ಗೋಕಾಕ: ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಕಾಗಲ ಚಾಲನೆ

ಗೋಕಾಕ 27: 2019-20ನೇ ಸಾಲಿನ ಮುಂಗಾರು ಹಂಗಾಮಿನ ಗೋಕಾಕ ಹೊಬಳಿಯ ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥಕ್ಕೆ ಸೋಮವಾರದಂದು ಜಿಪಂ ಸದಸ್ಯರಾದ ಟಿ ಆರ್ ಕಾಗಲ ಚಾಲನೆ ನೀಡಿದರು.

   ಕೃಷಿ ಹಾಗೂ ಕೃಷಿಗೆ ಪೂರಕ ಇಲಾಖೆಗಳಾದ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ದಿ.27 ಹಾಗೂ 28 ಎರಡು ದಿನಗಳ ಕಾಲ ಗೋಕಾಕ ಹೊಬಳಿಯ ಎಲ್ಲ ಗ್ರಾಮ ಪಂಚಾಯತಗಳಿಗೆ ಸಂಚರಿಸಿ ರೈತರಿಗೆ ಕೃಷಿ ಉತ್ಪಾದನೆ ಹೆಚ್ಚಿಸುವ ಹಾಗೂ ಆಥರ್ಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಲಹೆ ನೀಡುವದಲ್ಲದೆ ವಿವಿಧ ಇಲಾಖೆಗಳಲ್ಲಿ ಸೀಗುವ ಸಹಾಯ ಸವಲತ್ತುಗಳ ಕುರಿತು ತಿಳಿಯ ಪಡಿಸಲಾಗುವದು ಎಂದ್ಸುಹಾಯಕ ಕೃಷಿ ನಿದರ್ೇಶಕ ಎಮ್ ಎಮ್ ನದಾಫ್ ತಿಳಿಸಿದರು.

   ಕಾಮರ್ಿಕ ಮುಖಂಡ ಅಂಬಿರಾವ ಪಾಟೀಲ, ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಕ, ಮುಖಂಡರಾದ ಶಿವಾನಂದ ಹತ್ತಿ, ಕಾಂತು ಎತ್ತಿನಮನಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ ಅನೇಕರು ಇದ್ದರು.