ಲೋಕದರ್ಶನ ವರದಿ
ಚಡಚಣ 12: ಸಮೀಪದ ನಿವರಗಿಯಿಂದ ಭಂಢರಕವಟೆ ಮಾರ್ಗ ಮಧ್ಯದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿ ಹಿನ್ನಲೆ ರೈತರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರೈತರು, ವಿದ್ಯಾರ್ಥಿಗಳು ಹಾಗೂ ವೃದ್ಧರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ತೀವ್ರ ತೊಂದರೆ ಅನುಭವಿಸುತ್ತಿದ್ದು. ಕಾರಣ ರಸ್ತೆ ಬದುಗಳಲ್ಲಿರುವ ಕೇಲವರು ರಸ್ತೆ ಒತ್ತುವರಿ ಮಾಡಿರುವುದರಿಂದ ರಸ್ತೆಯು ಚಿಕ್ಕದಾಗಿದ್ದು. ಅಲ್ಲದೇ ರೈತರ ಜಮೀನುಗಳಲ್ಲಿನ ನೀರು ಕೂಡಾ ರಸ್ತೆ ಮೇಲೆ ನಿಂತು ರಸ್ತೆ ಕೆಸರುಮಯವಾಗುತ್ತಿರುವುದ್ದಲ್ಲದೆ. ಮಳೆಗಾಲದಲ್ಲಂತು ಈ ರಸ್ತೆಯ ಮೇಲೆ ತಿರುಗಾಡುವುದು ದುಸ್ಥರವಾಗುತ್ತಿದ್ದು. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ. ರಸ್ತೆ ವತ್ತುವರಿಯನ್ನು ತೆರವುಗೊಳಿಸಿ. ರಸ್ತೆಯನ್ನು ದುರಸ್ಥಿಗೊಳಿಸಬೇಕಾಗಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ರಸ್ತೆ ತುಂಬ ಗುಂಡು ಕಲ್ಲುಗಳು ತುಂಬಿದ್ದು. ಗಾಡಿಗಳ ಓಡಾಟದಿಂದ ಧೂಳು ಏಳ್ಳುತ್ತಿದ್ದು, ಬೈಕ್ ಸವಾರರು ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಸ್ವಲ್ಪ ಯಾಮಾರಿದರೆ ಜೀವ ಹೋಗುವುದು ಗ್ಯಾರಂಟಿ.
ಈ ಹಿಂದೆ ಇದರ ಕುರಿತು ಚಡಚಣದ ತಹಶೀಲದಾರರ ಕಾರ್ಯಾಲಯಕ್ಕು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ರೈತರಾದ ಜಯತೀರ್ಥ ಕಮಲಾಕರ, ರಾಘವೇಂದ್ರ ಕಾಂಬಳೆ, ಚಂದ್ರಶೇಖರ ಹಳದಕಿ, ಗಂಗಾಬಾಯಿ ಕರಜಗಿ, ಚನ್ನವ್ವ ದೇವರಾಯ, ರಾಜಶ್ರೀ ಕಾಂಬಳೆ ಸೇರಿದಂತೆ ಇತರರು ಆರೋಪಿಸುತ್ತಿದ್ದಾರೆ.