ಮುಂಡಗೋಡ : ಅರಣ್ಯ ರಕ್ಷಣೆಯ ಕಾರ್ಯ ಕೇವಲ ಇಲಾಖೆಗೆ ಸಂಭಂದಿಸಿದ್ದಲ್ಲಾ ಸಾರ್ವಜನಿಕರು ಇದಕ್ಕೆ ಕೈ ಜೋಡಿಸಿದರೆ ಅರಣ್ಯ ನಾಶವಾಗುವುದು ತಪ್ಪುತ್ತದೆ ಎಂದು ಗುಂಜಾವತಿ ಉಪವಲಯ ಅರಣ್ಯಾಧಿಕಾರಿ ಆನಂದ ಪೂಜಾರ ಹೇಳಿದರು
ಅವರು ಗುಂಜಾವತಿ ಸರಕಾರಿ ಉದರ್ು ಪ್ರಾಥಮಿಕ ಶಾಲೆಯಲ್ಲಿ ವನಮೋಹತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದರು. ಅರಣ್ಯ ನಾಶದಿಮದ ಪರಿಸರದ ಮೇಲೆ ಅಸಮತೋಲನ ಉಂಟಾಗಿ ಮಳೆ ಕಡಿಮೆ ಯಾಗಿ ಬರಗಾಲವನ್ನು ಎದುರಿಸಬೇಕಾಗುತ್ತದೆ. ಕಾಡಿದ್ದರೆ ನಾಡು. ಅರಣ್ಯ ನಾಶವಾಗುವುದನ್ನು ಎಲ್ಲರೂ ತಪ್ಪಿಸಬೇಕು ಅರಣ್ಯ ಚೋರರನ್ನು ಗುರುತಿಸುವ ಕಾರ್ಯಮಾಡಿ ಇಲಾಖೆಗೆ ತಿಳಿಸಬೇಕು .
ಹೆಚ್ಚುಹೆಚ್ಚು ಗಿಡಮರಗಳನ್ನು ಬೆಳೆಯುವ ಎಲ್ಲರೂ ಪ್ರತಿಜ್ಞೆ ಮಾಡಬೇಕು. ಆದ್ದರಿಂದ ನಾವೇಲ್ಲರೂ ಸೇರಿ ಒಟ್ಟಾಗಿ ಮನೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆಯ ಕೂಡ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸಿ ಪದನ್ನೋತಿ ಹೊಂದಿ ವಗರ್ಾವಣೆಗೊಂಡ ಆನಂದ ಎಸ್ ಗುದುಮಿ ಯವರಿಗೆ ಸನ್ಮಾಸಿ ಬಿಳ್ಕೋಡಲಾಯಿತು
ಈ ಸಂದರ್ಭದಲ್ಲಿ ಗುಂಜಾವಂತಿ ಗ್ರಾಮದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು ವಿಧ್ಯಾಥರ್ಿಗಳು ಹಾಜರಿದ್ದರು.