ರೈತರಿಗೆ ಸೂಕ್ತವಾದ ಪರಿಹಾರಧನ ಪ್ರಾಮಾಣಿಕವಾಗಿ ನೀಡಲಾಗುವುದ್ದು: ಡಿಸಿ ಎಸ್ ಜಿಯಾವುಲ್ಲಾ

ಹಾರೂಗೇರಿ,04: ನೂತನವಾಗಿ ನಿಮರ್ಾಣವಾಗುತ್ತಿರುವ ಕುಡಚಿ ಬಾಗಲಕೋಟಿ ರೈಲು ಮಾರ್ಗದ ಸವರ್ೆ ಮಾಡುವ ಸಂದರ್ಭದಲ್ಲಿ ಕೆಲವೊಂದು ಕೊಳವೆ ಬಾವಿ ಹಾಗೂ ತೆರೆದ ಬಾವಿಗಳನ್ನು ಬಿಟ್ಟಿರುವುದು ಮತ್ತು ರೈತರು ನೀರಾವರಿ ಪೈಪ್ ಲೈನಗಳ ಹಾನಿ ಯಾಗುವುದ್ದನ್ನು ಸಿಂಮೇಟ್ ಪೈಪ್ ಮರು ಜೋಡಣೆ ಮಾಡುವ ಕುರಿತು ಹಾಗೂ ರೈತ ಭೂಮಿಯು ನೂತನ ರೈಲು ಮಾರ್ಗದಲ್ಲಿ ಹೋಗಿದವರಿಗೆ ಸೂಕ್ತವಾದ ಪರಿಹಾರ ಮತ್ತು ಮನೆ ಭೂಮಿ ಸಂಪೂರ್ಣವಾಗಿ ಕಳೆದುಕೊಂಡ ಸಂತ್ರಸéರಿಗೆ ಸರಕಾರಿ ನೌಕರಿ ಬಗ್ಗೆ ಪ್ರಾಸ್ತಾವಣೆ ನೀಡಿ ರೈಲ್ವೆ ಇಲಾಖೆಯ ಗಮನಕ್ಕೆ ತರಲಾಗುವುದ್ದು. ರೈತರು ನೆರವಾಗಿ ಸಮಸ್ಯೆಗಳು ಬಂದಾಗ ಜಿಲ್ಲಾಧಿಕಾರಿ ಹಾಗೂ ಉಪವಿಭಾಗ ಕಾಯರ್ಾಲಯ ಅಧಿಕಾರಿಗಳನ್ನು ಸಂಪಕರ್ಿಸಬೇಕು ಯಾವುದೇ ಮಧ್ಯವತರ್ಿಗಳ ಕಡೆಗೆ ಹೋಗಿ ಮೋಸ ಹೋಗಬಾರದ್ದೆಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಕರೆ ನೀಡಿದರು.

ಅವರು ಪಟ್ಟಣದ ಜೈನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕುಡಚಿ-ಬಾಗಲಕೋಟಿ ಹೊಸ ಬ್ರಾಡ್ರೇಜ್ ರೈಲು ಯೋಜನೆ ಸಾಮಾಜಿಕ ಪರಿಣಾಮ ನಿಧರ್ಾಣಾ ಕುರಿತು ಅನುಮೋಧನೆ ಬಗ್ಗೆ ಗ್ರಾಮ ಸಭೆಯಲ್ಲಿ ಮಾತನಾಡುತ್ತಾ ಭೂಮಿ ಕಳೆದುಕೊಂಡ ರೈತರಿಗೆ ಸಕರ್ಾರದಿಂದ ಏಷ್ಟು ಪರಿಹಾರ ನೀಡಬೇಕೊ ಅಷ್ಟು ನೀಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ರೈತರಿಗೆ ಪರಿಹಾರ ಕಡಿಮೆಯಾಗದ ರೀತಿಯಲ್ಲಿ ನೋಡಿಕೊಂಡು ನೀಡಲಾಗುವುದ್ದು. ನೂತನ ರೈಲು ಮಾರ್ಗವು ನಮ್ಮ ಜಿಲ್ಲೆಯಿಂದ ಹೋಗುತ್ತಿರುವುದು ತುಂಬಾ ಸಂತೋಷದ ಸಂಗತಿ ಈ ಮಾರ್ಗದಿಂದ ನಮ್ಮ ಸರಕು ಸಾಗಾಟ ತುಂಬಾ ಅನಕೂಲವಾಗುತ್ತದೆ ಆ ನೀಟಿನಲಿ ರೈತರು ಸಹಾಯ ಸಹಕಾರ ತುಂಬಾ ಅವಶ್ಯವಾಗಿದ್ದೆಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಹೇಳಿದರು.

