ಬಳ್ಳಾರಿ: ಸಂಗ್ರಹಾಲಯದ ಅಭಿವೃದ್ಧಿ ಕೈಗೊಳ್ಳಿ

ಲೋಕದರ್ಶನ ವರದಿ

ಬಳ್ಳಾರಿ 10: ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳ ಸಂಗ್ರಹಾಲಯ ಸಿದ್ಧಗೊಳ್ಳುತ್ತಿದ್ದು, ಇದಕ್ಕೆ ರಾಬಟರ್್ ಬ್ರೂಸ್ಫೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯವೆಂದು ನಾಮಕಾರಣ ಮಾಡಲು ನಿರ್ಧರಿಸಲಾಗಿದೆ. ಇದು ಬರುವ ಜ.26ರಂದು ಲೋಕಾರ್ಪಣೆಯಾಗಲಿದ್ದು, ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯದ ಅಭಿವೃದ್ಧಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಕೆಲವು ಪ್ರದೇಶಗಳು ಪ್ರಾಗೈತಿಹಾಸಿಕ ಕಾಲದ ನೆಲೆಗಳಾಗಿದ್ದವು. ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿಡಲಾಗಿದೆ. ಇದರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳನ್ನು ಕ್ಷೀಪ್ರಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ನಿರ್ಮಾತಿ ಕೇಂದ್ರ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಸಂಗನಕಲ್ಲು ಗ್ರಾಮದ ಬಳಿಯ ಬೆಟ್ಟಗಳು ಪ್ರಾಚೀನ ಮಾನವನ ವಾಸದ ಕುರುಹುಗಳನ್ನು ಹೊಂದಿವೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿರುವ ಬೆಟ್ಟಗಳು ಐದು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೇಳುತ್ತವೆ. ಈ ಬೆಟ್ಟಗಳಲ್ಲಿ ನವಶಿಲಾಯುಗದಿಂದ ಕಬ್ಬಿಣದ ಯುಗದವರೆಗಿನ ಮನುಷ್ಯ ನೆಲೆಯ ಅವಶೇಷಗಳಿವೆ. 

ಶಿಲಾ ಉಪಕರಣಗಳು, ಮಡಕೆಗಳು, ಉತ್ಖನದ ವೇಳೆ ದೊರೆತ ಇತ್ಯಾದಿ ವಸ್ತುಗಳನ್ನು ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ಕಲಾ ಪ್ರದರ್ಶನಾಲಯ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಅವರು ಸಭೆಯಲ್ಲಿ ವಿವರಿಸಿದರು.

ಬ್ರೂಸ್ಫೂಟ್ ಹೆಸರು ನಾಮಕರಣ: 

ದೇಶದಲ್ಲಿ ಆದಿಮಾನವನ ನೆಲೆಗಳನ್ನು ಗುರುತಿಸಿದ ಮೊದಲ ವ್ಯಕ್ತಿ ರಾಬಟರ್್ ಬ್ರೂಸ್ಫೂಟ್. ಸಂಗನಕಲ್ಲು ನವಶಿಲಾಯುಗದ ಕುರಿತು ಅಧ್ಯಯನ ಮಾಡಿದ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಪೂರ್ವ ಶಿಲಾಯುಗದ ಸ್ಥಳಗಳನ್ನು ಗುರುತಿಸಿದ, ಹಸುವಿನ ಸಗಣಿಯ ರಾಶಿಯಿಂದ ಸುಟ್ಟು ನಿಮರ್ಿಸಲಾಗಿರುವ ಬೂದಿ ದಿಬ್ಬಗಳು ನವಶಿಲಾಯುಗದ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಮೊದಲ ವ್ಯಕ್ತಿಯೂ ಅವರು ಈ ಹಿನ್ನೆಲೆಯಲ್ಲಿ ರಾಬರ್ಟ  ಬ್ರೂಸ್ಫೂಟ್ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಎಂದು ಹೆಸರಿಡಲು ಮ್ಯೂಜಿಯಂ ಸಮಿತಿ ತೀಮರ್ಾನಿಸಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಹಾಗೂ ಸಂಶೋಧಕ ಪ್ರೊ.ರವಿ ಕೋರಿಶೆಟ್ಟರ್ ಮಾತನಾಡಿ,ಆಫ್ರಿಕಾವನ್ನು ಮನಷ್ಯನ ಮೂಲ ನೆಲೆ ಎಂದು ಏಕೆ ಕರೆಯಲಾಗುತ್ತದೆ ಎಂಬುದರಿಂದ ಭೌಗೋಳಿಕವಾಗಿ ಉತ್ತರ ಮೈದಾನ ಪ್ರದೇಶ ಎಂದು ಕರೆಯಲಾಗುವ ಸ್ಥಳದ ನಗರೀಕರಣದವರೆಗಿನ ವಿವಿಧ ಹಂತಗಳು ಹಾಗೂ ಸಂಗನಕಲ್ಲುಗೆ ಸಂಬಂಧಿಸಿದ ವಿಷಯ ವಸ್ತುವನ್ನು ಮ್ಯೂಜಿಯಂನಲ್ಲಿ ನೋಡಬಹುದು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು  ಆಯಿಲ್ ಪೇಂಟ್ನಲ್ಲಿ ರಚಿಸಿದ ರಾಬರ್ಟ  ಬ್ರೂಸ್ಫೂಟ್ರ ಭಾವಚಿತ್ರವನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮ್ಯೂಸಿಯಂ ಸಮಿತಿ ಸದಸ್ಯ ಸಂತೋಷ ಮಾಟರ್ಿನ್, ಜಿಪಂ ಸಿಇಒ ಕೆ.ನಿತೀಶ್, ವಾರ್ತಾ  ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಭೂವಿಜ್ಞಾನಿ ಚಂದ್ರಶೇಖರ, ನಿರ್ಮಿತಿ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಇದ್ದರು.