ಲೋಕದರ್ಶನ ಸುದ್ದಿ
ಧಾರವಾಡ 02: ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಿ ಜನರ ಆರೋಗ್ಯವನ್ನು ಕಾಪಾಡಲು ಒಬ್ಬ ಉತ್ತಮ ವೈದ್ಯ ಹೇಗೆ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾನೆಯೋ, ಹಾಗೆಯೇ, ಸಧ್ಯ ಖಾಯಿಲೆಗೊಳ್ಳುತ್ತಿರುವ ನಿಸರ್ಗವನ್ನು ಕಾಪಾಡುವುದು ಎಲ್ಲ ಮನುಷ್ಯರ ಆದ್ಯ ಕರ್ತವ್ಯವಾಗಬೇಕು ಎಂದು ನೇಚರ್ ಫಸ್ಟ್ ಇಕೊ ವಿಲೇಜಿನಲ್ಲಿ ವಿಶ್ವ ವೈದ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದಿದ್ದ ಮನೋರೋಗ ತಜ್ಙ ಡಾ. ಆನಂದ ಪಾಂಡುರಂಗಿ ನೆರೆದಂತಹ ಪರಿಸರ ಪ್ರೇಮಿಗಳಿಗೆ ತಿಳಿಸಿದರು, ಅಷ್ಟೇ ಅಲ್ಲದೇ, ಮನುಷ್ಯ ಆರೋಗ್ಯದಿಂದರಬೇಕೆಂದರೆ ಅವನ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿರಬೇಕು, ಆರೋಗ್ಯದ ಮೊದಲ ಪಾಠ ಪ್ರಾರಂಭವಾಗುವುದೇ ಪರಿಸರದಿಂದ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ನೇಚರ್ ಪಸ್ಟ್ ಇಕೋ ವಿಲೇಜಿನ ಪ್ರಧಾನ ಸೇವಕರಾದ ಪ್ರಕಾಶ ಗೌಡರ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಅಚ್ಯುತ ಗದಗಕರ, ಡಾ.ಅನುಪಮಾ ಪಾಂಡುರಂಗಿ, ಅಯ್,ಆಯ,ಟಿ ಮದ್ರಾಸಿನ ಪ್ರಾಧ್ಯಾಪಕರು ದೇವೆಂದ್ರ ಹಾಗೂ ಪೂಣರ್ಿಮಾ ಜಾಲಿಹಾಳ, ಗದಗಿನ ಖ್ಯಾತ ಹಿರಿಯ ವ್ಯೆದ್ಯರಾದ ರಾಘವೇಂದ್ರ ಜಾಲಿಹಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.