ನೂತನ ರೈಲು ಮಾರ್ಗದ ಯೋಜನೆಯಿಂದ ಭಾದಿವಿತರಾಗುವ ಕುಟುಂಬಗಳ ಸಂಖ್ಯೆ 348 ಎಂದು ಅಂದಾಜಿಸಲಾಗಿದೆ ಈ ಕುಟುಂಬಗಳ ಪೈಕಿ ಸುಮಾರು 192 ಕುಟುಂಬಗಳು ತಮ್ಮ ಜಮೀಣಿಗೆ ಹೊಂದಿಕೊಂಡತ್ತಿರುವ ಕೊಳವೆ ಬಾವಿಗಳು, ಮರಗಳು, ಗೃಹ ಸಂಕೀರ್ಣಗಳು, ಅನೇಕ ಇತರ ರಚನೆಗಳು ಕಳೆದುಕೊಳ್ಳುತ್ತಿದ್ದಾರೆ. ಯೋಜನೆಯಿಂದ ಭಾದಿತವಾಗುವ ವೈಯಕ್ತಿಕ ಸ್ವತ್ತುಗಳು ಹಚಿಚಿನ ಮನೆ 66, ಗುಡಿಸಲು ಮನೆ 8, ಕೊಳವೆ ಬಾವಿ 126, ತೆರೆದ ಬಾವಿ 42, ಕೃಷಿ ಹೊಂಡ 2, ದನದ ಕೊಟ್ಟಿಗೆ 32, ಪಂಪ ಮನೆ 19, ವಿದ್ಯುತ್ ಪರಿವರ್ತಕ 18, ವಿದ್ಯುತ್ ಕಂಬಗಳು 123, ಶೌಚಾಲಯಗಳು 7, ತಂತಿಬೆಲಿ 1, ನೀರಿನ ಕಟ್ಟೆ 5, ಪೈಪ್ ಲೈನ್ 63, ಹನಿ ನೀರಾವರಿ ಡಿಪ್ 1, ಸಮಾದಿ 1, ಗೋಬರ ಗ್ಯಾಸ್ 3, ಕೋಳಿ ಫಾರಂ 2 ಹೀಗೆ ವಿವಿಧ ರೈತರು ಹಾನಿಯಾಗುತ್ತಿರುವ ಬಗ್ಗೆ ಜಿ.ಜಿ.ವ್ಹಿ. ಎಜುಕೇಸ್ ಮತ್ತು ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಜಿ.ಜಿ.ವ್ಹಿ ಎಚಿಟರ್ ಪ್ರೇಸಸ್ ಏಜೆನ್ಸಿಯಾಗಿ ಪ್ರಾಸ್ತಾವಿಕವಾಗಿ ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ಇನ್ನೂ ಉಳಿದ ಹೋಗಿರುವ ಬಗ್ಗೆ ಆಕ್ಷೇಪಣೆವಿದ್ದರು ನೆರೆವಾಗಿ ಇಲಾಖೆಗೆ ಬಂದು ತಿಳಿಸುಬೇಕು ಎಂದು ಹೇಳಿದರು.

