ದಿನಗೂಲಿ ನೌಕರರ ರಾಜ್ಯ ಮಟ್ಟದ ಹೋರಾಟಕ್ಕೆ ಡಾ. ಶರ್ಮಾ ಕರೆ

ಲೋಕದರ್ಶನವರದಿ

ರಾಣೇಬೆನ್ನೂರು 15: ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಇಲಾಖೆಗಳಲ್ಲಿ ಅಡಿಗೆಯವರು, ಅಡಿಗೆ ಸಹಾಯಕರು, ರಾತ್ರಿಕಾವಲುಗಾರರು, ಕಂಪ್ಯೂಟರ್ಅಪರೇಟರ್, ದಿನಗೂಲಿ ಎಂದು ಕೆಲಸ ಮಾಡುತ್ತಿದ್ದು, ಅವರನ್ನು  ಸೇವೆಯಿಂದ ಕಡಿತಗೊಳಿಸಬಾರದಷ್ಟೆ ಅಲ್ಲಇವರಯಾವುದೇ ಸೇವಾ ಸ್ಥಿತಿಯನ್ನು ಬದಲು ಮಾಡುವಂತಿಲ್ಲ. ಎಂದು ಕನರ್ಾಟಕರಾಜ್ಯ ಸಕರ್ಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಕೆ. ಎಸ್ ಶರ್ಮ ಹೇಳಿದರು. 

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೈಗಾರಿಕಾ ವಿವಾದವು ಔದ್ಯಮಿಕ ವಿವಾದಗಳ ಕಾಯ್ದೆ ಪ್ರಕಾರ 1947 ರಅಡಿಯಲ್ಲಿಔದ್ಯಮಿಕ ನ್ಯಾಯಾಲಯ ಹುಬ್ಬಳ್ಳಿಯಲ್ಲಿ ಮೇಲೆ ಉಲ್ಲೇಖಿಸಿದ ಪ್ರಕರಣವು ನ್ಯಾಯನಿರ್ಣಯಕ್ಕಾಗಿ ನಡೆಯುತ್ತಿದೆ. ಈ ರೀತಿಯಾಗಿ ಯಾವುದೇ ಕೈಗಾರಿಕಾ ವಿವಾದ ನ್ಯಾಯ ನಿರ್ಣಯಕ್ಕಾಗಿ ನಡೆಯುತ್ತಿದ್ದಾಗ ಈ ನ್ಯಾಯ ಪ್ರಕ್ರಿಯೆಯಲ್ಲಿ ತೊಡಗಿದ ಯಾವುದೇ ನೌಕರರ ಸೇವಾ ಸ್ಥಿತಿಗಳನ್ನು ಪ್ರತಿವಾದಿ ಮಾಲಕರು ಸೇವಾಸ್ಥಿತಿಯನ್ನು ಬದಲು ಮಾಡುವುದಾಗಲಿ, ಕೆಲಸದಿಂದ ತೆಗೆಯುವುದಾಗಲಿ ಮಾಡಿದರೆ ಅವರೆಲ್ಲ ಶಿಕ್ಷೆಗೆ ಒಳಪಡಬೇಕಾಗುತ್ತದೆ  ಎಂದು ಹೇಳಿದರು. 

ವಸತಿ ನಿಲಯ ಹೊರಗುತ್ತಿಗೆ ನೌಕರರು ಖಾಯಂಗೊಳಿಸಬೇಕೆಂದು ಅನೇಕ ಬಾರಿ ಹೊರಾಟ ಮಾಡಿದರು ಸಕರ್ಾರ ಗಮನಕ್ಕೆ ತೆಗೆದುಕೊಂಡಿಲ್ಲ. ಈಗ ಸಕರ್ಾರ ಬದಲಾಗಿ ದಿನಗೂಲಿ ನೌಕರರನ್ನು ವಜಾ ಮಾಡಬೇಕೆಂದು ತೀಮರ್ಾನಿಸಿದ್ದು, ಖಂಡನೀಯವಾಗಿದೆ.ಇದನ್ನು ಬದಲಿಸಿ ಹೊರಗುತ್ತಿಗೆ ನೌಕರರನ್ನು ಯಾವುದೇ ಕಾರಣಕ್ಕೂತೆಗೆಯಬಾರದು. ಹಾಗೇನಾದರು ತೆಗೆದರೆ ಮುಂದಿನ ಇದೇ ಜೂನ್ 18 ರಂದು ಮೊದಲನೆ ಪ್ರಾದೇಶಿಕ ಪ್ರತಿಭಟನ ಹೋರಾಟವು ನೆಡೆಯುವುದು. 

 ಈ ಹೋರಾಟದಲ್ಲಿ ಮೈಸೂರ, ಮಂಡ್ಯ, ರಾಮನಗರ, ಕೊಡಗು, ಚಾಮರಾಜ ನಗರ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ, ದಾವಣಗೆರೆ, ತುಮಕೂರ, ಬೆಂಗಳೂರು ಜಿಲ್ಲೆಗಳಿಗೆ ಸೇರಿದ ನೌಕರರು ಭಾವಹಿಸುವರು, 

ಎರಡನೇ ಹಂತದ ಪ್ರಾದೇಶಿಕ ಹೋರಾಟವು ಜೂನ್ 20ರಂದು ಗುರುವಾರ ಬೆಳಗಾವಿ ವಿಭಾಗ ಮಟ್ಟದಲ್ಲಿ ನಡೆಯಲಿದೆ.  ಹೋರಾಟದಲ್ಲಿ  ಬೆಳಗಾಂ ಬಾಗಲಕೋಟೆ, ವಿಜಯಪುರ, ಧಾರವಾಡಗದಗ, ಹಾವೇರಿ, ಉತ್ತರಕನ್ನಡಜಿಲ್ಲೆಯ ನೌಕರರು ಬಾಗವಹಿಸುವರು. 

ಇನ್ನೂ ಮೂರನೇ ಪ್ರಾದೇಶಿಕ ಹೋರಾಟವು ಜೂನ್  24ರಂದು ನಡೆಯಲಿದ್ದು, ಗುಲ್ಬರ್ಗ, ಬೀದರ್, ರಾಯಚೂರ, ಕೊಪ್ಪಳ, ಬಳ್ಳಾರಿ ಯಾದಗಿರಿ ಜಿಲ್ಲೆಯ ನೌಕರರು ಭಾವಗಹಿಸಿಲಿದ್ದು, ಇದನ್ನು ಕಂಡುಏನಾದರು ದಿನಗೂಲಿ ನೌಕರರನ್ನು ವಜಾಅ ಮಾಡಿದರೆ ಮುಂದಿನ ದಿನಮಾನಗಳಲ್ಲಿ ಲಕ್ಷಾಂತರ ನೌಕರರು  ಬೆಂಗಳೂರ ಚಲೋ ಹೋರಾಟಕ್ಕೆನಾಂದಿಯಾಗುತ್ತದೆ. ಎಂದು ಡಾ|| ಕೆ.ಎಸ್. ಶರ್ಮ ಅವರು ಸಕರ್ಾರಕ್ಕೆ ಎಚ್ಚರಿಕೆ ನೀಡಿದರು.