ಮನುಷ್ಯ ಜೀವನದಲ್ಲಿ ಗುರಿಯೊಂದಿಗೆ ಯೋಗ್ಯ ಗುರುವಿನ ಮಾರ್ಗದರ್ಶನ

ಎಸ್.ಎಂ.ಕುಲಕಣರ್ಿ ದಂಪತಿಗಳಿಗೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಸನ್ಮಾನಿಸುತ್ತಿರುವುದು.

ಬೆಳಗಾವಿ


ಮನುಷ್ಯ ಜೀವನದಲ್ಲಿ ಗುರಿಯೊಂದಿಗೆ ಯೋಗ್ಯ ಗುರುವಿನ ಮಾರ್ಗದರ್ಶನ ಪ್ರಾಪ್ತರಾದರೆ ಅದ್ಭುತ ಶಕ್ತಿ ದೊರಕುವುದರಲ್ಲಿ ಅನುಮಾನವಿಲ್ಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.


ಸೋಮವಾರ ನಗರದ ಸಿಟಿ ಹಾಲ್ನಲ್ಲಿ ಎಂ.ಎಸ್.ಕುಲಕಣರ್ಿ ಅವರ ಅಮೃತ ಮಹೋತ್ಸವದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯನಿಗೆ ವಿದ್ಯೆ ಮತ್ತು ಸಂಪತ್ತನ್ನು ಗಳಿಸುವಾಗ ಸುಧೀಘ್ರವಾಗಿ ಬಾಳಿ ಬದುಕುತ್ತೇನೆ ಎಂಬ ಆಶಾದಾಯಕ ಭಾವನೆ ಇರಬೇಕು. ಕ್ರೀಯಾಶೀಲನಾಗಿರಬೇಕು. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಬದುಕಿನಲ್ಲಿ ಉಜ್ವಲ ಶ್ರೇಯಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.


ಧರ್ಮದ ವಿಚಾರ ಬಂದಾಗ ಯಾವ ಘಳಿಗೆಯಲ್ಲಿ ಮೃತ್ಯು ಆವರಿಸುತ್ತದೆ ಎಂಬ ಭೀತಿ ಇಟ್ಟುಕೊಂಡು ಧಮರ್ಾ ಚರಣೆ ಮಾಡಬೇಕೆಂದು ಅನುಭವಿಗಳು ಎಚ್ಚರಿಸಿದ್ದಾರೆ. ಅದರಂತೆ ಧರ್ಮದ ವಿಚಾರ ಬಂದಾಗ ಎಲ್ಲರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದರು.


ಸಾಧನೆಯಿಂದ ಮುಂದೊಂದು ದಿನ ಉನ್ನತ ಸ್ಥಾನಗಳಿಸಲು ಸುಲಭ ಸಾಧ್ಯವಾಗುತ್ತದೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುವಳೆಂಬ ಮಾತಿನಂತೆ ಎಸ್.ಎಂ. ಕುಲಕಣರ್ಿ ಅವರು ಪತ್ನಿ ಸುಶೀಲಾದೇವಿ ಅವರ ಸಹಕಾರ, ಪ್ರೋತ್ಸಾದಿಂದ ಉತ್ತಮ ದಾಂಪತ್ಯ ಜೀವನ ನಡೆಸಿದ ಕೀತರ್ಿ ಇವರದ್ದು, ಒಡಳ ಕುಡಿಗಳಾದ ಮಕ್ಕಳಿಗೆ ಯೋಗ್ಯ ಶಿಕ್ಷಣ ಮತ್ತು ಸಂಸ್ಕಾರ ಕೊಡುವುದರ ಜತೆಗೆ ಸುಖ ಜೀವನಕ್ಕೆ ಕಾರಣಿಭೂತರಾಗಿದ್ದಾರೆ. ಇಂದು ಅಮೃತ ಮಹೋತ್ಸವ ಆಚರಿಸಕೊಳ್ಳುತ್ತಿರುವ ಇವರು ಮುಂದೊಂದು ದಿನ ಜನ್ಮ ಶತಮಾನೋತ್ಸವ ಆಚರಿಸಕೊಳ್ಳುವ ಸೌಭಾಗ್ಯ ಪ್ರಾಪ್ತಿಯಾಗಲೆಂದು ಶ್ರೀಗಳು ಕುಲಕಣರ್ಿ ದಂಪತಿಗಳಿಗೆ ಶಾಲು, ಹೂ ಹಾರ ಹಾಕಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು.


ಕಟಕೋಳದ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚೌಡಯ್ಯನ ಪೀಠ ನಸಂಸ್ಥಾನದ ಮಠದ ಚಿತ್ತಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.