ಯುವ ಪ್ರತಿಭೆಗೆ ಜಿಲ್ಲಾಧಿಕಾರಿಗಳ ಮೆಚ್ಚುಗೆ

ಧಾರವಾಡ 18: ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮನ್ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ರಾಮನ್ ಯುವ ವಿಜ್ಞಾನಿ ಅನ್ವೇಷಣಾ ಸ್ಪಧರ್ೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವ ತಾಲೂಕಿನ ಬೋಗೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿನಿ ಸುಮಾ ತುರಮುರಿ ಅವರ ಪ್ರತಿಭೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ಸೂಚಿಸಿ ಗೌರವಿಸಿದ್ದಾರೆ. 

ಈ ಸ್ಪಧರ್ೆಗೆ 1560 ಶಾಲೆಗಳು ನೊಂದಾಯಿಸಿಕೊಂಡಿದ್ದವು. 130 ಶಾಲೆಗಳು ಅರ್ಹತೆ ಪಡೆದಿದ್ದವು.   ಇವುಗಳ ಪೈಕಿ ಬೋಗೂರಿನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಸಕರ್ಾರಿ ಸಂಸ್ಥೆಯಾಗಿದ್ದು ವಿಶೇಷ. ಉಳಿದ ಎಲ್ಲ ಶಾಲೆಗಳು ಖಾಸಗಿ ಸಂಸ್ಥೆಗಳಾಗಿದ್ದವು.

     ಸುಮಾ ತುರಮುರಿ ಅವರು ನಿಮರ್ಿಸಿದ ಹೃದಯದ ಮಾದರಿಯು ಪ್ರಥಮ ಬಹುಮಾನ ಪಡೆಯಿತು. ರೂ.20,000/- ನಗದು, ವಿಜ್ಞಾನ ಉಪಕರಣಗಳು, ವಿದ್ಯಾಲೋಕ ಸಂಸ್ಥೆಯಿಂದ ಲ್ಯಾಪ್ಟಾಪ್ ನೀಡಲಾಯಿತು. ಬೋಗೂರು ಸಕರ್ಾರಿ ಶಾಲೆಯಲ್ಲಿ ವಿದ್ಯಾಪೋಷಕ ಸಂಸ್ಥೆಯು ವಿದ್ಯಾಲೋಕ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದು ವಿದ್ಯಾಥರ್ಿಗಳ ಶಿಕ್ಷಣಕ್ಕೆ ಸಹಕಾರಿಯಾಗಿದೆ.

      ಜಿಲ್ಲಾಧಿಕಾರಿಗಳು ವಿದ್ಯಾಥರ್ಿನಿಗೆ ಪುರಸ್ಕರಿಸಿದ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಬಿ.ಎಸ್. ಪಾಟೀಲ, ವಿದ್ಯಾಲೋಕ ಜಿಲ್ಲಾ ಸಂಯೋಜಕ ಶ್ರೀಪತಿ ಕೋಲ್ಹಾರ, ಸಹ ಸಂಯೋಜಕ ಮಲ್ಲಿಕಾಜರ್ುನ ಬಿಜಾಪೂರ ಮತ್ತಿತರರು ಇದ್ದರು.