ಮುಂಡರಗಿ 06: ಕನರ್ಾಟಕ ಸರಕಾರ ಜಿಲ್ಲಾ ಪಂಚಾಯತ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ತಾಲೂಕ ಆಡಳಿತ ತಾಲೂಕ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಎಮ್ ಎಸ್ ಡಂಬಳ ಪದವಿ ಪೂರ್ವ ಮಹಾವಿದ್ಯಾಲಯ ಮುಂಡರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂಡರಗಿ, ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಮುಂಡರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಎಮ್ ಎಸ್ ಡಂಬಳ ಪದವಿ ಪೂರ್ವ ಮಹಾವಿದ್ಯಾಲಯ ಮುಂಡರಗಿ ದಿ. 06ರಂದು ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಆರ್. ಅಂಗಡಿ ಎಮ್ ಎಸ್ ಡಂಬಳ ಪದವಿ ಪೂರ್ವ ಮಹಾವಿದ್ಯಾಲಯ ಮುಖ್ಯೋಪಾಧ್ಯಾಯರು ಮುಂಡರಗಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿ ಉಪನ್ಯಾಸಕರಾಗಿ ಡಾ. ಕೀತರ್ಿಹಾಸ ಹೆಚ್ ಪಿ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿಗಳು ಮುಂಡರಗಿ ಇವರು ಮಾತನಾಡಿ ಈ ಒಂದು ಮಾದಕ ವಸ್ತುಗಳಿಗೆ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ. ಅದಕ್ಕಾಗಿ ಇಂತಹ ಮಾದಕ ವಸ್ತುಗಳ ಸೇವೆನೆಯ ದುಷ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾಲೇಜು ಆವರಣದಲ್ಲಿ ಮಾಡಲು ಹೇಳಿದರು. ವರ್ಷದ ಘೋಷಣೆಯಾದಂತಹ ಮಕ್ಕಳ ಮತ್ತು ಯುವ ಜನರ ಮಾತುಗಳನ್ನು ಆಲಿಸುವುದು ಅವರ ಆರೋಗ್ಯ ಪೂರ್ಣ ಮತ್ತು ಸುರಕ್ಷಿತ ಬೆಳವಣಿಗೆಯ ಮೊದಲ ಹೆಜ್ಜೆ ಎಂದು ಹೇಳಿದರು ಮತ್ತು ಯುವ ಜನರಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ ಆಪ್ತ ಸಮಾಲೋಚನೆ ಮುಖಾಂತರ ಪರಿಹಾರವನ್ನು ಕಂಡುಕೊಳ್ಳಬಹುದು. ಅದರ ಬದಲಾಗಿ ಯುವ ಜನರು ದುಷ್ಟ ಚಟಗಳಾದಂತಹ ಗಾಂಜಾ, ಅಫೀಮ್, ಚರಸ್, ಬ್ರೌನ್ ಶುಗರ್ ಮುಂತಾದ ವಸ್ತುಗಳ ಸೇವೆಗಳು ಮಾಡುವುದರಿಂದ ಯುವ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀಳುತ್ತವೆ ಮತ್ತು ಅಪರಾಧಗಳು ಹೆಚ್ಚಾಗುತ್ತವೆ ಅದಕ್ಕಾಗಿ ಮೊದಲು ಎಲ್ಲರೂ ಮನೆಯಲ್ಲಿ ಹಾಗೂ ಶಾಲೆಗಳಲ್ಲಿ ಯುವ ಜನರ ಸಮಸ್ಯೆಗಳೇನು ಎಂಬುವುದರ ಬಗ್ಗೆ ಮೊದಲು ಆಲಿಸಬೇಕೆಂದು ಉಪನ್ಯಾಸ ಮಾಡಿದರು.
