ದಾಂಡೇಲಿ: ದಾಂಡೇಲಿ ನಗರಸಭೆಯ ಆರೋಗ್ಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಾದ ಹೆಚ್.ವಿ ನಾಯಕರವರ ಕರ್ತವ್ಯ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ ಹಾಗೂ ಕಾನೂನುಬಾಹಿರ ಮತ್ತು ಆರೋಗ್ಯಕ್ಕೆ ತುಂಬಾ ಹಾನಿಕರವಾದ ಸಾರ್ವಜನಿಕ ಶೌಚಾಲಯದ ತ್ಯಾಜ್ಯ (ಸೆಪ್ಟಿಕ್ ಟ್ಯಾಂಕಿನ ಹೊಲಸು)ವನ್ನು ದಾಂಡೇಲಿ ನಗರದ ಹೃದಯ ಭಾಗವಾದ ಇ.ಎಸ್.ಐ ಆಸ್ಪತ್ರೆ ಪಕ್ಕದಲ್ಲಿ ಹಾಕಿರುತ್ತಾರೆ ಇವರುಗಳು ಹಾಕಿದ ತ್ಯಾಜ್ಯದ ಸ್ಥಳದ ಸುತ್ತಲು ಇ.ಎಸ್.ಐ ಆಸ್ಪತ್ರೆ, ಪೋಸ್ಟ ಆಫೀಸ , ರೋಟರಿ ಶಾಲೆ ಮರಾಠಾ ಮಂಗಲ ಕಾಯರ್ಾಲಯ , ದಗರ್ಾ, ಉಪಖಜಾನೆ ಇಲಾಖೆ ಇವೆ. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಶೌಚಾಲಯದ ಟ್ಯಾಂಕಿನ ಹೊಲಸನ್ನು ಇಲ್ಲಿ ತಂದು ಹಾಕಿರುತ್ತಾರೆ. ಇದನ್ನು ಕಂಡು ಸಾರ್ವಜನಿಕರ ಸಹಾಯದೊಂದಿಗೆ ತೀವ್ರವಾಗಿ ಪ್ರತಿಭಟಿಸಿ ಆ ತ್ಯಾಜ್ಯವನ್ನು ಗುತ್ತಿಗೆದಾರರು ಬೇರೆ ಕಡೆ ಸಾಗಿಸುವಂತೆ ಮಾಡಿರುತ್ತಾರೆ.
ಮಳೆಯ ನೀರಿನಿಂದ ರಸ್ತೆ ಮೇಲೆ ಸುರಿದ ತ್ಯಾಜ್ಯ ಪಕ್ಕದ ಸ್ಥಳದಲ್ಲೆಲ್ಲ ಹರಡಿಕೊಂಡಿದೆ ಈ ರಸ್ತೆಯಿಂದ ಅನೇಕ ವಿದ್ಯಾಥರ್ಿಗಳು, ರೋಗಿಗಳು, ಕಾಮರ್ಿಕರು, ಅಂಚೆ ಕಚೇರಿ ಅಧಿಕಾರಿಗಳು, ಸಾರ್ವಜನಿಕರು ದಿನನಿತ್ಯ ಸಂಚರಿಸುತ್ತಾರೆ. ಈಗ ರಸ್ತೆ ಮೇಲೆ ಕಾಲಿಡಲು ಅಯೋಗ್ಯವಾದಂತಾಗಿದೆ ಮಳೆಗಾಲವಾಗಿದ್ದರಿಂದ ಈ ತ್ಯಾಜ್ಯದಿಂದ ಪ್ರದೇಶವೆಲ್ಲಾ ದುನರ್ಾತಮಯವಾಗಿರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು ಎಲ್ಲಾ ಅವಾಂತರಕ್ಕೆ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಒಂದು ವೇಳೆ ಕ್ರಮ ಜರುಗಿಸದೆ ನಗರದ ಹೃದಯ ಭಾಗವಾದ ಈ ಸ್ಥಳದಲ್ಲಿ ಇನ್ನೂ ಮುಂದೆ ಯಾವುದೇ ರೀತಿಯ ಕಸ ಹಾಕಿದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಉಗ್ರ ಪ್ರತಿಭಟನೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ದೂರು ದಾಖಲಿಸಿ ಕಾನೂನು ಬದ್ದ ಹೋರಾಟ ಮಾಡಲಾಗುವುದು ಎಂದು ಯುವ ಮುಖಂಡ ಪ್ರಭುದಾಸ ಯನಿಬೇರ ತಿಳಿಸಿದ್ದಾರೆ.