ಹಾರೂಗೇರಿ ಪಟ್ಟಣದ ಮತ್ತು ನಿಲಜಿ ಗ್ರಾಮದ ರೈತರು ಭೂಸ್ವಾದೀನ ಒಳಪಟ್ಟ ಜಮೀನಿನ ಕ್ಷೇತ್ರದಲ್ಲಿ ಅಳವಡಿಸಿದ ಪೈಪ ಲಾಯಿನ ಮೌಲ್ಯ ಮಾಪನ ನೀಡಬೇಕು, ಭೂಸ್ವಾದೀನ ಒಳಪಟ್ಟ ಜಮೀನಿನ ಕ್ಷೇತ್ರದಲ್ಲಿ ಹೊಸ ಪೈಪ್ ಲಾಯಿನ ಮಾಡಲು ಅನುಕೂಲ ಮಾಡಬೇಕು, ಇನ್ನುಳಿದ ಕಡಿಮೆ ಕ್ಷೇತ್ರ ಜಮೀನವನ್ನು ಭೂ ಸ್ವಾದೀನಪಡಿಸಿ ಪರಿಹಾರ ಧನ ನೀಡಬೇಕು, ರೈಲ್ವೇ ಲೈನ್ ಪಕ್ಕದ ಜಮೀನಗಳಿಗೆ ಹೋಗಿ ಬರಲು ರಸ್ತೆ ನಿಮರ್ಾಣ ಹಾಗೂ ವಿದ್ಯುತ್ ಸಂಪರ್ಕ ಬದಗಿಸಿ ಕೊಡಬೇಕು, ಮುಖ್ಯವಾಗಿ ಭೂಮಾಲಿಕ ಅಥವಾ ವಾರಸದಾರರಿಗೆ ಸರಕಾರಿ ನೌಕರಿ ಅನುಕೂಲ ಮಾಡಿ ಕೊಡಬೇಕು ನೂರಾರು ರೈತರು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೊರಿಕೊಂಡು ಮನವಿಯನ್ನು ನೀಡಿದರು.

ಕುಡಚಿ ಗ್ರಾಮೀಣ ಭಾಗದಲ್ಲಿ ಒಟ್ಟು 39 ಎಕರೆ ವಿಸ್ತೀರ್ಣ ಸವರ್ೆ ಮಾಡಿದು ಅದರಲ್ಲಿ ಕೇಲವೊಂದು ಕೊಳವೆ ಭಾವಿ ಹಾಗೂ ವಿದ್ಯುತ್ ಪರಿವತನೆಗಳು ಕೈ ಬಿಟ್ಟಿದ್ದಾರೆ ಅವುಗಳ ಸೇರ್ಪಡೆಯಾಗಬೇಕು ನೂತನ ನಿಮರ್ಾಣವಾಗುತ್ತಿರು ರೈಲು ಮಾರ್ಗದ ಸವರ್ೆ ಕಾರ್ಯವನ್ನು ಚನ್ನಾಗಿ ಮಾಡಿಲ್ಲ ಹೀಗಾಗಿ ಅದು ಇನ್ನೋಮ್ಮ ಸವರ್ೆ ಮಾಡಿಸಬೇಕೆಂದು ಕುಡಚಿ ಗ್ರಾಮೀಣ ಭಾಗದ ರೈತರು ಒತ್ತಾಯಿಸಿದ್ದರು.

ಈ ಭೂಸ್ವಾದೀನ ಗ್ರಾಮ ಸಭೆಯಲ್ಲಿ ಕುಡಚಿ ಗ್ರಾಮೀಣ, ಸುಟ್ಟಟ್ಟಿ, ನಿಲಜಿ, ಅಲಖನೂರ, ಬಡಬ್ಯಾಕೂಡ, ಹಾರೂಗೇರಿ, ಯಬರಟ್ಟಿ ಗ್ರಾಮದ ರೈತರು ಭಾಗವಹಿಸಿ ಅವರುಗಳ ಕುಂದುಕೊರತೆಗಳು ಜಿಲ್ಲಾಧಿಕಾರಿಗಳು ಮುಂದೆ ತಮ್ಮ ನೋವನ್ನು ಹಚ್ಚಿಕೊಂಡು ಅದಕ್ಕೆ ಸೂಕ್ತವಾದ ಪರಿಹಾರವನ್ನು ನೀಡಬೇಕೆಂದರು.

