ಉಪಚುನಾವಣೆ ಹಿನ್ನಡೆ: ಯಡ್ಡಿ ಮುಂದುವರಿಸಲು ಬಿಜೆಪಿ ಹೈ ನಿಧರ್ಾರ

ಬೆಂಗಳೂರು,ನ.21- ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯ ಪ್ರಯೋಗಕ್ಕೆ ಕೈ ಹಾಕದೆ ಬಿ.ಎಸ್.ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ವರಿಷ್ಠರು ತೀಮರ್ಾನಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಪಕ್ಷದ ಯಾವುದೇ ತೀಮರ್ಾನಗಳನ್ನು ಯಡಿಯೂರಪ್ಪ ತೆಗೆದುಕೊಂಡರೆ ಅದನ್ನು ಯಾರೊಬ್ಬರೂ ಪ್ರಶ್ನಿಸಬಾರದು. ಅವರ ತೀಮರ್ಾನಕ್ಕೆ ಎಲ್ಲರೂ ಬದ್ಧರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕೇಂದ್ರ ವರಿಷ್ಠರು ತಾಕೀತು ಮಾಡಿದ್ದಾರೆ. 

ಪಕ್ಷದ ವಿಷಯಕ್ಕೆ  ಸಂಬಂಧಿಸಿದಂತೆ ಯಡಿಯೂರಪ್ಪ ತೆಗೆದುಕೊಳ್ಳುವ ನಿಧರ್ಾರಕ್ಕೆ ನಮ್ಮ ಸಂಪೂರ್ಣವಾದ ಬೆಂಬಲವಿರುತ್ತದೆ. ಪಕ್ಷದ ಹಿತದೃಷ್ಟಿಯಿಂದ ಸಣ್ಣಪುಟ್ಟ ಬದಲಾವಣೆ ಮಾಡಿದರೂ ಯಾವುದೇ ರೀತಿಯ ಅಪಸ್ವರ ತೆಗೆಯದೆ ಎಲ್ಲರೂ ಕಾಯ, ವಾಚ, ಮನಸ್ಸಿನಿಂದ ಕೆಲಸ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ನಮಗೆ ಕನರ್ಾಟಕದಿಂದ ಉತ್ತಮ ಫಲಿತಾಂಶ ನೀಡಬೇಕೆಂದು ಹೈಕಮಾಂಡ್ ಸೂಚಿಸಿದೆ. 

ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಇಲ್ಲವೇ ಪಕ್ಷದಲ್ಲಿ ತೆಗೆದುಕೊಳ್ಳುವ ತೀಮರ್ಾನದ ಬಗ್ಗೆ  ಗೊಂದಲ ಸೃಷ್ಟಿಸುವುದು,  ಅಸಹಕಾರ ತೋರುವುದು, ಪಕ್ಷದ ವಾತಾವರಣವನ್ನು ಹಾಳುಗೆಡಹುವ ಕೆಲಸವನ್ನು ಯಾರೂ ಮಾಡಬಾರದು. ಎಲ್ಲರೂ ಒಟ್ಟಾಗಿ ಸಹಮತದೊಂದಿಗೆ ಲೋಕಸಭಾ ಚುನಾವಣೆಗೆ  ಸಜ್ಜಾಗಬೇಕೆಂದು  ಸಲಹೆ ಮಾಡಿದೆ. 

ನಾಯಕತ್ವ ಬದಲಾವಣೆಗೆ ಹಿಂದೇಟು: 

ಸದ್ಯದ ಪರಿಸ್ಥಿತಿಯಲ್ಲಿ ಕನರ್ಾಟಕದ ಬಿಜೆಪಿ ಘಟಕಗಳಿಗೆ ನಾಯಕತ್ವ ಬದಲಾವಣೆ ಮಾಡಲು ಹೈಕಮಾಂಡ್ ಮೀನಾಮೇಷ ಎಣಿಸುತ್ತಿದೆ. ವಿಧಾನಸಭಾ ಚುನಾವಣೆಗೆ  ಪಕ್ಷ ಅಧಿಕಾರ ಹಿಡಿಯದಿದ್ದರೂ 104 ಸ್ಥಾನ ಗೆದ್ದದ್ದು ಸಾಧಾರಣ ಮಾತಲ್ಲ. ಇದರಲ್ಲಿ ಸ್ಥಳೀಯ ನಾಯಕರ ಶ್ರಮವನ್ನು ಅಲ್ಲಗಳೆಯುವಂತಿಲ್ಲ.

 ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಯಡಿಯೂರಪ್ಪನವರ ನಾಯಕತ್ವದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಥಾನ ಗಳಿಸಲು ಸಾಧ್ಯವಾಯಿತು. ಈಗಲೂ ಯಡಿಯೂರಪ್ಪನವರ ನಾಯಕತ್ವಕ್ಕೆ ಸಾಕಷ್ಟು ಮನ್ನಣೆ ಇದೆ ಎಂಬುದು ಈ ಫಲಿತಾಂಶದಿಂದಲೇ ಸಾಬೀತಾಗಿದೆ.  ಪಕ್ಷದಲ್ಲಿ ಅವರನ್ನು ಕಡೆಗಣಿಸುವ ಮಾತೇ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. 

ಯಡಿಯೂರಪ್ಪನವರಿಗೆ ಪಯರ್ಾ ಯವಾಗಿ ನಾಯಕತ್ವವನ್ನು ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೆ ಬೇರೆ ಯಾರೊಬ್ಬರೂ ಪಕ್ಷವನ್ನು ಸಂಘಟಿಸಲು ಸಾಧ್ಯವಿಲ್ಲ. 

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸಕರ್ಾರವನ್ನು ಮೆಟ್ಟಿ  ಲೋಕಸಭೆ ಚುನಾವಣೆ ಗೆಲ್ಲಬೇಕಾದರೆ ಯಡಿಯೂರಪ್ಪ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬೇಕು.

ವೀರಶೈವ ಲಿಂಗಾಯಿತ ಸಮುದಾಯ ಬಿಜೆಪಿ ಬೆಂಬಲಕ್ಕಿದೆ ಎಂಬುದು ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಆ ಸಮುದಾಯದವರು ಗೆದ್ದಿರುವುದೇ ನಿದರ್ಶನವಾಗಿದೆ. 

ಬಳ್ಳಾರಿ, ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು. ಯಾವುದೇ ಉಪಚುನಾವಣೆಯಲ್ಲಿ ಸಾಮಾನ್ಯವಾಗಿ ಸಕರ್ಾರದ ಪರವಾಗಿಯೇ ಫಲಿತಾಂಶ ಬರುತ್ತದೆ. 

ಈ ಹಿಂದೆ ಕನರ್ಾಟಕದಲ್ಲಿ ನಡೆದ ಅನೇಕ ಉಪಚುನಾವಣೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಬಹುತೇಕ ಸ್ಥಾನಗಳನ್ನು ಗೆದ್ದಿತ್ತು. ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಮಹಾಚುನಾವಣೆಯಲ್ಲಿ ಫಲಿತಾಂಶ ವ್ಯತಿರಿಕ್ತವಾಗಿ ಹೊರಬಂದಿತ್ತು. 

ಉಪಚುನಾವಣೆಯನ್ನೇ ಆಧಾರವಾಗಿಟ್ಟುಕೊಂಡು ನಾಯಕತ್ವ ಬದಲಾವಣೆ ಮಾಡುವ ಅಗತ್ಯವಿಲ್ಲ. ಲೋಕಸಭೆ ಚುನಾವಣೆವರೆಗೂ ಬಿಎಸ್ವೈ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ.  ಅಲ್ಲಿಯ ತನಕ ಯಾವುದೇ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎಂದು ವರಿಷ್ಠರು ತಿಳಿಸಿದ್ದಾರೆ ಎಂದು  ಮೂಲಗಳು  ತಿಳಿಸಿವೆ.