ಗದಗ-ಲಕ್ಷ್ಮೇಶ್ವರ ಸ್ಥಳೀಯ ಮುಖ್ಯ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ದುರ್ಗತಿಯನ್ನು ಪರಿಹರಿಸುವ ಅಧಿಕಾರಿಗಳ.ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಂಬೇಡ್ಕರ್ ನಗರದ ಜನರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ.ಇಲ್ಲಿಯ ಮಕ್ಕಳು ರಸ್ತೆ ದಾಟಿ ಶಾಲೆಗೆ ಹೋಗುವದು ತುಂಬಾ ಕಷ್ಟವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ ಇಲ್ಲವೆ ಮುಂದೊಂದು ದಿನ ರಸ್ತೆ ಮದ್ಯೆಯೇ ಸಸಿ ನೆಡುವ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಆಹ್ವಾನಿಸುತ್ತೇವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇಲ್ಲಿ ವಾಹನ ತಿರುಗಾಡುವದರಿಂದ ರಸ್ತೆ ಪಕ್ಕದಲ್ಲಿರುವ ಮನೆಗಳಲ್ಲಿ ಹೆಚ್ಚಿನ ಧೂಳು ಮನೆ ಸೇರುತ್ತಿದೆ ಈ ಗುಂಡಿಯಲ್ಲಿ ಈ ಮೊದಲು ಒಂದು ಗಾಡಿಯು ಕೂಡಾ ಪಲ್ಟಿಯಾಗಿದೆ ಆದರೂ ಗಮನ ಹರಿಸದ ಅಧಿಕಾರಿಗಳು ಮುಂದೆ ಅದೆಂತಹ ದುರಂತವನ್ನು ನೋಡಬಯಸುತ್ತಿದ್ದಾರೊ ಗೊತ್ತಿಲ್ಲ. ಗಮನ ಹರಿಸಿ ಇತ್ತ ಕಡೆ ಅಧಿಕಾರಿಗಳೆ ಜನಪ್ರತಿನಿಧಿಗಳೆ ಸಾರ್ವಜನಿಕರು ಏಳಿ ಎದ್ದೇಳಿ ಎನ್ನುವ ಮೊದಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎದ್ದೇಳಲಿ ರಸ್ತೆ ಕಾಮಗಾರಿ ಪ್ರಾರಂಭವಾಗಲಿ ಎಂಬುದು ನಾಗರಿಕರ ಆಗ್ರಹವಾಗಿದೆ.