ಮಹಾ ಚೇತನ ಹೆಲನ್ ಕೆಲ್ಲರ್ನ ದಿನಾಚರಣೆ

ಹುಬ್ಬಳ್ಳಿ 02: ದೃಷ್ಟಿ ದೋಷವಿರುವ ಮಕ್ಕಳ ಕಲಿಕೆಗೆ ಅನುಕೂಲವಾಗುವ ಬ್ರೈಲ್ ಲಿಪಿ, ಸ್ಲೇಟ್ನ್ನು ಕಂಡುಹಿಡಿದ ಮಹಾ ಚೇತನ ಹೆಲನ್ ಕೆಲ್ಲರ್ನ ದಿನಾಚರಣೆ, ಸಕ್ಷಮ ಹಾಗೂ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು  ಸಿದ್ಧಾರೂಡಮಠದ ಆವರಣದಲ್ಲಿರುವ ಸರಕಾರಿ ಅಂಧ ಮಕ್ಕಳ ಶಾಲೆ ಹಾಗೂ ಆರೂಢ ಶಾಲೆಯ ಮಕ್ಕಳು ಸಕ್ಷಮ ಆಶ್ರಯದಲ್ಲಿ ಅತಿ ಉತ್ಸಾಹದಿಂದ ಆಚರಿಸಿದರು.


ಮಕ್ಕಳು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಬಾಲಕಿ ಲಕ್ಷ್ಮೀ ಅವರು ಹೆಲನ್ ಕೆಲ್ಲರ್ ಕುರಿತು ಮಾತನಾಡಿದರು. 


ಸಕ್ಷಮ ಉತ್ತರ ಪ್ರಾಂತ್ಯದ ಉಪಾಧ್ಯಕ್ಷ, ಕಿಮ್ಸ ಪ್ರಾಧ್ಯಾಪಕ ಡಾ. ಸುನೀಲ ಗೋಕಲೆ ಅವರು ಮಾತನಾಡಿ ಸಕ್ಷಮ ಸಂಸ್ಥೆಯು ಸಮದೃಷ್ಟಿ, ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ ಎಂಬ ಉದ್ದೇಶಗಳನ್ನು ಇಟ್ಟುಕೊಂಡು ಅಂಧ ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಿದೆ. ಶಬ್ಧ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ , ಭೂಮಿ ಮಾಲಿನ್ಯ ತಡೆಗಟ್ಟಬೇಕು ಎಂದರೆ ಪ್ಲಾಸ್ಟಿಕ ಬಳಕೆ ನಿಲ್ಲಿಸಬೇಕು. ಸಾಧ್ಯವಾದಷ್ಟೂ ಸಮೂಹ ಸಾರಿಗೆ ಉಪಯೋಗಿಸಬೇಕು. ಮರುಬಳಕೆಗೆ ಒತ್ತು ನೀಡಬೇಕು. ಮಳೆ ನೀರನ್ನು ಸಂಗ್ರಹಿಸಬೇಕು, ಇಂಗಿಸಬೇಕು. ಗಿಡಗಳನ್ನು ನೆಟ್ಟು ಕಾಡನ್ನು ಬೆಳೆಸಬೇಕು ಎಂದರು. ಹೆಲನ್ ಕೆಲ್ಲರ್ನ ಕಾರ್ಯಗಳನ್ನು ಸ್ಮರಿಸಿದರು.


ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಉಪಾಧ್ಯಕ್ಷ,  ಬಿಡಿಕೆ ವೇರ್ನ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ, ಸಕ್ಷಮ ಉತ್ತರ ಪ್ರಾಂತ್ಯದ ಅಧ್ಯಕ್ಷ ಎಸ್.ಬಿ.ಶೆಟ್ಟಿ ಮಾತನಾಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಕೆ.ಎಂ.ಅಮರನಾಥ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಶಿವರುದ್ರ ಟ್ರಸ್ಟನ ನಿದರ್ೇಶಕ ಡಾ. ಬಸವಕುಮಾರ ತಲವಾಯಿ, ಟೆಕ್ಸಾಸ್ ಕಂಪನಿಯ ಮಲ್ಲಿಕಾಜರ್ುನ ಸಿಎಚ್, ಅದಿತ್ಯ ಹರಿಭಟ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. 


ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿ ವತಿಯಿಂದ ಬ್ರೈಲ್ ಲಿಪಿ ಸ್ಲೇಟ್ನ್ನು ಒಳಗೊಂಡ ಕಿಟ್ ಬ್ಯಾಗನ್ನು 120 ವಿದ್ಯಾಥರ್ಿಗಳಿಗೆ ನೀಡಲಾಯಿತು. ಮಹೇಶ, ಮಂಜುನಾಥ ಪ್ರಾಥರ್ಿಸಿದರು. ಚೆನ್ನವಿರೇಶ ಸ್ವಾಗತಿಸಿದರು. ಅಡವೀಶಯ್ಯ ನಿರೂಪಿಸಿದರು.