ರಾಮದುರ್ಗ 16: ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಸುಟ್ಟು ಕರಕಲಾದ ಘಟನೆ ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಅವರಾದಿ ಕ್ರಾಸ್ ಹತ್ತಿರ ಸಂಭವಿಸಿದೆ.
ಸತತ ಐದು ವರ್ಷಗಳಿಂದ ಬರಗಾಲ ಆವರಿಸಿದ್ದು, ದನಕರುಗಳಿಗೆ ಸಂಗ್ರಹಿಸಿಟ್ಟ 20 ಟ್ರ್ಯಾಕ್ಟರನಷ್ಟು ಮೂರು ಬಣವಿ ಬಿಳಿ ಜೋಳದ ಮೇವು, ಎರಡು ಬಣವಿ ಶೇಂಗಾದ ಹೊಟ್ಟು, ಗೋದಿ ಹೊಟ್ಟಿನ ಎರಡು ಮತ್ತು ಗೋವಿನ ಜೋಳದ ಹೊಟ್ಟಿನ ಬಣವಿ ಸೇರಿ ಒಟ್ಟು ಏಳು ಬಣಿವೆಗಳು ಸುಟ್ಟು ಭಸ್ಮವಾಗಿವೆ. ಚನಬಸಪ್ಪ ಶಿ.ದೊಡ್ಡಗಾಣಿಗೇರ, ಬನಪ್ಪ ಶಿ. ದೊಡ್ಡಗಾಣಿಗೇರ, ಕಾಶಪ್ಪ ಶಂ. ಗಾಣಿಗೇರ, ಶಿವಮೂತರ್ಿ ಕಾ. ಗಾಣಿಗೇರ ಹಾಗೂ ಬಸವ್ವ ಕಾ.ಗಾಣಿಗೇರ ಅವರಿಗೆ ಸೇರಿದ್ದಾಗಿವೆ.
ಬೆಂಕಿ ಹತ್ತಿ ಉರಿಯುತ್ತಿವುದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ಪಕ್ಕದಲ್ಲಿದ್ದ ದನಕರುಗಳನ್ನು ಸ್ಥಳಾಂತರಿಸಿ ಅವುಗಳ ಪ್ರಾಣ ರಕ್ಷಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ರಾಮದುರ್ಗ ಅಗ್ನಿಶಾಮಕ ದಳದ ಎರಡು ವಾಹನಗಳ ಸಿಬ್ಬಂದಿ ಬೆಂಕಿ ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಶಾಸಕರು, ಶ್ರೀಗಳ ಭೇಟಿ...
ಅಗ್ನಿ ಅವಗಡದ ಸುದ್ದಿ ತಿಳಿದ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಘಟನಾ ಸ್ಥಳಕ್ಕೆ ಆಗಮಿಸಿ ನೊಂದ ಕುಟುಂಬದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಧಾನಪಡಿಸಿದರು. ಕೃಷಿ ಇಲಾಖೆ ಮತ್ತು ತಹಶಿಲ್ದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬರಗಾಲಕ್ಕೆ ಸಂಗ್ರಹಿಸಿಟ್ಟ ಮೇವಿನೊಳಗೆ ಒಂದು ಟ್ರ್ಯಾಕ್ಟರ್ ಮೇವಿನ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಪ್ರತಿ ರೈತಕುಟುಂಬಕ್ಕೆ 20 ಸಾವಿರ ರೂ.ಗಳ ಪರಿಹಾರಧನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಅವರಾದಿ ಫಲಾಹಾರೇಶ್ವರ ಮಠದ ಶಿವಮೂತರ್ಿ ಸ್ವಾಮಿಜಿಗಳು ಸಹ ಆಗಮಿಸಿ ನೊಂದ ರೈತರನ್ನು ಸಮಾಧಾನಪಡಿಸಿದರು.