ನಾಡು-ನುಡಿ ರಕ್ಷಣೆಗೆ ಪತ್ರಿಯೊಬ್ಬರು ಮುಂದಾಗಲಿ: ಬಾಳಾಸಾಹೇಬ ಲೋಕಾಪೂರ.

ಅಥಣಿ  06: ನಾಡು ನುಡಿಗೆ ಧಕ್ಕೆ ಬಂದಾಗ ಸಾಹಿತಿ, ಲೇಖಕರಾದಿಯಾಗಿ ಪ್ರತಿಯೊಬ್ಬರು ತಮ್ಮ ಬದ್ಧತೆಯನ್ನು ತೋರಬೇಕು ಅಂದಲ್ಲಿ ಮಾತ್ರ ಕನ್ನಡ ಕನ್ನಡಿಸುವುದು. ನಾಡು ನುಡಿ ಸಂಸ್ಕೃತಿಯ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರೂ, ಖ್ಯಾತ ಕಾದಂಬರಿಕಾರರೂ ಆದ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.

ಇಲ್ಲಿಯ ಸಿದ್ಧೇಶ್ವರ ಮೋಫತ್ ವಾಚನಾಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಥಣಿ ಘಟಕದಿಂದ ಕ.ಸಾ.ಪ 105 ನೇ ಸಂಸ್ಥಾಪನ ದಿನಾಚರಣೆ ಸಮಾರಂಭದ ಉದ್ಘಾಟಕರಾಗಿ ಆಗಮಿಸಿ ಕನ್ನಡಾಂಬೆಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಮೇಲಿನಂತೆ ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ರಬಕವಿಯ ಕನ್ನಡ ಉಪನ್ಯಾಸಕರು ಜಾನಪದ ಹಾಡುಗಾರರು ಆದ ಪ್ರೊ. ಶ್ರೀಕಾಂತ ಗುರುರಾಜ ಕೆಂಧೂಳಿ ಅವರು ``ಜನಪದ ಅಂದು-ಇಂದು'' ಕುರಿತು ಮಾತನಾಡಿ, ಜನಪದ ತುಂಬ ಹರವಾದ ಅರ್ಥವುಳ್ಳದ್ದು, ಅದು ಅನುಭಾವದ ಅನುಭೂತಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಜಿಕ ಕಾರ್ಯಕರ್ತ, ರಾಜಕೀಯ ಮುಖಂಡ ಗಜಾನನ ಮಂಗಸೂಳಿಯವರು ಅಥಣಿ ತಾಲೂಕಿನ ಕನ್ನಡ ಕಾರ್ಯಕ್ಕೆ ಕನ್ನಡ ಭವನದ ಅವಶ್ಯಕತೆ ಇದೆ ಅದಕ್ಕಾಗಿ ಸ್ಥಳ ಕೊಡಿಸುವ ಭರವಸೆಯನ್ನು ನೀಡಿದರು. 

ಅಧ್ಯಕ್ಷತೆಯನ್ನು ಕಸಾಪ ಗೌರವ ಅಧ್ಯಕ್ಷರಾದ ಡಾ. ಮಲ್ಲಿಕಾಜರ್ುನ ಹಂಜಿಯವರು ವಹಿಸಿ ಕನ್ನಡ ಭಾಷೆಯ ಅಸ್ಮಿತೆಗೆ ಪ್ರತಿಯೊಬ್ಬರು ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು. ಈ ಸಮಯದಲ್ಲಿ ಜಾನಪದ ಕಲಾವಿದರಾದ ಮಾಯನಟ್ಟಿಯ ಜಕ್ಕಣ್ಣ ಅಮಘೊಂಡ ಬೆವನೂರ ಹಾಗೂ ಸ್ನೇಹಾ ಗೆಜ್ಜಿ, ಸುರೆಶ ಸಿದ್ದಪ್ಪ ವಾಘಮೋಡೆ ಅವರನ್ನು ಸನ್ಮಾನಿಸಲಾಯಿತು. 

ಹಿಂದಿನ ಅಧ್ಯಕ್ಷರಾದ ಶಿವಪುತ್ರ ಯಾದವಾಡ, ಕೆ.ಎಲ್ ಕುಂದರಗಿ, ಅಲ್ಲಪ್ಪ ನಿಡೋಣಿ, ಅಪ್ಪಾಸಾಹೇಬ ಅಲಿಬಾದಿ, ಎಸ್,ಕೆ ಹೊಳೆಪ್ಪನವರ, ಅರುಣಕುಮಾರ ರಾಜಮಾನೆ. ಎಂ.ಕೆ ಸಂಕ, ರವೀಂದ್ರ ಉಳ್ಳಾಗಡ್ಡಿ, ಬಿ.ಆರ್ ಮುಗ್ಗನವರ, ಪ್ರಿಯಂವದಾ ಅಣೆಪ್ಪನವರ, ಅರ್ಚನಾ ಅಥಣಿ, ಶಶಿಕಲಾ ಹತರ್ಿ, ಗೌರಿ ಸಾವಡಕರ, ಮಾನಸಾ ಪೋತದಾರ ಮೊದಲಾದವರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಡಾ. ಮಹಾಂತೇಶ ಉಕ್ಕಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದಶರ್ಿ ರೋಹಿಣಿ ಯಾದವಾಡ ನಿರೂಪಿಸಿದರು. ಕೋಶಾಧಿಕಾರಿ ಅರುಣಕುಮಾರ ಯಲಗುದ್ರಿ ವಂದಿಸಿದರು.