾಗಿದ್ದು ಹುಬ್ಬಳಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಕೃತಿಕಾ ಹಟ್ಟಿ, ಹಾಗೂ ಇಲಕಲ್ ಶ್ರೀ ಬಸವಾ ಪಬ್ಲಿಕ್ಶಾಲೆಯ ಪದ್ಮಾವತಿ ರೇವಣ್ಕರ್, ಮಲ್ಲಪ್ಪ ಪೂಜಾರ್ ಪಾಲ್ಗೊಳ್ಳಲಿದ್ದಾರೆ ಅಲ್ಲದೆ ಮಹಮ್ಮದ್ ರಫೀಕ್ ನಿಣರ್ಾಯಕರಾಗಿ ಮತ್ತು ಅಧಿಕಾರಿಗಳಾಗಿ ಅಬ್ದಲ್ ರಜಾಕ್ ಮತ್ತು ಸುಧಾಕರ ಪೇಡಿ ಪಾಲ್ಗೊಳ್ಳಲಿದ್ದಾರೆ.