ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಈಗಾಗಲೇ ಹಲವು ಬೆಳೆಗಳ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಸದ್ಯ 30 ರಿಂದ 45 ದಿನಗಳ ಬೆಳೆಗಳಿವೆ. ಬೆಳೆಗಳಿಗೆ ಅಲ್ಲಲ್ಲಿ ಕೀಟ ಮತ್ತು ರೋಗಗಳ ಭಾದೆ ಕಂಡು ಬರುತ್ತಿದ್ದು, ಅವುಗಳ ನಿರ್ವಹಣೆಯ ಮಾಹಿತಿಯನ್ನು ರೈತ ಬಾಂಧವರಿಗೆ ತಲುಪಿಸುವುದು ಅತ್ಯಂತ ಅವಶ್ಯಕವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೃಷಿ ಇಲಾಖೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನಾಲ್ಕು ತಂಡಗಳು ಜಿಲ್ಲೆಯ ಹತ್ತು ತಾಲೂಕುಗಳಲ್ಲಿ 10 ದಿನಗಳಿಗೊಮ್ಮೆ ಸವರ್ೆಕ್ಷಣೆ ಕೈಗೊಂಡು ವಿವಿಧ ಬೆಳೆಗಳಿಗೆ ತಗುಲಿರುವ ಕೀಟ ಮತ್ತು ರೋಗಗಳ ಪರಿಶೀಲನೆ ಕ್ಷೇತ್ರಮಟ್ಟದಲ್ಲಿ ಕೈಗೊಂಡು, ಪೀಡೆಗಳ ನಿರ್ವಹಣೆಯ ಬಗ್ಗೆ ಕ್ರಮಕೈಗೊಳ್ಳಲು ಕ್ಷಿಪ್ರವಾಗಿ ರೈತ ಬಾಂಧವರಿಗೆ ತಿಳಿಸಲು ಸೂಕ್ತ ಕ್ರಮಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಜು.12 ರಂದು ಮೊದಲ ಸವರ್ೆ ಕಾರ್ಯದ ಸಭೆಯನ್ನು ಜಂಟಿ ಕೃಷಿ ನಿದರ್ೇಶಕರಾದ ಜಿಲಾನಿ. ಎಚ್. ಮೊಕಾಶಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಉಪ ಕೃಷಿ ನಿದರ್ೇಶಕರಾದ ಎಚ್.ಡಿ. ಕೋಳೇಕರ, ಎಲ್.ಐ. ರೂಡಗಿ, ತಾಲೂಕಿನ ಸಹಾಯಕ ಕೃಷಿ ನಿದರ್ೇಶಕರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ಹಾಗೂ ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿದ್ದರು.
ಸಭೆಯ ನಂತರ ನಾಲ್ಕು ತಂಡದ ವಿಜ್ಞಾನಿಗಳು ಜಿಲ್ಲೆಯ ಹತ್ತು ತಾಲೂಕುಗಳಿಗೆ ಭೇಟಿ ನೀಡಿ ಬೆಳೆಗಳಿಗೆ ತಗಲಿರುವ ಕೀಟ ಹಾಗೂ ರೋಗಗಳ ಸವರ್ೆಯನ್ನು ಕೈಗೊಂಡರು.