ಹೊಸಸಪೇಟೆ: ಗ್ರಾಹಕರಿಗೆ ಪೆಟ್ರೋಲ್-ಡೀಸಲ್ ಗುಣಮಟ್ಟ ಜಾಗೃತಿ

ಲೋಕದರ್ಶನ ವರದಿ

ಹೊಸಸಪೇಟೆ 27: ಹಿಂದೂಸ್ಥಾನದ ಪೆಟ್ರೋಲಿಯಂ ಕಾರ್ಪೊರೇಷನ್  ಲಿಮಿಟೆಡ್ (ಹೆಚ್.ಪಿ.ಸಿ.ಎಲ್.) ಕಂಪನಿ ತಮ್ಮ ಬಂಕ್ಗಳಿಗೆ ಮೂಲ ಸೌಕರ್ಯ ಖಾತ್ರಿಪಡಿಸುವ ಜೊತೆಗೆ ಪೆಟ್ರೋಲ್ ಹಾಗೂ ಡೀಸಲ್ ಗುಣಮಟ್ಟದ ಮೇಲೆ ಗ್ರಾಹಕರು ವ್ಯಕ್ತಪಡಿಸುವ ಕಲಬೆರಿಕೆ ಸಂಶಯ ದೂರ ಮಾಡಲು ತೈಲದ ಪ್ರಮಾಣ ಮತ್ತು ಗುಣಮಟ್ಟ ಪರೀಕ್ಷಾ ಜಾಗೃತಿಯನ್ನು ಹಮ್ಮಿಕೊಂಡಿದೆ. 

ಪಟ್ಟಣದ ಹೃದಯಬಾಗದಲ್ಲಿ ಇರುವ ಮಿಲನ್ ಪೆಟ್ರೋಲ್ ಬಂಕ್ನಲ್ಲಿ ಗ್ರಾಹಕರಿಗೆ ತೈಲದ ಗುಣಮಟ್ಟ ಹಾಗೂ ಖರೀದಿಸುವ ತೈಲದ ಪ್ರಮಾಣವನ್ನು ಮೊದಲು ಮಾಪಕಗಳಲ್ಲಿ ತುಂಬಿಸಿ ತೋರಿಸಲಾಯಿತು. ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸಲ್ ತುಂಬಿಸಲು ಬಂದಿದ್ದ ಪ್ರತಿಯೊಬ್ಬ ಗ್ರಾಹಕರಿಗೆ ಕಡ್ಡಾಯವಾಗಿ ತೈಲದ ಗುಣಮಟ್ಟ ಪ್ರಮಾಣ ಪರೀಕ್ಷಿಸುವ ಸ್ವತಂತ್ರ ನೀಡಲಾಯಿತು. ಅನೇಕರು ಪಾರದಕ್ಷಕವಾಗಿ ಸ್ವಾಗತಿಸಿದರು. ಈ ಮೂಲಕ ಬಂಕ್ಗಳಲ್ಲಿ ತೈಲದ ಕ್ವಾಲಿಟಿ ಹಾಗೂ ಕ್ವಾಂಟಿಗಿ ಖಾತ್ರಿಪಡಿಸುವ ಹಕ್ಕು ನೀಡಲಾಯಿತು. 

ಈ ಕಾರ್ಯಕ್ರಮದಲ್ಲಿ ಪೆಟ್ರೋಲ್ ಬಂಕ್ನ ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಇದ್ದರು.