ಗೋಕಾಕ: ಯುವಕರು ಸಮ್ಮೇಳನದಲ್ಲಿ ಪಾಲ್ಗೊಂಡು ಇತಿಹಾಸ ಸೃಷ್ಟಿಸುವಂತೆ ಕರೆ

ಲೋಕದರ್ಶನ ವರದಿ

ಗೋಕಾಕ 18: ನೂರಾರು ಸಾಹಿತಿಗಳನ್ನು ಸೃಷ್ಟಿಸಿದ ಗೋಕಾಕ ನಾಡಿನಲ್ಲಿ 13ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಯುವಕರನ್ನು ಸಮ್ಮೇಳನದಲ್ಲಿ ಪಾಲ್ಗೊಂಡು ಇತಿಹಾಸ ಸೃಷ್ಟಿಸುವಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ ಜಾರಕಿಹೊಳಿ ಕರೆ ನೀಡಿದರು.

   ಅವರು, ಸೋಮವಾರದಂದು ನಗರದ ಕೆಎಲ್ಇ ಸಂಸ್ಥೆಯ ಮಹದೇವಪ್ಪಣ್ಣ ಮುನ್ನವಳ್ಳಿ ಆಂಗ್ಲ ಮಾಧ್ಯಮ ಶಾಲೆಯ ಆವರದಣಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

   ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರಾದ ಗೋಕಾವಿ ನಾಡಿನಲ್ಲಿ 13ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸುವಂತೆ ತಿಳಿಸಿದರು.

  ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಮಾತನಾಡಿ, ನಗರಸಭೆ ಎಲ್ಲ ವಾಡರ್ುಗಳಲ್ಲಿ ಸಮ್ಮೇಳನದ ಬಗ್ಗೆ ಜಾಗೃತಿ ಪಥಸಂಚಲನ ನಡೆಸುವಂತೆ ಸಲಹೆ ನೀಡಿದರು.

   ಮುಖಂಡ ಅಶೋಕ ಪೂಜಾರಿ ಮಾತನಾಡಿ, ರಾಷ್ಟ್ರಕ್ಕೆ ಹೆಸರುವಾಸಿ ಸಾಹಿತಿಗಳು, ಕಲಾವಿದರನ್ನು ನೀಡಿದ ಗೋಕಾಕ ನಾಡಿನಲ್ಲಿ ವ್ಯವಸ್ಥಿತ ಹಾಗೂ ಸಂಘಟಿತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

  ವೇದಿಕೆಯ ಮೇಲೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದಶರ್ಿ ಜ್ಯೋತಿ ಬದಾಮಿ, ಕಸಾಪ ತಾಲೂಕ ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ, ಕಸಾಪ ಹುಕ್ಕೇರಿ ತಾಲೂಕ ಘಟಕದ ಅಧ್ಯಕ್ಷ ಪ್ರಕಾಶ ದೇಶಪಾಂಡೆ, ಸುನಂದಾ ಎಮ್ಮಿ, ಸಿದ್ದಲಿಂಗ ದಳವಾಯಿ, ಜಯಾನಂದ ಮುನವಳ್ಳಿ, ಬಸಗೌಡ ಪಾಟೀಲ, ಜಯಾನಂದ ಮಾದರ, ರಜನಿ ಜಿರಗ್ಯಾಳ, ಪೌರಾಯುಕ್ತ ವಿಠ್ಠಲ ತಡಸಲೂರ ಇದ್ದರು.