ಹಡಪದ ಅಪ್ಪಣ್ಣನವರು ಅತ್ಯಂತ ಪ್ರಭಾವಿ: ಶಾಸಕ ಪಾಟೀಲ

ಹಡಪದ ಅಪ್ಪಣ್ಣ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡುತ್ತಿರುವದು


ಲೋಕದರ್ಶನ ವರದಿ

ಇಂಡಿ 31: ಶರಣ ಹಡಪದ ಅಪ್ಪಣ್ಣನವರು ಬಸವೇಶ್ವರ ಅನುಭವ ಮಂಟಪದಲ್ಲಿ ತಮ್ಮ ವಚನಗಳ ಮೂಲಕ ಅತ್ಯಂತ ಪ್ರಭಾವಿಯಾಗಿದ್ದರು ಅವರ ಜ್ಞಾನವನ್ನು ಅರಿತ ಬಸವಣ್ಣನವರು ಅವರನ್ನು ತಮ್ಮ ಅಪ್ತ ಕಾರ್ಯದಶರ್ಿಯನ್ನಾಗಿ ಮಾಡಿಕೊಂಡರು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು

ಪಟ್ಟಣದ ಹಡಪದ ಅಪ್ಪಣ್ಣ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು   ವಿಜಯಪೂರ ಜಿಲ್ಲೆ ಶರಣರ ದಾರ್ಶನಿಕರ ಪುಣ್ಯಭೂಮಿಯಾಗಿದ್ದು ಭಂಥನಾಳದ ಸಂಗನಬಸವ ಶಿವಯೋಗಿಗಳು ಶೈಕ್ಷಣಿಕ ಕ್ರಾಂತಿಯನ್ನು ಮಾಡುವ ಮೂಲಕ  ಅಕ್ಷರದ ಹಸಿವನ್ನು ನೀಗಿಸಿದ್ದಾರೆ . ರಾಜ್ಯದಲ್ಲೇಡೆ ಅನೇಕ ಮಠ ಮಾನ್ಯಗಳು ಶಿಕ್ಷಣ ಸಂಸ್ಥೆಗಳು ಕಟ್ಟಿ ಬೆಳೆಸಿದ್ದಾರೆ. ಇಂದು ಸರಕಾರಗಳು ಮಾಡದೆ ಇರುವ ಅನೇಕ ಕಾರ್ಯಗಳು ಧಾಮರ್ಿಕ ಪುರುಷರು ಮಠ ಮಾನ್ಯಗಳು ಮಾಡುತ್ತಿವೆ . ಹಡಪದ ಸಮಾಜದ ಬಾಂಧವರು ಸರ್ವ ಸಮಾಜದೊಂದಿಗೆ ಒಳ್ಳೆ ಬಾಂಧ್ಯ ಹೊಂದಿದ್ದಾರೆ . ಈ ಸಮಾಜದ ಅನೇಕ ಗಣ್ಯರು ಸಾಹಿತ್ಯೆ ಕ್ಷೇತ್ರದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ರಾಜ್ಯದ ಮುಖ್ಯ ಮಂತ್ರಿಗಳು ಕೂಡಾ ಆಗಿದ್ದಾರೆ. ಈ ಸಮಾಜದ ಒಬ್ಬ ನಿಷ್ಠಾವಂತ ವ್ಯಕ್ತಿ ಅಪ್ಪಾಸಾಹೇಬ ನಾವಿ ನಮ್ಮ ಜೊತೆಗಿಲ್ಲ ಆದರೆ ಈ ಸಮಾಜದ ಬಗ್ಗೆ ಅಪಾರ ಕಳಕಳಿಹೊಂದಿದ್ದರು ಇಂತಹ ವ್ಯಕ್ತಿಯನ್ನು ನೆನಯಲೇಬೇಕು.ಯಾವುದೇ ಸಮಾಜ ಮುಂದೆ ಬರಬೇಕಾದರೆ ಶೈಕ್ಷಣಿಕ ಅಭಿವೃದ್ದಿಯಾದಾಗ ಮಾತ್ರ ಮುಂದೆ ಬರಲು ಸಾಧ್ಯ. ಸಮಾದ ವತಿಯಿಂದ ವಿಧ್ಯಾಸಂಸ್ಥೆ ಹುಟ್ಟು ಹಾಕಿರುವದು ಒಳ್ಳೆಯ ಬೇಳವಣಿಗೆಯಾಗಿದ್ದು ಇದರ ಅಭಿವೃದ್ದಿಗೆ ಎಲ್ಲರೂ ಸೇರಿ ಶ್ರಮಿಸೋಣ ಎಂದರು.