ಗುರುಗ್ರಾಮ: ಕುಂಡ್ಲಿ - ಮನೆಸರ್-ಪಲ್ವಾಲ್ ಎಕ್ಸ್ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿ ಸಂಚಾರಕ್ಕೆ ಮುಕ್ತವಾಗಿಸಿದರು.
ಈ ವೇಳೆ ಮಾತನಾಡಿದ ಮೋದಿ, ಈ ಹಿಂದಿನ ಸಕರ್ಾರ ವಿಳಂಬ ನೀತಿಯಿಂದ ಇಷ್ಟೊಂದು ತಡವಾಗಿದೆ. ಎಂಟರಿಂದ ಒಂಭತ್ತು ವರ್ಷಗಳ ಹಿಂದೆಯೇ ಈ ಹೈವೇ ಜನತೆಯ ಬಳಕೆಗೆ ದೊರೆಯಬೇಕಿತ್ತು ಎಂದು ಟೀಕಿಸಿದ್ದಾರೆ.
136 ಕಿ.ಮೀ ಉದ್ದದ ಕೆಎಂಪಿ ಎಕ್ಸ್ಪ್ರೆಸ್ವೇಯನ್ನು ಹರಿಯಾಣ ಸಕರ್ಾರ ನಿಮರ್ಿಸಿದೆ. ಈ ಹೈವೇ ನಿಮರ್ಾಣದ ಒಟ್ಟಾರೆ ಖರ್ಚನ್ನು ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶ 50:25:25 ಪ್ರಮಾಣದಲ್ಲಿ ಭರಿಸಿದೆ.
ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಎಕ್ಸ್ಪ್ರೆಸ್ವೇಯನ್ನು ನಿಮರ್ಿಸಲಾಗಿದೆ. ಈ ಮೂಲಕ ರಾಷ್ಟ್ರರಾಜಧಾನಿಯ ಟ್ರಾಫಿಕ್ ಕೊಂಚ ಮಟ್ಟಿಗೆ ತಗ್ಗಲಿದೆ ಎಂದು ಅಂದಾಜಿಸಲಾಗಿದೆ. 2006ರಲ್ಲಿ ಆರಂಭವಾದ ನಿಮರ್ಾಣ ಕಾರ್ಯ 2009ರಲ್ಲಿ ಮುಕ್ತಾಯವಾಗಬೇಕಿತ್ತು. 15 ವರ್ಷದ ಬಳಿಕ ಹಲವಾರು ಬಾರಿ ಗಡುವು ತಪ್ಪಿಸಿ ಕೊನೆಗೂ ಸಂಚಾರ ಮುಕ್ತವಾಗಿದೆ.