ಭೂಸ್ವಾದೀನ ಕಳೆದುಕೊಂಡ ಪ್ರತಿಯೊಬ್ಬ ರೈತರಿಗೆ ಚಿಕ್ಕೋಡಿ ಉಪವಿಭಾಗಧಿಕಾರಿ ಗೀತಾ ಕೌವಲಗಿ ಅವರು ಮಾಹಿತಿಯನ್ನು ನೀಡಿ ಕೈ ತಪ್ಪಿಯೊಂದ ಹೆಸರುಗಳುನ್ನು ಪುಣ ಸವರ್ೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದ್ದಾಗಿ ಹೇಳಿದರು.

ಈ ಸಂದರ್ಭದಲ್ಲಿ ರೈಲು ಏಜೇನ್ಸಿಯರ ಪವನ ವಿಣಾ, ಸಿ.ಎಚ್. ಇಲಿಶಾ, ಪುರಸಭೆ ಅಧ್ಯಕ್ಷ ಶ್ರೀಮತಿ ಕಲಾವತಿ ಬಾಬುರಾವ ನಡೋಣಿ, ಉಪಾಧ್ಯಕ್ಷ ಮುತ್ತಪ್ಪ ಗಸ್ತಿ, ಮುಖ್ಯಾಧಿಕಾರಿ ಜಿ.ವ್ಹಿ ಹಣ್ಣಿಕೇರಿ, ಉಪ ತಹಶೀಲ್ದಾರ ಬಿ.ಎಸ್. ಮಗಸೋಳಿ, ಬಿ.ಎಸ್. ಕುಲಕಣರ್ಿ ಕಂದಾಯ ನಿರೀಕ್ಷೇಕರು, ನಿರಜನ ನಕ್ಕರಗುದ್ದಿ, ಯಬ್ಬರಟ್ಟಿ ಗ್ರಾಮ ಪಂ ಅಧ್ಯಕ್ಷ ಶ್ರೀಮತಿ ಮಹಾದೇವಿ ಗಾಣಗೇರ, ಮಾಯಗೌಡ ಪಾಟೀಲ, ಶಂಕರ ಕಾಂಬಳೆ ಅಲಖನೂರ ಗ್ರಾಮ ಪಂ ಅಧ್ಯಕ್ಷರು, ಈರಗೌಡಾ ಪಾಟೀಲ, ಬಸನಗೌಡಾ ಪಾಟೀಲ,  ಗ್ರಾಮಲೇಕಾಧಿಕಾರಿ ನಿಂರಜನ ನಕ್ಕರಗುದ್ದಿ, ಪುರಸಭೆ ಸದಸ್ಯ ಸಂತೋಷ ಸಿಂಗಾಡಿ, ಪಿಡಿಓ ಉಮೇಶ ಪೋಳ, ಅಲಖನೂರ ಪಿಡಿಓ ಸುನೀಲ ನಾಯಿಕ ಹಾಗೂ ರೈತರು ಉಪಸ್ಥಿತರಿದ್ದರು.

ಎಎಸ್ಐ ಬಿ.ಎಚ್. ಬೆಸನಾಯಕ ಹಾಗೂ ಆಯ್.ಎಮ್. ದುಂದಮನಿ. ಮುಖ್ಯಪೇದೆಗಳಾದ ಆರ್.ಬಿ.ನಾಯಿಕ, ಎಚ್.ವ್ಹಿ.ಭೋಸಲೆ, ವಿಷ್ಣು ಗಾಯಕವಾಡ ಸೂಕ್ತವಾದ ಬಂದೋಬಸ್ತಿಯನ್ನು ಕೈಗೊಂಡಿದರು.

ರಾಯಬಾಗ ತಹಶೀಲ್ದಾರ ಬಸಪ್ಪ ಪೂಜೇರಿ ಸ್ವಾಗತಿಸಿ ಕಾರ್ಯಕ್ರಮವನ್ನು ವಂದಿಸಿದರು.