ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಲೋಕದರ್ಶನ ವರದಿ

ಬಸವನಬಾಗೇವಾಡಿ 05: ಮಹಿಳೆಯರು ಸ್ವ-ಉದ್ಯೋಗಿಗಳಾಗಿ ಅಥರ್ಿಕವಾಗಿ ಸಧೃಢಗೊಂಡಲ್ಲಿ ದೇಶ ಅಭಿವೃದ್ಧಿ ಪಥದತ್ತ ಮುನ್ನೆಡೆಯಲು ಸಾಧ್ಯವಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೆಶಕ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

  ತಾಲೂಕಿನ ತೆಲಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ನೇತೃತ್ವದಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ. ವೀರೇಂದ್ರ ಹೆಗಡೆಯವರ ಧರ್ಮಪತ್ನಿ ಮಾತೋಶ್ರೀ ಹೇಮಾವತಿ ಅಮ್ಮನವರು 1992ರಲ್ಲಿ ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಈ ಜ್ಞಾನವಿಕಾಸ ಕಾರ್ಯಕ್ರಮ ಹಮ್ಮೀಕೊಳ್ಳಲಾಗಿದೆ ಎಂದು ಹೇಳಿದರು.

  ಈ ಕಾರ್ಯಕ್ರಮದಲ್ಲಿ ಆರು ಹಂತದ ವಿಷಯಗಳಾದ ಕೌಟುಂಬಿಕ ಸಾಮರಸ್ಯ, ಆರೋಗ್ಯ ಮತ್ತು ನೈರ್ಮಲ್ಯ, ಶಿಕ್ಷಣ, ಪೌಷ್ಠಿಕ ಆಹಾರ, ಕಾನೂನು ಸೇರಿದಂತೆ ಇತರೆ ಕಾರ್ಯಕ್ರಮಗಳು ಇಲಾಖೆದಾಗಿವೆ ಎಂದು ಹೇಳಿದ ಅವರು ಮಹಿಳೆ ಪ್ರತಿಯೊಂದು ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪುರಷನಷ್ಟೆ ಸರಿಸಾಟಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದರು.

     ಈ ಸಂದರ್ಭದಲ್ಲಿ ವಲಯ ಮೇಲ್ವಾಚಾರಕ  ಶಿಲ್ಪಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಧಾಮಣಿ, ಗ್ರಾಪಂ ಅಧ್ಯಕ್ಷ ಸಿದ್ಧನಗೌಡ ಅಂಗಡಗೇರಿ, ಗ್ರಾಪಂ ಸದಸ್ಯ ಹಣಮಂತ ಶಾಂತರೆಡ್ಡಿ, ಸದಸ್ಯೆ ವಿದ್ಯಾ, ತಿಮ್ಮಣ್ಣ ಬಂಡಿವಡ್ಡರ, ರಾಹುರಾಯ ಕುಲಕಣರ್ಿ, ರವಿ ಬಾದರದಿನ್ನಿ ಸೇವಾ ಪ್ರತಿನಿಧಿಗಳಾದ ಸಾವಿತ್ರಿ ವಡ್ಡರ, ಒಕ್ಕೂಟದ ಪದಾಧಿಕಾರಿ ರೇಖಾ ಶಾಂತರೆಡ್ಡಿ ಸೇರಿದಂತೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

ಕ್ಯಾಪಷನ್:  ಬಸವನಬಾಗೇವಾಡಿ: ತಾಲೂಕಿನ ತೆಲಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ನೇತೃತ್ವದಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೆಶಕ ಶ್ರೀನಿವಾಸ ಪೂಜಾರಿ ಮಾತನಾಡಿದರು.