ಆಹಾರ ಕಲಬೆರಕೆಗೆ ಜೀವಾವಧಿ ಶಿಕ್ಷೆ

ಮುಂಬೈ, ನ.22- ಆಹಾರ ಕಲಬೆರಕೆ ಮಾಡುವುದು ಒಂದು ಗಂಭೀರ ಅಪರಾಧ.ಈ ಕೃತ್ಯದಲ್ಲಿ ತೊಡಗಿದವರನ್ನು ಜಾಮೀನು ರಹಿತ ಅಪರಾಧಿಗಳೆಂದು ಪರಿಗಣಿಸಲಾಗುವುದು ಮತ್ತು ಜೀವಾವಧಿ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಮಹಾರಾಷ್ಟ್ರ ಸಕರ್ಾರ ತಿಳಿಸಿದೆ. ವಿಧಾನ ಪರಿಷತ್ನಲ್ಲಿಂದು ಈ ಕುರಿತ ಮಸೂದೆ ಜಾರಿಗೊಳಿಸುವುದಾಗಿ ಪ್ರಕಟಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗಿರೀಶ್ ಬಾಪಟ್, ರಾಜ್ಯದಲ್ಲಿ ಹೆಚ್ಚುತ್ತಿರುವ ಆಹಾರ ಕಲಬೆರಕೆ ದಂಧೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆಹಾರ ಕಲಬೆರಕೆ ಒಂದು ಜಾಮೀನು ರಹಿತ ಅಪರಾಧ. ಇದರಲ್ಲಿ ತೊಡಗುವವರಿಗೆ ಜೀವಾವಧಿ ಶಿಕ್ಷೆ.