ಲೋಕದರ್ಶನ ವರದಿ
ಚಡಚಣ 13: ಸ್ಥಳೀಯ ಜವಳಿ ವ್ಯಾಪಾರಿ ಅಜೀತ ಮುತ್ತಿನ ಅವರ ಮೇಲೆ ಮಾರಣಾಂತಿಕ ಹಲ್ಲೆಗೈದ ಆರೋಪಿಗಳನ್ನು ಬಂಧಿಸುವುದು ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೇ 16 ರಂದು ಚಡಚಣ ಬಂದ್ಗೆ ಕರೆ ನೀಡಲಾಗಿದೆ ಎಂದು ಕರವೇ ವಲಯಾಧ್ಯಕ್ಷ ಸೋಮಶೇಖರ ಬಡಿಗೇರ ಹೇಳಿದರು.
ಪಟ್ಟಣದ ಎಪಿಎಂಸಿ ಆಡಳಿತ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಬಂದ್ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಗಣ್ಯ ಕಿರಾಣಿ ವ್ಯಾಪಾರಿ ಎಸ್.ಆರ್. ಅವಜಿ ಮಾತನಾಡಿ, ಮೇ 15 ರಂದು ಪಟ್ಟಣದ ವಾರದ ಸಂತೆ ನೆರವೇರಲಿದ್ದು, ಅಂದು ಬಂದ್ ಆಚರಿಸಿದರೆ ಸಾಕಷ್ಟು ಬಡ ಕುಟುಂಬಗಳ ಆಥರ್ಿಕ ಸ್ಥಿತಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ, ಪಟ್ಟಣದ ಇತಿಹಾಸ ಕೆದಕಿದರೆ ಎಂದಿಗೂ ಬುಧವಾರ ಬಂದ್ ಆಚರಿಸಿಲ್ಲ. ಮೇ 16 ರಂದು ಇಡೀ ದಿನ ಬಂದ್ ಆಚರಿಸಲು ಸವರ್ಾನುಮತದಿಂದ ತೀರ್ಮಾನಿಸಲಾಯಿತು
ಅಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬಂದ್ ಆಚರಿಸಲು ನಿರ್ಧರಿಸಲಾಗಿದ್ದು, ತುತರ್ು ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು, ಬಸ್, ಆಟೋ, ಮ್ಯಾಕ್ಸಿಕ್ಯಾಬ್, ಸಿನಿಮಾ ಮಂದಿರ ಸೇರಿ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ, ಪ್ರತಿಯೊಬ್ಬರೂ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಬೇಕು.
ಕಿರಾಣಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಡಿ. ಪಾವಲೆ, ಸರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಎಸ್. ಬಿರಾದಾರ, ಗಣ್ಯ ವರ್ತಕರಾದ ರಾಜೇಂದ್ರ ಮುತ್ತೀನ, ರವಿ ಪಾವಲೆ, ಮಹಾದೇವ ಯಂಕಂಚಿ, ಸಂತೋಷ ವನಕುದರೆ, ಉದಯ ಅವಟಿ, ಎಪಿಎಂಸಿ ನಿದರ್ೆಶಕ ಬಾಬು ಚವಾಣ್, ಪಪಂ ಮಾಜಿ ಸದಸ್ಯ ರಾಜು ಕೋಳಿ, ಸಂಘಟನೆಗಳ ಮುಖಂಡರಾದ ಪ್ರಭಾಕರ ನಿರಾಳೆ, ಮಹಾದೇವ ಬನಸೋಡೆ, ದಶರಥ ಬನಸೋಡೆ, ಚೇತನ ಮಠ, ಶಕೀಲ ಖಾಟಿಕ, ರಾಹುಲ ಲೋಖಂಡೆ, ವಿಕಾಸ ಮಲ್ಲಾಡಿ, ನಾಗೇಶ ಗಾಯಕವಾಡ ಸೇರಿ ಮತ್ತಿತರರಿದ್ದರು.