ಲೋಕದರ್ಶನ ವರದಿ
ಬೆಳಗಾವಿ 20: ವೃತ್ತಿ ರಂಗಭೂಮಿ ಒಂದು ಸಮಯದಲ್ಲಿ ಅತ್ಯುನ್ನತ ಸ್ಥಾನದಲ್ಲಿತ್ತು. ಚಿತ್ರರಂಗ ಪ್ರವೇಶ ಮಾಡಿ ರಂಗಭೂಮಿಯ ಸ್ಥಾನವನ್ನು ಕಸಿದುಕೊಂಡು ಬಿಟ್ಟಿತು. ನಾಟಕ ನೈಜವಾದರೆ ಸಿನಿಮಾ ಯಾಂತ್ರಿಕವಾದುದು. ನಾಟಕದ ಹಿಂದಿರುವ ಶ್ರಮ ಸಹಿಸದೆ ಸಿನಿಮಾದತ್ತ ವಾಲಿದರು. ಎಂದು ಹಿರಿಯ ಪತ್ರಕರ್ತ ಎಲ್.ಎಸ್ ಶಾಸ್ತ್ರಿ ಇಂದಿಲ್ಲಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಹಾಸ್ಯಕೂಟ ಹಾಗೂ ಸಾಹಿತ್ಯಭವನ ವಿಶ್ವಸ್ತ ಮಂಡಳಿಯವರು ಸಂಯುಕ್ತವಾಗಿ 'ಧರ್ಮದೇವತೆ" ಎಂಬ ಕೌಟುಂಬಿಕ ನಗೆನಾಟಕವನ್ನು ಹಮ್ಮಿಕೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಕಾರದಲ್ಲಿ ಹುಬ್ಬಳ್ಳಿಯ ಕನ್ನಡ ಕಲಾ ನಾಟ್ಯ ಸಂಘದವರು ಪ್ರದರ್ಶನ ನೀಡಿದ ಈ ನಾಟಕವನ್ನು ಉದ್ಘಾಟಿಸಿದ ಶಾಸ್ತ್ರಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಅವರು ಇಂದಿನ ನಾಟಕವನ್ನು ನಿದರ್ೇಶಿಸಿರುವ ಬಸವರಾಜ ಪಟ್ಟಣಶೆಟ್ಟಿಯವರದ್ದು ಹೋರಾಟದ ಬದುಕು. ತಮ್ಮ ಜೀವನವನ್ನೇ ರಂಗಭೂಮಿಗೆ ಮುಡಿಪಾಗಿಟ್ಟುರುವ ಪಟ್ಟಣಶೆಟ್ಟಿಯವರಿಗೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ. ಹಣಕಾಸಿನ ದೃಷ್ಟಿಯಿಂದಲೂ ಅಂದು ಇದ್ದಲ್ಲಿಯೇ ಇದ್ದಾರೆ. ಸರಕಾರ, ಅಕಾಡಮಿಗಳು ಅವರತ್ತ ನೋಡದಿರದುದು ಖೇದದ ಸಂಗತಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕನ್ನಡ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಅವರು ನಾನು ಬೇರೆ ಬೇರೆ ನಾಟಕಗಳಲ್ಲಿ ಅಭಿನಯಿಸಿದ್ದೇನ. ತಂಬಾಕು ತಿನ್ನದ ನಾನು ತಂಬಾಕು ತಿಂದಂತೆ ನಟಿಸಿ ಕೆಮ್ಮುವ ದೃಶ್ಯವೊಂದಿತ್ತು. ಅವಸರದಲ್ಲಿ ನಿಜವಾಗಲೂ ತಂಬಾಕು ತಿಂದು ಕೆಮ್ಮಿ ಕೆಮ್ಮಿ ಅಲ್ಲಿಯೇ ಉರುಳಿ ಬಿದ್ದಿದ್ದೆ. ನನ್ನ ಅಭಿನಯವನ್ನು ಅತಿಥಿಯಾಗಿ ಬಂದಿದ್ದ ಸಾಹಿತಿ ಎನ್ಕೆಯವರು ನೈಜ ಅಭಿನಯ ಎಂದು ಕೊಂಡಾಡಿದ್ದರು ಎಂದು ತಮ್ಮ ನಾಟಕದ ಅನುಭವವನ್ನು ಹಂಚಿಕೊಂಡು ನಗೆಯಲೆ ಎಬ್ಬಿಸಿದರು.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಯಲ್ಲಿ ಇಂದಿನ ದಿನಗಳಲ್ಲಿ ನಾಟಕಗಳನ್ನು ಆಡುವುದು ತುಂಬ ಕಷ್ಟದ ಕೆಲಸ. ಇಂಥ ಕಷ್ಟದ ಕೆಲಸವನ್ನು ಬಸವರಾಜ ಪಟ್ಟಣಶೆಟ್ಟಿ ಬೆನ್ನಿಗಂಟಿಸಿಕೊಂಡು ಹೊರಟಿದ್ದಾರೆ. ತನು, ಮನ ಅಷ್ಟೇ ಅಲ್ಲದೇ ಧನದಿಂದಲೂ ಇವರನ್ನು ಪ್ರೋತ್ಸಾಹಿಸಬೇಕಾದುದು ಅತ್ಯವಶ್ಯವಾಗಿದೆ ಎಂದು ಹೇಳಿದರು.
