ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

ಲೋಕದರ್ಶನ ವರದಿ

ವಿಜಯಪುರ 14: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದಶರ್ಿಗಳಾದ ಡಾ.ಸುರೇಶ ಬ.ಬಿರಾದಾರ ರವರು   ಜವಾಹರಲಾಲ ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ  ಸಲ್ಲಿಸಿ, ವಿದ್ಯಾಥರ್ಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯವನ್ನು ಹೇಳಿದರು. 

ಈ ಸಂದರ್ಭದಲ್ಲಿ ಅವರು ಭಾರತದ ಪ್ರಥಮ ಪ್ರಧಾನಿಯವರಾದ ಶ್ರೀ ಜವಾಹರಲಾಲ ನೆಹರೂಜಿರವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಅದಕ್ಕಾಗಿ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಕ್ಕಳೇ ಈ ದೇಶದ ಆಸ್ತಿ,  ಈ ದೇಶವನ್ನು ಭವಿಷ್ಯತನಲ್ಲಿ ಅಭಿವೃದ್ಧಿ ಪಥದತ್ತ ಸಾಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಮಕ್ಕಳು ಒಳ್ಳೆಯ ಹವ್ಯಾಸಗಳನ್ನು, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಇನ್ನೊಬ್ಬ ಮಹಾನ ಚೇತನರಾದ ಡಾ. ಎ.ಪಿ.ಜೆ. ಅಬ್ದುಲ್ಕಲಾಮ ರವರು ಕೂಡಾ ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತ ಇಹಲೋಕ ತ್ಯೇಜಿಸಿದರು. ಅಷ್ಟೊಂದು ಮಕ್ಕಳ ಜೊತೆ ಒಡನಾಟವನ್ನು ಹೊಂದಿದ್ದರು ಎಂದು ನುಡಿದರು. 

ಈ ಸಂದರ್ಭದಲ್ಲಿ ಮಕ್ಕಳು ಕಿರುನಾಟಕವನ್ನು ಆಡಿದರು. ಅಲ್ಲದೆ ಶಿಕ್ಷಕರು ಇನ್ನಿತರ ಕಾರ್ಯಕ್ರಮಗಳನ್ನು ಮಾಡಿ ಮಕ್ಕಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಶ್ರೀ ಚಂದನಗೌಡ ಮಾಲಿಪಾಟೀಲ, ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ,ಎ.ಎಚ್.ಸಗರ, ಭಾರತಿ ಪಾಟೀಲ, ಶ್ರೀದೇವಿ ಜೋಳದ, ವೈಶಂಪಾಯನ, ಅನೀಲ ಬಾಗೇವಾಡಿ, ಎಸ್.ಆರ್.ಕಟ್ಟಿಮನಿ, ಮಿನಾಕ್ಷಿ, ಇಲಿಯಾಸ್, ಹಫೀಜ್ ಅನೀತಾ ದೇಸಾಯಿ, ಮೇಘಾ ಸೂರ್ಯವಂಶಿ, ಮಧುಮತಿ, ಗಿರಿಜಾ ಕರಡಿ, ಸೀಮಾ ಸದಲಗಾ, ಸರೋಜಾ ಕರಕಳ್ಳಿ, ಸಮೀನಾ ತೊರವಿ, ಎಸ್.ಎ.ಹುಗ್ಗಿ, ದೀಪಾ ತಿಳಿಗೋಳ, ವಿದ್ಯಾಭಾರತಿ, ಇತರರು ಉಪಸ್ಥಿತರಿದ್ದರು.