ಲೋಕದರ್ಶನ ವರದಿ
ಬೆಳಗಾವಿ16 : ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಚಿಕ್ಕಮಕ್ಕಳ ಮಧುಮೇಹ ಚಿಕಿತ್ಸೆ ಹಾಗೂ ನಿಯಂತ್ರಣದಲ್ಲಿ ನಿರಂತರವಾಗಿ ಗುಣಮಟ್ಟ ಕಾಯ್ದುಕೊಂಡು ಮಕ್ಕಳ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತಿರುವುದಕ್ಕೆ ಜರ್ಮನಿಯ ಸ್ವೀಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಇತ್ತೀಚಿಗೆ ಜರ್ಮನಿಯ ಹನ್ನೊವರ ನಗರದಲ್ಲಿ ಅಂತರಾಷ್ಟ್ರೀಯ ಚಿಕ್ಕಮಕ್ಕಳ ಮತ್ತು ತರುಣರ ಮಧುಮೇಹ ಸಂಸ್ಥೆ, ಯುರೋಪಿನ ಅಂತರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನ ಹಾಗೂ ಚಿಕ್ಕಮಕ್ಕಳ ಮಧುಮೇಹ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವೀಟ ಎಂಬ ಸಂಸ್ಥೆಯು ಕೊಡಮಾಡುವ ಚಿಕ್ಕಮಕ್ಕಳ ಮಧುಮೇಹ ಅತ್ಯುತ್ತಮ ಚಿಕಿತ್ಸಾ ಕೇಂದ್ರ ಎಂದು ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮಧುಮೇಹ ಕೇಂದ್ರದ ಚಿಕ್ಕಮಕ್ಕಳ ಮಧುಮೇಹ ತಜ್ಞವೈದ್ಯರಾದ ಡಾ. ಸುಜಾತಾ ಜಾಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿದರ್ೇಶಕರಾದ ಡಾ. ಎಂ ವಿ ಜಾಲಿ ಅವರು ಉಪಸ್ಥಿತರಿದ್ದರು.
ಚಿಕ್ಕಮಕ್ಕಳ ಮಧುಮೇಹ ಕೇಂದ್ರವು ಮಕ್ಕಳ ದಾಖಲೆಗಳ ಸರಿಯಾದ ನಿರ್ವಹಣೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ಚಿಕ್ಕಮಕ್ಕಳ ಮಧುಮೇಹ ತಜ್ಞವೈದ್ಯರು, ನಸರ್ಿಂಗ ಸಿಬ್ಬಂದಿ, ಡೈಟಿಸಿಯನ್, ಆಪ್ತಸಮಾಲೋಚಕರು, ಸಮಾಜ ಸೇವಕರನ್ನೋಳಗೊಂಡ ಕೇಂದ್ರ ರಾಷ್ಟ್ರೀಯ ಮಟ್ಟದ ಮಧುಮೇಹ ಜಾಗೃತಿ ಶಿಕ್ಷಣವನ್ನು ನೀಡುವಲ್ಲಿ ತಲ್ಲೀನವಾಗಿ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ಸ್ವೀಟ್ ಪ್ರಶಸ್ತಿಯನ್ನು ನೀಡಲಾಗಿದೆ.