ಲೋಕದರ್ಶನ ವರದಿ
ರಾಯಬಾಗ: ಮಹಿಳೆಯೊಬ್ಬಳು ತನ್ನ ಎರಡು ಹೆಣ್ಣುಮಕ್ಕಳನ್ನು ಮನೆಯಲ್ಲಿ ಬಿಟ್ಟು ತನ್ನ ಗಂಡು ಮಗುವಿನೊಂದಿಗೆ ಹೋಗಿರುವ ಘಟನೆ ತಾಲೂಕಿನ ಕಟಕಬಾವಿ ಗ್ರಾಮದಲ್ಲಿ ಇತ್ತಿಚೆಗೆ ನಡೆದಿದೆ.
ತಾಲೂಕಿನ ಕಟಕಬಾವಿ ಗ್ರಾಮದ ಸುರೇಖಾ ಮಹಾದೇವಿ ಹಳಬರ(26) ಇವಳು ತನ್ನ 4 ವರ್ಷದ ಮಗ ವಿಠ್ಠಲ ಮಹಾದೇವ ಹಳಬರ ಈತನನ್ನು ಕರೆದುಕೊಂಡು ಇದೇ ಜುಲೈ 2ರಂದು ಬೆಳೆಗ್ಗೆ 5 ಗಂಟೆ ಸುಮಾರಿಗೆ ಮನೆಯಿಂದ ಹೋದವರು ಇನ್ನು ಬಂದಿಲ್ಲವೆಂದು ಪತಿ ಮಹಾದೇವ ಭೀಮಪ್ಪ ಹಳಬರ ರಾಯಬಾಗ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯು ಕೆಂಪು ಸೀರೆ ತೊಟ್ಟಿದ್ದು ಹಾಗೂ ಬಲಗೈ ಮೇಲೆ ಹಚ್ಚಿನ ಗುರುತು ಇದೆ, ಮಗುವಿನ ಕೊರಳಲ್ಲಿ ಬಂಗಾರದ ತಾಯತವಿದೆ ಇವರ ಬಗ್ಗೆ ಯಾರಿಗಾದರೂ ಕಂಡು ಬಂದಲ್ಲಿ ಕೂಡಲೇ ರಾಯಬಾಗ ಪೊಲೀಸ್ ಠಾಣೆ ನಂ.08331-22533 ಇಲ್ಲಿಗೆ ತಿಳಿಸಬೇಕೆಂದು ಠಾಣಾಧಿಕಾರಿ ತಿಳಿಸಿದ್ದಾರೆ.