ಎಸ್ ಆರ್ ಅಂಗಡಿ ಎಮ್ ಎಸ್ ಡಂಬಳ ಪದವಿ ಪೂರ್ವ ಮಹಾವಿದ್ಯಾಲಯ ಮುಖ್ಯೋಪಾಧ್ಯಾಯರು ಮುಂಡರಗಿ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಶಾಲಾ ಕಾಲೇಜುಗಳಲ್ಲಿ ನಡೆಯುವುದರಿಂದ ಯುವ ಜನರಿಗೆ ಅದರಿಂದ ಆಗುವ ದುಷ್ಟಪರಿಣಾಮಗಳನ್ನು ತಿಳಿದುಕೊಂಡು ಒಳ್ಳೆಯ ಜೀವನವನ್ನು ನಡೆಸಬಹುದು ಮತ್ತು ಇಂದಿನ ಆರೋಗ್ಯವಂತ ಯುವಜನರೇ ಮುಂದಿನ ಒಳ್ಳೆಯ ಪ್ರಜೆಗಳಾಗುವರು ಎಂದು ಹೇಳಿದರು.
ಎಮ್ ಎನ್ ಸಜ್ಜನರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಮುಂಡರಗಿ ಇವರು ವಹಿಸಿದ್ದರು. ಜೂನ್-26 ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನ ಬಾಹಿರ ಸಾಗಾಟ ವಿರೋಧಿ ಸಪ್ತಾಹ ದಿನಾಚರಣೆ ಮಾಡಲಾಗುತ್ತಿದೆ. ಈ ಆಚರಣೆಗೆ ಇದೀಗ-31ವರ್ಷ ತುಂಬಿದೆ ಒಟ್ಟು ಭಾರತದಲ್ಲಿ 7.32 ಕೋಟಿ ಜನ ಮದ್ಯ ಮತ್ತು ಇತರ ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ. ಅದರಲ್ಲಿ 87ಲಕ್ಷ ಜನ ಗಾಂಜಾ ವ್ಯಸನಿಗಳಿದ್ದಾರೆ ಮತ್ತು 20 ಲಕ್ಷಜನ ಅಫೀಮ್ವ್ಯಸನಗಳಿದ್ದಾರೆಗಳಿದ್ದಾರೆ. ಇಂತಹ ಮಾದಕ ವಸ್ತುಗಳ ಸೇವನೆಯಿಂದ ಹೆಚ್ಆಯ್ವಿ ಏಡ್ಸ್, ಹೆಪಾಟೈಟಿಸ್-ಬಿ, ಮನೋರೋಗ, ಮೂಛರ್ೆರೋಗ, ಸಂತಾನ ಹೀನತೆ, ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಗಳು, ಹಸಿವು ಮತ್ತು ನಿದ್ರೆಯಲ್ಲಿ ಎರುಪೇರು, ನಡಗುವಿಕೆ ಮಾನಸಿಕ ಖಿನ್ನತೆ ಈ ರೀತಿ ಆರೋಗ್ಯ ಸಮಸ್ಯಗಳು ಆಗುತ್ತವೆ. ಅದ್ದಕ್ಕಾಗಿ ಆಪ್ತ ಸಮಾಲೋಚನೆ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು.
ಪ್ರಬಂಧ ಸ್ಪಧರ್ೆಯಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಾದ ಕು.ಆಶಾಬೀ ನಧಾಪ ಪ್ರಥಮ ಬಹುಮಾನ-500=00ರೂ, ಕು. ಭಾಗೀರತಿ ಬದಾಮಿ ದ್ವಿತೀಯ ಬಹುಮಾನ-300=00ರೂ ಹಾಗೂ ತೃತೀಯ ಬಹುಮಾನ-200=00ರೂ ಬಹುಮಾನಗಳನ್ನು ಪಡೆದುಕೊಂಡರು. ಬಿ ಡಿ ಹಳ್ಳಿಗುಡಿ ಉಪನ್ಯಾಸಕರು ಇವರು ಸರ್ವರಿಗೂ ನಿರೂಪಣೆ ಮತ್ತು ಸ್ವಾಗತ ಕೊರಿದರು. ಎ ವಿ ಮೇಟಿ ಉಪನ್ಯಾಸಕರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ವಂದನೆಗಳನ್ನು ಕೋರಿದರು.