ಚೈನಾಮನ್ ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಮಾಡಲಿಲ್ಲ: ಕೊಹ್ಲಿ


ಕಾಡರ್ಿಫ್ 07: ಮೊದಲ ಟಿ20 ಪಂದ್ಯದಲ್ಲಿ ಆಂಗ್ಲರ ವಿರುದ್ಧ 5 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುಲ್ದೀಪ್ ಯಾದವ್ ಸ್ಪಿನ್ ಎರಡನೇ ಪಂದ್ಯದಲ್ಲಿ ಮೋಡಿ ಮಾಡಲಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.  

ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಎಚ್ಚರಿಕೆಯಿಂದ ಆಡಿದ್ದರಿಂದ ಪಂದ್ಯದ ಫಲಿತಾಂಶ ಬದಲಾಯಿತು. ಕುಲ್ದೀಪ್ ಬೌಲಿಂಗ್ ಎದುರಿಸಲು ಇಂಗ್ಲೆಂಡ್ ಬ್ಯಾಟ್ಸ್ ಮನ್ಗಳು ತೀವ್ರ ಕಸರತ್ತು ನಡೆಸಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.  

ಕುಲ್ದೀಪ್ ಯಾದವ್ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರು. ಅದನ್ನು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ರಕ್ಷಣಾತ್ಮಕವಾಗಿ ಆಡಿದರು. ಇದು ಆಂಗ್ಲರಿಗೆ ಪಂದ್ಯ ಗೆಲ್ಲಲು ಸಾಧ್ಯವಾಯಿತು ಎಂದರು.  

ಇನ್ನು ಆರಂಭಿಕ ಆಟಗಾರರ ವೈಫಲ್ಯ ಸಹ ತಂಡ ಕಡಿಮೆ ಮೊತ್ತ ಪೇರಿಸಲು ಕಾರಣವಾಯಿತು. ರೋಹಿತ್ ಶಮರ್ಾ 5, ಶಿಖರ್ ಧವನ್ 10 ಮತ್ತು ಕೆಎಲ್ ರಾಹುಲ್ 6 ರನ್ ಸಿಡಿಸಿ ಪೆವಿಲಿಯನ್ ಸೇರಿದ್ದರು. ಈ ಎಲ್ಲಾ ಕಾರಣಗಳು ತಂಡ ಪಂದ್ಯವನ್ನು ಸೋಲಲು ಕಾರಣವಾಯಿತು ಎಂದರು.  

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಅಲ್ಪಮೊತ್ತ ಪೇರಿಸಿತು. 149 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಇನ್ನು 2 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿದರು.