ಮೋಸ: ಜಿಲ್ಲಾ ಗ್ರಾಹಕರ ವೇದಿಕೆ ನ್ಯಾಯಾಲಯ ಪರಿಹಾರಕ್ಕೆ ಆದೇಶ

ಯಮಕನಮರಡಿಯಲ್ಲಿ ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿಯವರಿಗೆ ಅಭಿನಂದನೆ ಸಲ್ಲಿಸುತ್ತಿರುವ ಗಣ್ಯರು

ಲೋಕದರ್ಶನ ವರದಿ

ಬೆಳಗಾವಿ 05: ಇಲ್ಲಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯಿಂದ ತಾರೀಖು 12-06-2018 ರಂದು ಸರಿತಾ ಮೊಬೈಲ್ ಎಕ್ಸಸರಿಸ್ ಬಾಪಟ ಗಲ್ಲಿ, ಬೆಳಗಾವಿ, ಎಂಬ ಮೊಬೈಲ ವಿತರಕ ಅವರ ವಿರುದ್ಧ ದಾವೆಯನ್ನು ಹಾಕಿದ ಅಂಜಲಿ ರಮೇಶ ಭಂಡಾರಿ ಅವರಿಗೆ ಅಂಗಡಿಯಿಂದ ಕೊಟ್ಟಂತಹ ಖೊಟ್ಟಿ ಮೊಬೈಲನ್ನು ಬದಲಿಸಿ ಅದರೊಂದಿಗೆ ನೂತನ ವಾರಂಟಿಯೊಂದಿಗೆ ಸೀಮ ಕಾರ್ಡನ್ನು ಬದಲಿಸಿ, ಮತ್ತು ಅಜರ್ಿದಾರರಿಗೆ ಆದ ಮಾನಸಿಕ ನಷ್ಟ ಪರಿಹಾರ ರೂ. 500 ಮತ್ತು ವ್ಯಾಜ್ಯ ದಾಖಲಿಸಲು ತಗುಲಿದ ಮೊತ್ತ ರೂ. 500/- ನೀಡಲು ಆದೇಶಿಸಿದೆ. 

ಪ್ರಕರಣ ಹಿನ್ನೆಲೆಃ 

ದಿ.17-11-2017 ರಂದು ಅಂಜಲಿ ರಮೇಶ ಭಂಡಾರಿ ಅವರು ಸರಿತಾ ಮೊಬೈಲ್ಸ್ ಮತ್ತು ಎಕ್ಸ್ಸರಿಸ್ ಬಾಪಟಗಲ್ಲಿ ಬೆಳಗಾವಿ ಇವರಿಂದ ಒಂದು ಹೊಸ ಮೊಬೈಲನ್ನು ಖರೀದಿಸಿ ಅದರ ಬಿಲ್ ನಂ. 941 ಮತ್ತು ವಾರಂಟಿ, ಮೊತ್ತ ರೂ. 1,200ಗಳನ್ನು ನೀಡಿ ಮೊಬೈಲನ್ನು ಮನೆಗೆ ತೆಗೆದುಕೊಂಡು ಹೋಗಿ ಸೀಮಕಾರ್ಡ ಹಾಕಿ ನೋಡಿದರೆ ಅದು ಒಂದು ಖೊಟ್ಟಿ ಮೊಬೈಲ ಎಂದು ಗೊತ್ತಾಗಿದೆ. ನಂತರ ತಾರೀಖ 18-11-2017 ರಂದು ಅಂಗಡಿಗೆ ಹೋಗಿ ಮೊಬೈಲನ್ನು ಬದಲಾಯಿಸಿ ಕೊಡಲು ಹೇಳಿದಾಗ ಅಂಗಡಿಯವನು ಯಾವುದೇ ಪ್ರತ್ಯತ್ತರ ನೀಡದೇ ಮೋಸ ಮಾಡಿದ್ದಾನೆ.

ಇದರಿಂದ ಮನನೊಂದ ಸರಿತಾ ತಮ್ಮ ವಕೀಲರ ಮುಖಾಂತರ ತಾ ಃ 13-12-2017 ರಂದು ನೋಟಿಸನ್ನು ನೀಡಿ ತನ್ನ ಮೊಬೈಲನ್ನು ಬದಲಾಯಿಸಿ ಅಥವಾ ಅದರ ರೂ. 1200/- ಹಣವನ್ನು ವಾಪಸ್ ನೀಡಿ ಎಂದು ತಿಳಿಸಿದ್ದರು. ಇದಕ್ಕೂ ಕೂಡ ಸ್ಪಂದಿಸದ ಪ್ರತಿವಾದಿಯ ಮೇಲೆ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ವಾದಿಯು ದಾವೆ ಹೂಡಿದ್ದರು. ಅಲ್ಲಿಯೂ ಕೂಡ ಪ್ರತಿವಾದಿ ಹಾಜರಾಗಿರಲಿಲ್ಲ ಮತ್ತು ನ್ಯಾಯಾಲಯದಿಂದ ಕಳುಹಿಸಿದ ಸಮನ್ಸಿಗೂ ಕೂಡಾ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. 

ನ್ಯಾಯಾಲಯವು ಈ ಪ್ರಕರಣದಲ್ಲಿ ಹಾಜರಪಡಿಸಿದ ಮೊಬೈಲ ಬಿಲ್ಲ, ವಾರಂಟಿ ಕಾರ್ಡಗಳನ್ನು ಪರಿಗಣಿಸಿ ಒಂದು ತಿಂಗಳ ಒಳಗಾಗಿ ಮೊಬೈಲ, ಹ್ಯಾಂಡಸೆಟ್ನ್ನು ಬದಲಾಯಿಸಿಕೊಡಬೇಕು, ಮತ್ತು ಅದರೊಂದಿಗೆ ಕಂಪನಿಯ ವಾರಂಟಿ ಕೂಡ ಇರಬೇಕು, ಮತ್ತು ವಾದಿಗೆ ಆದಂತಹ ಮಾನಸಿಕ ದುಃಖ ಮತ್ತು ದಾವೆಯನ್ನು ಹಾಕಲು ತಗುಲಿದ ಖಚರ್ು ನೀಡಬೇಕೆಂದು ಆದೇಶಿಸಿದೆ.

