ಅಂಬಟಿ ರಾಯ್ಡು ಟ್ವಿಟಿಗೆ ಉತ್ತರ ಕೊಟ್ಟ ಬಸಿಸಿಐ

 

ಹೈದ್ರಾಬಾದ್  ಬ್ಯಾಟ್ಸ್ಮನ್  ಅಂಬಟಿ ರಾಯ್ಡು  ಅವರ ಟ್ವಿಟ್ಟರ್   ಕೊನೆಗೂ  ಬಿಸಿಸಿಐ  ಉತ್ತರ  ಕೊಟ್ಟಿದೆ. 

ಮುಂಬರುವ  ವಿಶ್ವಕಪ್ನಲ್ಲಿ ತಮಗೆ  ಸ್ಥಾನ ನೀಡಿಲ್ಲ  ಎಂದು ಸ್ಫೋಟಕ ಬ್ಯಾಟ್ಸ್ಮನ್  ಅಂಬಟಿ  ರಾಯ್ಡು  ಬೇಸರ ವ್ಯಕ್ತಪಡಿಸಿ ಈ  ಬಾರಿಯ  ವಿಶ್ವಕಪ್ನ್ನ  3ಡಿ  ಕನ್ನಡಕ  ಹಾಕಿಕೊಂಡು  ನೋಡುತ್ತೇನೆ ಎಂದು  ಟ್ವೀಟ್  ಮಾಡಿ ಬಿಸಿಸಿಐಯನ್ನ ವ್ಯಂಗ್ಯವಾಡಿದ್ದರು.  ಈ  ಟ್ವೀಟ್  ಭಾರತೀಯ ಕ್ರಿಕೆಟ್ನಲ್ಲಿ  ಭಾರೀ  ಚರ್ಚೆ  ನಡೆದಿತ್ತು.    

ಅಂಬಟಿ ರಾಯ್ಡು  ಅವರನ್ನ  ಕೈಬಿಟ್ಟಿದಕ್ಕೆ  ಆಯ್ಕೆ ಸಮಿತಿ  ಮುಖ್ಯಸ್ಥ  ಎಂ.ಎಸ್.ಕೆ ಪ್ರಸಾದ್  ಸಮಥರ್ಿಸಿಕೊಂಡಿದ್ದರು. ಎರಡು  ವರ್ಷದ ಹಿಂದೆ ಚಾಂಪಿಯನ್ಸ್ ಟ್ರೋಫಿ  ನಂತರ  ನಾಲ್ಕನೆ  ಕ್ರಮಾಂಕದಲ್ಲಿ  ಕೆಲವು  ಆಟಗಾರರ  ಮೇಲೆ ಪ್ರಯೋಗ ಮಾಡಿದೆವು. ದಿನೇಶ್  ಕಾರ್ತೀಕ , ಶ್ರೇಯಸ್ ಅಯ್ಯರ್ ಮತ್ತು  ಮನೀಶ್  ಪಾಂಡೆ  ಇವರನ್ನ  ಮಧ್ಯಮ ಕ್ರಮಾಂಕದಲ್ಲಿ  ಆಡಿಸಿದೆವು. ಮೂರು ಕೋನದಲ್ಲೂ ರಾಯ್ಡು  ಮತ್ತು  ಶಂಕರ   ಹೆಚ್ಚು ಅವಕಾಶ ಕೊಟ್ಟಿದ್ದೇವೆ.   ಶಂಕರ್  ಬ್ಯಾಟಿಂಗ್, ಬೌಲಿಂಗ್  ಜೊತೆಗೆ  ಒಳ್ಳೆ ಫೀಲ್ಡರ್  ಆಗಿದ್ದಾರೆ. ಈ ಕಾರಣಕ್ಕಾಗಿ  ಶಂಕರಗೆ  ನಾಲ್ಕನೆ  ಕ್ರಮಾಂಕದಲ್ಲಿ  ಆಡುವುದನ್ನ ಎದುರು  ನೋಡುತ್ತಿದ್ದೇವೆ ಎಂದು  ಎಂ.ಎಸ್.ಕೆ ಪ್ರಸಾದ್  ಹೇಳಿದ್ದಾರೆ.     

ನಾವು  ರಾಯ್ಡು  ಅವರ ಟ್ವೀಟನ್ನ  ಓದಿದ್ದೇವೆ.   ಇಂಥ ಸಮಯದಲ್ಲಿ  ಅವರ ಭಾವನೆಗಳನ್ನ ಪರಿಗಣನೆಗೆ  ತೆಗೆದುಕೊಳ್ಳೋಣ. ಅವರ ನೋವನ್ನ ಮರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ.  ಅಂಬಟಿ ರಾಯ್ಡು  ಹೆಚ್ಚುವರಿ  ಆಟಗಾರರಾಗಿರೋದ್ರಿಂದ  ಯಾರಾದರೂ ಗಾಯಗೊಂಡರೇ ಆಡಲು  ಅವಕಾಶ ಸಿಗುತ್ತದೆ.