ಮಕ್ಕಳು ತಾಯಂದಿರ ಆಹಾರ ಪ್ಯಾಕೇಜ್ ರೂಪದಲ್ಲಿ ಬೇಡ- ಅಂಗನವಾಡಿ ಮುಚ್ಚಬೇಡಿ
ಕಾರವಾರ: ಅಂಗನವಾಡಿ ಮಕ್ಕಳ ಮತ್ತು ಬಸುರಿ ತಾಯಂದಿರಿಗೆ ಅಂಚೆ ಕಚೇರಿಯ ಮೂಲಕ ಪ್ಯಾಕೇಜ್ ರೂಪದಲ್ಲಿ ಆಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಯೋಜನೆ ರೂಪಿಸಿದ್ದು, ಇದರಿಂದಾಗಿ ಅಂಗನವಾಡಿಗಳಲ್ಲಿ ಬಿಸಿಯೂಟ ತಯಾರು ಮಾಡುತ್ತಿದ್ದ ಸಾವಿರಾರು ಅಂಗನವಾಡಿ ಸಹಾಯಕಿಯರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟಿಸಿ ಅಂಗನವಾಡಿ ಸಹಾಯಕಿಯರು ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು. ಐಸಿಡಿಎಸ್ ನೇರ ನಗದು ವಗರ್ಾವಣೆ ಮಾಡುವುದು ಬೇಡ. ಅಂಗನವಾಡಿ ಜಾಗದಲ್ಲಿ ಸಕರ್ಾರಿ ಶಾಲೆಗಳಲ್ಲಿ ನರ್ಸರಿ ಪ್ರಾರಂಭಿಸಲು ಸಕರ್ಾರ ತಿಮರ್ಾನಿಸಿದ್ದು ಇದು ಈಗ ಅಂಗನವಾಡಿಯಲ್ಲಿ ಕೆಲಸಕ್ಕೆ ಇರುವವರ ಉದ್ಯೋಗ ಕಸಿಯಲಿದೆ ಮತ್ತು ವೇತನ ಸಹ ಕಡಿಮೆಯಾಗಲಿದೆ ಎಂಬ ಆತಂಕವನ್ನು ಪ್ರತಿಭಟನಾಕಾರರು ತೋಡಿಕೊಂಡರು.
ಕೇಂದ್ರ ಸಕರ್ಾರ ಬಜೆಟ್ನಲ್ಲಿ ಐಡಿಡಿಎಸ್ ಘಟಕಕ್ಕೆ ತನ್ನ ಪಾಲನ್ನು ಮೊದಲು ಶೇ.60 ನೀಡುತ್ತಿತ್ತು. ಈಗ ಅದು 25ಕ್ಕೆ ಕಡಿತ ಮಾಡಿದೆ. ಈ ಕಾರಣಕ್ಕಾಗಿ ಕೇಂದ್ರದ ಬಿಜೆಪಿ ಸಕರ್ಾರವನ್ನು ವಿರೋಧಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ನೀಡುವಾಗ ವಿವರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗೆ ಸಹ ಮನವಿ ನೀಡಿದ ಅವರು ವೇತನ 8000 ರೂ. ಇದ್ದು, ಇದನ್ನು ಹೆಚ್ಚಿಸಿ. ಆಹಾರವನ್ನು ಪ್ಯಾಕೇಜ್ ರೂಪದಲ್ಲಿ ನೀಡಿ, ನಮ್ಮ ಕೆಲಸ ಕಸಿದುಕೊಳ್ಳಬೇಡಿ.
ಸಂಬಳವನ್ನು ತಿಂಗಳಿಗೆ 750 ರೂ.ಗಳಿಗೆ ಇಳಿಸಬೇಡಿ ಎಂದು ಮನವಿ ಮಾಡಿಕೊಂಡರು. ಗಭರ್ಿಣಿ ಸ್ತ್ರಿಯರಿಗೆ ಪೌಷ್ಠಿಕ ಆಹಾರ ಬೇಯಿಸಿ ಕೊಡುತ್ತಿದ್ದೇವೆ. ಮಾತೃಪೂರ್ಣ ಯೋಜನೆಯನ್ನು ಜಾರಿ ಮಾಡಿರುವ ನಮ್ಮನ್ನು ಸಕರ್ಾರ ಈಗ ಕೈ ಬಿಡಬಾರದು ಎಂದು ರಾಜ್ಯ ಸಕರ್ಾರವನ್ನು ವಿನಂತಿಸಿದರು.
ಇದಕ್ಕೂ ಮುನ್ನ ನಗರದ ಮುಖ್ಯಬೀದಿಯಲ್ಲಿ ಅಂಗನವಾಡಿ ನೌಕರರು ಮತ್ತು ಸಹಾಯಕಿಯರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ರಾಜ್ಯ ಸಕರ್ಾರಗಳ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಎದುರು ಸಾಂಕೇತಿಕ ಧರಣಿ ನಡೆಸಿದರು. ನಂತರ ಸಕರ್ಾರಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 3000 ರೂ.ಪಿಂಚಣಿ ನೀಡಬೇಕು. 18000 ರೂ. ಕನಿಷ್ಠ ಕೂಲಿ ನೀಡಬೇಕು. ಅಂಗನವಾಡಿಗಳನ್ನು ಮುಂದುವರಿಸಬೇಕು.
ಕೇಂದ್ರ ಅಂಗನವಾಡಿಗಳಿಗೆ ನೀಡುವ ಬಜೆಟ್ ಕಡಿತಗೊಳಿಸಬಾರದು ಎಂಬ ಬೇಡಿಕೆಗಳನ್ನು ಅಧಿಕಾರಿಗಳ ಮೂಲಕ ಸಲ್ಲಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಂಗನವಾಡಿ ನೌಕರರು ಆಗಮಿಸಿದ್ದರು. ಮೋಹಿನಿ ನಮ್ಸೇಕರ್, ಸುಧಾ ಭಟ್, ರಮಾ ಭಂಡಾರಿ, ಗೀತಾ ರಾಯ್ಕರ್, ಕವಿತಾ ನಾಯ್ಕ, ಪ್ರತಿಭಟನೆಯ ನೇತೃತ್ವ ವಹಿಸಿದ್ದರು.