ಗುರುವಿನ ಮಾರ್ಗದರ್ಶನದಿಂದ ಬದುಕು ಉಜ್ವಲ: ಮಿಸಾಳೆ

ಅಥಣಿ 10: ಉತ್ತಮ ಮಾರ್ಗದರ್ಶನ, ಜ್ಞಾನ, ಕೌಶಲ್ಯ, ಚಿಂತನೆ, ಅರಿವು, ಸಂಶೋಧನಾತ್ಮಕ ಅಭ್ಯಾಸಗಳಿಂದ ವಿದ್ಯಾಥರ್ಿಗಳು ಮುನ್ನುಗ್ಗಿದ್ದಾದರೆ ಜೀವನದಲ್ಲಿ ಯಾವುದೇ ಮಟ್ಟದ ಸಾಧನೆಯ ಶಿಖರಗಳನ್ನು ತಲುಪುಬಹುದೆಂದು 'ಇಸ್ರೊ ವಿಜ್ಞಾನಿ ಡಾ. ವಿಷ್ಣುಪಂತ ಎನ್. ಮಿಸಾಳೆ ವಿದ್ಯಾಥರ್ಿಗಳಿಗೆ ಕಿವಿ ಮಾತು ಹೇಳಿದರು.

ಅವರು ಕೆ.ಎಲ್.ಇ. ಸಂಸ್ಥೆಯ ಎಸ್.ಎಸ್.ಎಮ್.ಎಸ್. ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ 2018-19ನೇ ಸಾಲಿನ ಸಾಂಸ್ಕೃತಿಕ ಸಂಘಗಳ ಮತ್ತು ಕ್ರೀಡಾ ವಿಭಾಗದ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ಪದವಿ ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

     ಗುರುವಿನ ಸ್ಥಾನ ಮಹತ್ವದ್ದು, ಗುರುವಿನ ಪ್ರೀತಿ, ಕರುಣೆ ಸಂಪಾದಿಸಿ ಅವರ ಮಾರ್ಗದರ್ಶನ ಸ್ಪೂತರ್ಿ ಪ್ರೇರಣೆಯಿಂದ, ಆಶೀವರ್ಾದದಿಂದ ಬದುಕನ್ನು ಉಜ್ವಲವಾಗಿಸಿಕೊಳ್ಳಲು ಒಳ್ಳೆಯ ಮಾರ್ಗ ಎಂದು ತಿಳಿಸಿದರು. ಪ್ರ್ರಥ್ವಿಯ ನಿಗೂಢತೆ, ಆಕಾಶಕಾಯಗಳು, ಸಪ್ತಗ್ರಹಗಳು ಅದರಲ್ಲೂ ಮಂಗಳಯಾನದ ಪ್ರಯಾಣ, ಉಪಗ್ರಹಗಳು, ಅವುಗಳ ತಯಾರಿ, ಬಳಕೆ ಭಾರತೀಯ ಉಪಗ್ರಹಗಳು, ಇಸ್ರೊ ಸಂಸ್ಥೆ ಮುಂತಾದ ವಿಷಯಗಳ ಬಗ್ಗೆ ಪಾವರ ಪಾಯಿಂಟ್ ಪ್ರಜೆಂಟೇಷನ್ ಮೂಲಕ ಎಳೆಎಳೆಯಾಗಿ ಡಾ. ವಿಷ್ಣಪಂತ ಮಿಸಾಳೆ ತಮ್ಮ ಭಾಷಣದಲ್ಲಿ ತಿಳಿಸಿದರು. ಜೊತೆಗೆ ಕಲಾ, ವಾಣಿಜ್ಯ ವಿಭಾಗದ ವಿದ್ಯಾಥರ್ಿಗಳು 'ಇಸ್ರೊದಲ್ಲಿಯ ಅನೇಕ ಉದ್ಯೋಗವಕಾಶಗಳನ್ನು ಪಡೆದು ಪ್ರಗತಿ ಸಾಧಿಸಬಹುದೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಡಾ. ಮಲ್ಲಿಕಾಜರ್ುನ ಹಂಜಿ ಮಾತನಾಡಿ ವಿದ್ಯಾಥರ್ಿಗಳು ನಿರಂತರ ಅಧ್ಯಯನ, ಸತತ ಪ್ರಯತ್ನ, ಧ್ಯಾನ, ಚಿಂತನ ಮತ್ತು ಪ್ರಾಮಾಣಿಕತೆ, ಆದರ್ಶ ಮುಂತಾದವುಗಳಿಂದ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಉಳಿದು ಬೆಳೆಯಲು ಸಾಧ್ಯವೆಂದರು.

ಸಮಾರಂಭದಲ್ಲಿ ಸಾಧಕರಾದ ಡಾ. ಕೆ.ಆರ್. ಸಿದ್ದಗಂಗಮ್ಮ, ಡಾ.ಎಮ್.ಬಿ. ಯಾದಗುಡೆ, ಪ್ರೊ. ಸಂಗೀತಾ ಚಿಮಣೆ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾಥರ್ಿಗಳಿಗೆ ಹಾಗೂ ದತ್ತನಿಧಿ ನಗದು ಬಹುಮಾನ ಪಡೆದ ವಿದ್ಯಾಥರ್ಿಗಳಿಗೆ, 2018-19ನೇ ಸಾಲಿನ ಅತ್ಯುತ್ತಮ ವಿದ್ಯಾಥರ್ಿ ಸಂಪತಕುಮಾರ ಸಾವಡಕರ ಹಾಗೂ ವಿದ್ಯಾಥರ್ಿನಿ ಸುಪ್ರೀತಾ ಕುಡ್ಲಪ್ಪಗೋಳ ಇವರಿಗೆ ಪ್ರಶಸ್ತಿ ಪತ್ರ, ಪದಕ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು.

ಪ್ರಾರಂಭದಲ್ಲಿ ಸುಷ್ಮಾ ನಂದಗಾವಿ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು, ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ ಸ್ವಾಗತಿಸಿ ವರದಿವಾಚನ ಮಾಡಿದರು, ಡಾ. ಕೆ.ಆರ್. ಸಿದ್ದಗಂಗಮ್ಮ ಪರಿಚಯಿಸಿದರು. ಪ್ರೊ. ಆರ್.ಎಮ್. ಬಡಿಗೇರ, ಪ್ರೊ. ಯು.ಜಿ. ಪಟಗಾರ, ಡಾ. ಎಸ್.ವಾಯ್. ಹೊನ್ನುಂಗರ, ಡಾ. ಬಿ.ಎಸ್. ಗದ್ದಿ, ಪ್ರೊ. ಸಂಗೀತಾ ಚಿಮಣೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಆಶಾ ಪಾಟೀಲ ನಿರೂಪಿಸಿದರು, ಸೌಭಾಗ್ಯ ಸಾವಡಕರ ವಂದಿಸಿದರು.

ಎಚ್.ಆರ್. ಚಮಕೇರಿ, ವಿಜಯಕುಮಾರ ಬುಲರ್ಿ, ಪ್ರಕಾಶ ಪಾಟೀಲ, ಮಲ್ಲಿಕಾಜರ್ುನ ಸಂಕ, ಮಲ್ಲಿಕಾಜರ್ುನ ಕನಶೆಟ್ಟಿ, ಎಮ್.ಎನ್. ಚಿಂಚೊಳ್ಳಿ ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.