ಬಾಪಟ ಗಲ್ಲಿಯಲ್ಲಿ ಇಂತಹ ಖೊಟ್ಟಿ ಬೊಬೈಲ ಅಂಗಡಿಗಳು ಬಹಳಷ್ಟು ತಲೆ ಎತ್ತಿದ್ದು ಗ್ರಾಹಕರು ತುಂಬಾ ಎಚ್ಚರಿಕೆ ವಹಿಸಬೇಕು ಹಿರಿಯ ನ್ಯಾಯವಾದಿ ದಿನಕರ ಶೆಟ್ಟಿ ಗ್ರಾಹಕರಿಗೆ ಎಚ್ಚರ ನೀಡಿದ್ದಾರೆ.

ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಸಲ್ಲದು: ರಮೇಶ ಕತ್ತಿ

ಲೋಕದರ್ಶನ ವರದಿ

ಯಮಕನಮರಡಿ 05: ರೈತರ ಏಳ್ಗೆಗಾಗಿ ಹುಟ್ಟು ಹಾಕಿರುವ ಸಹಕಾರ ಸಂಸ್ಥೆಗಳಲ್ಲಿ ರಾಜಕೀಯ ಮಾಡದೇ ಅವುಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಬೆಳಗಾವಿ ಜಿಲ್ಲಾ ಮಧ್ಯವತರ್ಿ ಸಹಕಾರಿ ಬ್ಯಾಂಕಿನ ರಮೇಶ ಕತ್ತಿ ಹೇಳಿದರು.

ಅವರು ಗುರುವಾರ ದಂದು ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ ರಮೇಶ ಕತ್ತಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಪತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಒಂದು ಸಂಸ್ಥೆಯು ಅಭಿವೃದ್ಧಿಯತ್ತ ಸಾಗಬೇಕಾದರೆ ಆಡಳಿತ ಮಂಡಳಿಯವರ ನಿಸ್ವಾರ್ಥ ಸೇವೆ, ಸಿಬ್ಬಂದಿ ವರ್ಗದವರ ಪ್ರಾಮಾಣಿಕತೆ ಮತ್ತು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕಾಗಿದೆ. ಸಾಲ ಮನ್ನಾ ಪ್ರಯೋಜನವು ಎಲ್ಲ ರೈತರಿಗೆ ದೊರೆಯಬೇಕು ಒಂದು ವೇಳೆ ಸಾಲ ಮನ್ನಾ ಪ್ರಯೋಜನ ಪಡೆದೆಇದ್ದ ರೈತರು ನನ್ನನ್ನು ಸಂರ್ಪಕಿಸಿದರೆ ಸಾಲ ಮನ್ನಾ ಪ್ರಯೋಜನ ಮಾಡುತ್ತೆನೆಂದು ರಮೇಶ ಕತ್ತಿ ಭರವಸೆ ನೀಡಿದರು. 

 ಅಧ್ಯಕ್ಷತೆ ವಹಿಸಿದ ಸಂಸ್ಥೆ ಅಧ್ಯಕ್ಷ ಸುಹಾಸ ಜೋಷಿ ಮಾತನಾಡಿ ಸಂಘ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು. ನಿದರ್ೆಶಕ ಪಾರೆಸ ಮಲಾಜಿ ಸ್ವಾಗತಿಸಿದರು. ರೈತರಿಗೆ ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಪೈಪ ಲೈನ್ ಸಾಲ ನೀಡಲಾಯಿತು. ಸಂಘದ ವತಿಯಿಂದ ರಮೇಶ ಕತ್ತಿಯವರಿಗೆ ಅಭಿನಂದಿಸಲಾಯಿತು.

ಸಂಕೇಶ್ವರ ಟಿ.ಎ.ಪಿ.ಎಮ್.ಎಸ್ ಅಧ್ಯಕ್ಷ ಈರಣ್ಣಾ ಹಾಲದೇವರ ಮಠ, ಶಂಕರರಾವ ಬಾಂಧುರಗೆ ಹುಕ್ಕೇರಿ ಡಿ.ಸಿ.ಸಿ ಬ್ಯಾಂಕ್ ಟಿ.ಎಸ್.ಓ ಎನ್ ಎಸ್ ಬಿರಾದಾರ ಪಾಟೀಲ, ಯಮಕನಮರಡಿ ವಲಯ ಬ್ಯಾಂಕ್ ನಿರೀಕ್ಷಕ ರಾಜು ಮುನ್ನೋಳಿ, ಗಣ್ಯರಾದ ಈರಣ್ಣಾ ದುಗಾಣಿ, ಸದಾನಂದ ತುಬಚಿ, ಮಹೇಶ ತುಬಚಿ, ನಿದರ್ೇಶಕ ನಿಂಗಪ್ಪಾ ತೇಲಿ, ಶ್ರೀಕೃಷ್ಣ ಜೋಷಿ, ಶ್ರೀಕಾಂತ ಅವಲಕ್ಕಿ, ರಾಣಪ್ಪಾ ತಬರಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಮಹಾದೇವ ನಗಾರಿ ನಿರೂಪಿಸಿದರು. ಶ್ರೀಕಾಂತ ಅವಲಕ್ಕಿ ವಂದಿಸಿದರು.