ನಿದರ್ೇಶಕ ಪಟ್ಟಶೆಟ್ಟಿ ಕಲಾವಿನ ಬೆಳೆಯಲು ಕೇವಲ ಯೋಗತೆ ಇದ್ದರೆ ಸಾಲದು ಯೋಗವೂ ಇರಬೇಕು. ನಾನು ರಂಗಭೂಮಿಗೆ ಪಟ್ಟ ಶ್ರಮಕ್ಕೆ ಸರಿಯಾದ ಪ್ರತಿಫಲ ಪಡೆಯುವ ಯೋಗ ಇದುವರೆಗೂ ಲಭಿಸಲಿಲ್ಲ ಎಂದು ತುಂಬ ನೋವಿನಿಂದ ಹೇಳಿದರು.
ಶ್ರೀಮತಿ ಸುನಿತಾ ಪಾಟೀಲ ಕೊಲ್ಲಾಪೂರೆ ಹಾಗೂ ಕನ್ನಡ ಕಲಾಸರಸ್ವತಿ ನಾಟ್ಯ ಸಂಘದ ಅಧ್ಯಕ್ಷೆ ಲಕ್ಷ್ಮೀ ದಾವಣಗೇರಿಯವರು ತಮ್ಮ ಅನಿಸಿಕೆಗಗಳನ್ನು ಹಂಚಿಕೊಂಡರು.
ಬಸವರಾಜ ಪಟ್ಟಣಶೆಟ್ಟಿ(ಬಸವರಾಜ), ಲಕ್ಷ್ಮೀ ದಾವಣಗೇರಿ(ಗುರುರಾಜ), ಗೀತಾ ಶೃಂಗೇರಿ(ಸರಸ್ವತಿ), ಲಕ್ಷ್ಮೀ ಹೊಸಪೇಟ(ರಾಧಾ), ಲಕ್ಷ್ಮೀ ಶಿಗ್ಗಾಂವಿ(ಪಂಡಿತ), ಭಾಗ್ಯಶ್ರೀ ಮಜ್ಜಿಗುಡ್ಡ(ಬಂಗಾರಿ), ಕೆ. ಸರೋಜಾ(ಗುಂಡ), ಪರಿಮಳಾ ಕಲಾವಂತ(ನಾಗರಾಜ) ಪಾತ್ರಗಳಲ್ಲಿ ಸುಂದರ ಅಭಿನಯ ನೀಡಿದರು. ಎಲ್ಲ ಪಾತ್ರಧಾರಿಗಳೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವನ್ನೊದಗಿಸಿದರು.. ರಾಜು ಶಿಗ್ಗಾಂವಿ ಹಾಗೂ ಸಾಮಂತ ಶಿಗ್ಗಾಂವಿ ಇವರ ಸಂಗೀತವಿತ್ತು. ಜಿ. ಎಸ್. ಸೋನಾರ ನಿರೂಪಿಸಿದರು.
***