ಬ್ಯಾಟಿಂಗೇ ಮಾಡಿಲ್ಲ ಆದರೂ ಧೋನಿ ಹಲವು ದಾಖಲೆ, ಮಿಸ್ಟರ್ ಕೂಲ್ ಮಾಡಿದ್ದೇನು ಗೊತ್ತಾ?


ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಪಂದ್ಯದಲ್ಲಿ ಮಿಸ್ಟರ್ ಕೂಲ್ ಎಂಎಸ್ ಧೋನಿ ಹಲವು ದಾಖಲೆಗಳನ್ನು ನಿಮರ್ಾಣ ಮಾಡಿದ್ದಾರೆ. ಅರೆ.. ಇದೇನಿದು ಧೋನಿ ಈ ಪಂದ್ಯದಲ್ಲಿ ಬ್ಯಾಟಿಂಗೇ ಮಾಡಿಲ್ಲ. ಆದರೂ ದಾಖಲೆಗಳು ಹೇಗೆ ನಿಮರ್ಾಣವಾದವು ಎಂದು ನೀವು ಪ್ರಶ್ನಿಸಬಹುದು. ಅದಕ್ಕೆ ಉತ್ತರ ಅವರ ಅದ್ಬುತ ಫೀಲ್ಡಿಂಗ್ ಮತ್ತು ವಿಕೆಟ್ ಹಿಂದಿನ ಅವರ ಚಾಣಾಕ್ಷತನದ ವಿಕೆಟ್ ಕೀಪಿಂಗ್.. ಹೌದು ಇಂಗ್ಲೆಂಡ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ಎಂ ಎಸ್ ಧೋನಿ ಬರೊಬ್ಬರಿ 4 ಕ್ಯಾಚ್ ಗಳನ್ನು ಪಡೆದಿದ್ದು, ಇಂಗ್ಲೆಂಡ್ ತಂಡದ ಬ್ಯಾಟ್ಸಮನ್ ಗಳಾದ ಜೇಸನ್ ರಾಯ್, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್, ಜಾನಿ ಬೇರ್ ಸ್ಟೋವ್ ಮತ್ತು ಲಿಯಾಮ್ ಪ್ಲಂಕಿಟ್ ರನ್ನು ಔಟ್ ಮಾಡಿದರು. ಅಲ್ಲದೇ ಇದೇ ಪಂದ್ಯದಲ್ಲಿ ಧೋನಿ ಕ್ರಿಸ್ ಜೋಡರ್ಾನ್ ರನ್ನು ರನೌಟ್ ಮಾಡುವ ಮೂಲಕ ಪೆವಿಲಿಯನ್ ಗೆ ಅಟ್ಟಿದ್ದರು. ಧೋನಿ ಅವರ ಈ ಅದ್ಭುತ ಕ್ಷೇತ್ರ ರಕ್ಷಣೆಯೇ ಅವರ ಹೆಸರಿಗೆ ಹಲವು ದಾಖಲೆಗಳು ನಿಮರ್ಾಣವಾಗುವಂತೆ ಮಾಡಿದೆ. 

ಇಷ್ಟಕ್ಕೂ ಧೋನಿ ಹೆಸರಲ್ಲಿ ನಿಮರ್ಿತವಾದ ದಾಖಲೆಗಳಾವುವು? 

1. ಟಿ20 ಕ್ರಿಕೆಟ್ ನಲ್ಲಿ ಧೋನಿ 50 ಕ್ಯಾಚ್ ಪಡೆದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಕೀತರ್ಿಗೆ ಭಾಜನರಾಗಿದ್ದಾರೆ. 

2. ಇಂಗ್ಲೆಂಡ್ ತಂಡದ ಐದು ಕ್ಯಾಚ್ ಗಳನ್ನು ಪಡೆಯುವ ಮೂಲಕ ಎಂಎಸ್ ಧೋನಿ ಟಿ20 ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ವೊಂದರಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ಕೀತರ್ಿಗೆ ಧೋನಿ ಪಾತ್ರರಾಗಿದ್ದಾರೆ. 

3. ಒಂದೇ ಇನ್ನಿಂಗ್ಸ್ ನಲ್ಲಿ ಎದುರಾಳಿ ತಂಡದ 5 ಬ್ಯಾಟ್ಸಮನ್ ಗಳ ಔಟ್ ನಲ್ಲಿ ಧೋನಿ ಪಾತ್ರ (4 ಕ್ಯಾಚ್, 1 ರನೌಟ್).. ಇದಕ್ಕೂ ಮೊದಲು ಈ ಸಾಧನೆ ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಮಹಮದ್ ಶಹಜಾದ್ ಹೆಸರಲ್ಲಿತ್ತು, ಶಹಜಾದ್ 5 ಮಂದಿಯ ಔಟ್ ಮಾಡಿದ್ದರು. ಧೋನಿ 5 ಮಂದಿಯ ಔಟ್ ನಲ್ಲಿ ಪಾತ್ರರಾಗುವ ಮೂಲಕ ಈ ದಾಖಲೆ ಸರಿಗಟ್ಟಿದ್ದಾರೆ. 

4. ಟಿ20 ಕ್ರಿಕೆಟ್ ನಲ್ಲಿ (ಅಂತಾರಾಷ್ಟ್ರೀಯ, ಐಪಿಎಲ್, ಕೌಂಟಿ ಸೇರಿದಂತೆ) 150 ಕ್ಯಾಚ್ ಪಡೆದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಕೀತರ್ಿಗೂ ಧೋನಿ ಪಾತ್ರರಾಗಿದ್ದಾರೆ. 

5. 4ಕ್ಕೂ ಹೆಚ್ಚು ಬ್ಯಾಟ್ಸಮನ್ ಗಳ ಔಟ್ ನಲ್ಲಿ ಧೋನಿ ಪಾತ್ರ.. ಈ ರೀತಿ ನಾಲ್ಕು ಬಾರಿ ಗರಿಷ್ಠ ವಿಕೆಟ್ ಗಳಲ್ಲಿ ಧೋನಿ ಪಾತ್ರ. ಧೋನಿ ಅವರ ಈ ದಾಖಲೆಯನ್ನು ಇದವರೆಗೂ ಯಾವುದೇ ಕ್ರಿಕೆಟ್ ತಂಡ ವಿಕೆಟ್ ಕೀಪರ್ ಗಳೂ ಮಾಡಿಲ್ಲ.