'ಕುಂಬ್ಳೆ ವಿದಾಯದ ಪಂದ್ಯದಲ್ಲಿ ಧೋನಿ ಬಸ್ ಡ್ರೈವ್ ಮಾಡಿದ್ರು

ನವದೆಹಲಿ: ಟೀಂ ಇಂಡಿಯಾದ ಮಾಜಿ ಟೆಸ್ಟ್ ಸ್ಪೆಶಲಿಸ್ಟ್ ವಿವಿಎಸ್ ಲಕ್ಷ್ಮಣ್ ತಮ್ಮ ಆತ್ಮಕತೆಯ ಪುಸ್ತಕದಲ್ಲಿ ಮಿಸ್ಟರ್ ಕೂಲ್ ಧೋನಿ ಬಗ್ಗೆ ಸಂಗತಿಯೊಂದನ್ನ ಹೇಳಿದ್ದಾರೆ. 2008ರಲ್ಲಿ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಟೆಸ್ಟ್ಗೆ ನಿವೃತ್ತಿ ಘೋಷಿಸಿದ ದಿನ ಧೋನಿ  ಆಟಗಾರರು ಕುಳಿತ್ತಿದ್ದ ಬಸ್ನ್ನ ಮೈದಾನದಿಂದ ಹೋಟೇಲ್ವರೆಗೂ ಚಲಾಯಿಸಿದ್ದರು ಎಂದು ಲಕ್ಷ್ಮಣ್ ನೆನೆದಿದ್ದಾರೆ. 

ಲಕ್ಷ್ಮಣ್ ತಮ್ಮ ಆತ್ಮಕತೆ ಬಿಯಾಂಡ್ 281 ಪುಸ್ತಕದಲ್ಲಿ ಧೋನಿಯ ಚತುರತೆ,  ತಾಳ್ಮೆ ಬಗ್ಗೆ  ಹೇಳಿದ್ದಾರೆ. 2001ರಲ್ಲಿ  ಅನಿಲ್ ಕುಂಬ್ಳೆ ಟೆಸ್ಟ್ಗೆ ನಿವೃತ್ತಿ ಘೋಷಿಸಿದ್ದರು.  ಅದೇ ದಿನ ನಾನು ನೂರು ಟೆಸ್ಟ್ ಪಂದ್ಯ ಅಡಿದ್ದ ಸಂದರ್ಭ ಆಗಿತ್ತು. ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರು ಮೈದಾನದಿಂದ ಹೊರ ಬಂದು ಬಸ್ನಲ್ಲಿ ಕುಳಿತ್ತಿದ್ದರು. ಧೋನಿ ಡ್ರೈವರ್ ಸೀಟಿನಲ್ಲಿ ಕುಳಿತು  ಬಸ್ನ್ನ ಹೋಟೇಲ್ವರೆಗೂ ಡ್ರೈವ್ ಮಾಡಿದರು. ಇದು ನಮಗೆ ಅಚ್ಚರಿಯನ್ನ ನೀಡಿತ್ತು. ಇದು ನನಗೆ ಮರೆಯಲಾಗದ ಕ್ಷಣ ಎಂದು ಲಕ್ಷ್ಮಣ್ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.