ಪತಂಜಲಿ ಯೋಗ ಸಮಿತಿಯಿಂದ ವೈದ್ಯರ ದಿನಾಚರಣೆ

ಬಸವನಬಾಗೇವಾಡಿ ಸ್ಥಳೀಯ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣ

ಬಸವನಬಾಗೇವಾಡಿ 03:  ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಲಹೆ-ಸಹಕಾರ ನೀಡಿ ಆರೋಗ್ಯಯುತ ಸಮಾಜ ನಿಮರ್ಾಣಕ್ಕೆ ವೈದ್ಯರ ಸೇವೆ ಅವಿಸ್ಮರಣೀಯವಾಗಿದೆ ಎಂದು ಸ್ಥಳೀಯ ಪಿಎಸ್ಐ ಶರಣಗೌಡ ಗೌಡರ ಹೇಳಿದರು.

     ಸ್ಥಳೀಯ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ವೈದ್ಯಕೀಯ ಸೇವೆಯು ಸಮಾಜದ ಋಣ ತೀರಿಸುವ ಪ್ರತೀಕವಾಗಿದ್ದು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.  

    ಡಾ: ಅಮರೇಶ ಮಿಣಜಗಿ ಅವರು ವೈದ್ಯ ವೃತ್ತಿಯೊಂದಿಗೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಬಸವಾದಿ ಶರಣರ ವಿಚಾರಧಾರೆಯಲ್ಲಿ ಮುನ್ನಡೆದು ಜನ ಜಾಗೃತಿ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ ಅವರ ಸೇವೆ ಶ್ಲಾಘನೀಯವಾಗಿದ್ದು ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ: ಅಮರೇಶ ಮಿಣಜಗಿ ಬಾಲ್ಯದಿಂದಲೂ ಸಮಾಜಸೇವೆ ಬಗ್ಗೆ ಆಸಕ್ತಿ ಇತ್ತು ವೈದ್ಯ ವೃತ್ತಿ ಕೈಗೊಂಡಾಗ ತುಡಿತ ಹೆಚ್ಚಳವಾಯಿತು, ಅಳಿಲು ಸೇವೆ ಮಾಡುತ್ತಿದ್ದು ಸಮಾಜದ ಸದುಪಯೋಗ ಪಡೆದುಕೊಂಡ ಪ್ರತಿಯೊಬ್ಬರ ಸಮಾಜದ ಜವಾಬ್ದಾರಿ ಹೊತ್ತುಕೊಳ್ಳಬೇಕು ಅಂದಾಗ ನೆಮ್ಮದಿ ಬದುಕು ಸಾಗಿಸಲು ಸಾಧ್ಯವಿದೆ ಎಂದು ಹೇಳಿದರು.

   ನಿವೃತ್ತ ಉಪನ್ಯಾಸಕ ಎಚ್.ಎಸ್.ಬಿರಾದಾರ, ಪತಂಜಲಿ ಯೋಗ ಸಮಿತಿ ಪ್ರಭಾರಿ ಕಾಶೀನಾಥ ಅವಟಿ, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜಶೇಖರ ಪಾಟೀಲ, ವಿಶ್ವ ಬಂಧು ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ ಮಾತನಾಡಿದರು, ಅಂಬೋಜಿ ಪವಾರ, ಪುಷ್ಪಾ ಕುಲಕಣರ್ಿ, ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ,  ಬಾಪು ಈಳಗೇರ, ಅಶೋಕ ಮುಳವಾಡ ಇತರರು ಉಪಸ್ಥಿತರಿದ್ದರು, ಎನ್.ಎಸ್.ಹೂಗಾರ ಸ್ವಾಗತಿಸಿದರು, ಪ್ರಭು ಖೇಡದ ನಿರೂಪಿಸಿದರು, ಭಾರತಿ ಕುಲಕಣರ್ಿ ವಂದಿಸಿದರು.