ಲೋಕದರ್ಶನ ವರದಿ
ಹೊಸಪೇಟೆ 16: ಇಂದು ನಗರದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸಕರ್ಾರ ಜಾರಿಗೊಳಿಸಿರುವ ಕಾಯಿದೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ನಗರದ ಈದ್ಗಾ ಮೈದಾನದಿಂದ ರಾಮ ಟಾಕೀಸ್, ಉದ್ಯೋಗ ಪೆಟ್ರೋಲ್ ಬ0ಕ್, ಗಾಂಧಿ ಚೌಕ್, ಬಸ್ಸ್ಟಾಂಡ್, ಮೂಲಕ ಶಾನ್ಭಾಗ್ ಸರ್ಕಲ್ ವರೆಗೆ ಕಾಲನಡಿಗೆ ಮೂಲಕ ನಡೆದು ಬಂದು ಪ್ರತಿಭಟನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡರು ಹಾಗೂ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷರಾದ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯಿದೆಯು ದೇಶವನ್ನು ವಿಭಜಿಸುವ ಕಾಯ್ದೆಯಾಗಿದ್ದು ಇದನ್ನು ತಕ್ಷಣವೇ ವಾಪಸ್ ಪಡೆಯಬೇಕು. ಈ ಕಾಯ್ದೆಯು ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು ಶತಮಾನಗಳಿಂದಲೂ ತಾತ ಮುತ್ತಾತನ ಕಾಲದಿಂದಲೂ ಈ ದೇಶದಲ್ಲಿ ಹುಟ್ಟಿ ಬೆಳೆದಂತಹ ಸಮುದಾಯಗಳನ್ನು ಒಡೆಯುವಂತಹ ಕಾಯ್ದೆಯನ್ನು ರದ್ದು ಮಾಡಬೇಕು ಇಲ್ಲದಿದ್ದರೆ ಮುಂದಿನದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ವಿರುದ್ಧ ಉಗ್ರ ಹೋರಾಟ ಮಾಡುವ ಕುರಿತು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಪೂಜಾರಿ ಹುಲುಗಪ್ಪ ನವರು ಮಾತನಾಡಿ ಪ್ರಸ್ತುತ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬಡತನ, ದಿನಸಿ ವಸ್ತುಗಳ ಬೆಲೆ ಏರಿಕೆ, ಹಾಗು ಜಿಡಿಪಿ ಪಾತಾಳಕ್ಕೆ ತಲುಪಿದೆ.
ಇಂತಹ ಗಂಭೀರ ವಿಚಾರಗಳನ್ನು ಮರೆಮಾಚುವ ದುರುದ್ದೇಶದಿಂದ ಕಾಯಿದೆಯನ್ನು ಜಾರಿಗೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಖಾದರ್ ರಫಾಯಿ, ಅನ್ಸರ್ ಬಾಷ, ವಾಹೀದ್, ಬಡಾವಲಿ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಾದ ಸಂತೋಷ, ಸೋಮಪ್ಪ, ಭಾಸ್ಕರ ರೆಡ್ಡಿ, ಜಂಬಯ್ಯ ನಾಯಕ, ತಾರಿಹಳ್ಳಿ ವೆಂಕಟೇಶ್, ಸತ್ಯ ನಾರಾಯಣ ಸಾವಿರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.