ಲೋಕದರ್ಶನ ವರದಿ
ಚಡಚಣ 17: ಪಟ್ಟಣದ ಪ್ರಗತಿಪರ ರೈತರಾದ ದುಂಡಪ್ಪ ನಿರಾಳೆಯವರು ಮೂಲತಃ ಕೃಷಿ ಕುಟುಂಬಕ್ಕೆ ಸೇರಿದವರು. ಮೂರು ನಾಲ್ಕು ತಲೆಮಾರುಗಳಿಂದ ಉತ್ತಮ ತಳಿಯ ಜಾನುವಾರುಗಳನ್ನು ಸಾಕುವ ಹವ್ಯಾಸ ಹೊಂದಿದವರಾಗಿದ್ದರು. ಅದನ್ನೇ ಇವರು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿರುವರು. ಇವರ ತೋಟದಲ್ಲಿ ಈಗಲೂ ಸಹ ನಾನಾ ತಳಿಯ ಸುಮಾರು 50 ಜಾನುವಾರುಗಳು ನೋಡಲು ನಮಗೆ ಸಿಗುತ್ತವೆ.
ಕನರ್ಾಟಕ ಮಹಾರಾಷ್ಟ್ರದ ರಾಜ್ಯಗಳ ಜಾತ್ರೆಗಳಲ್ಲಿ ಇವರ ಹೋರಿಯು ಜಾತ್ರಾ ಚಾಂಪಿಯನ್ ಪಡೆದು ಬಂಗಾರದ ಪದಕ ಗಳಿಸುವಲ್ಲಿ ಯಶಸ್ವಿಯಾಗುವುವು. ಈಗ ವಿಜಯಪುರ ಶ್ರೀಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ 10 ಗ್ರಾಂ (1 ತೊಲೆ) ಬಂಗಾರದ ಪದಕ ಪಡೆದು ಜಾತ್ರೆಗೆ ನಂ-1 ಆಗಿರುವುದು ವಿಶೇಷವಾಗಿದೆ. ಶುಭ್ರ ಕಾಯದ ಸೀದಾ ಸಾದಾ ಕೋಡುಗಳನ್ನು ಹೊಂದಿ ಆಕರ್ಷಕ ಮೈಕಟ್ಟು ಹೊಂದಿರುವ ರಾಜಾಹುಲಿ ಹೋರಿಯು ನೋಡುಗರಿಗೆ ಕಣ್ಣುಕುಕ್ಕುವಂತೆ ಜಾತ್ರೆಯಲ್ಲಿ ಮೋಡಿ ಮಾಡಿದೆ. ಜಾತ್ರೆಯ ಮೆರವಣಿಗೆಯಲ್ಲಿ ಹಲಗೆ ಮೇಳಕ್ಕೆ ತಕ್ಕಂತೆ ನೃತ್ಯ ಮಾಡುವುದು ಇದರ ವಿಶೇಷ. ರೈತ ದುಂಡಪ್ಪ ನಿರಾಳೆಯವರ ಸಹೋದರರು ಈ ಕಾರ್ಯಕ್ಕೆ ಸಾಥ ನೀಡಿ ಸಹಾಯ ಮಾಡುವುದುಂಟು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಈ ಹೋರಿ ಇರುವ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಖರೀದಿಕೊಡಲು ಕೇಳಿದರು. ಆದರೆ ಮಾಲೀಕ ದುಂಡಪ್ಪ ನಿರಾಳೆಯವರು ಅದನ್ನು ನಿರಾಕರಿಸಿದರು