ಅಥಣಿ : ಕೃಷ್ಣಾ ಹೋರಾಟ ಸಮೀತಿ ಹೋರಾಟಕ್ಕೆ 12ನೇ ದಿನ: ಬೊಬ್ಬೆ ಚಳುವಳಿ

ಅಥಣಿ 31: ಉತ್ತರ ಕನರ್ಾಟಕದ ಪ್ರಮುಖ ನದಿ ಕೃಷ್ಣಾ ಬತ್ತಿ ಹೋಗಿ 2 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೂ ರಾಜ್ಯದ ಮುಖ್ಯಮಂತ್ರಿಗಳಾಗಲಿ, ಜಲಸಂಪನ್ಮೂಲ ಸಚಿವರಾಗಲಿ ಅಥವಾ ಕೃಷ್ಣಾ ನದಿ ಪ್ರದೇಶಕ್ಕೆ ಒಳಪಡುವ ಶಾಸಕರುಗಳಾಗಲಿ ಯಾರೂ ಸ್ಪಂದಿಸುತ್ತಿಲ್ಲ ಎಂದು ಹೋರಾಟಗಾರ ನ್ಯಾಯವಾದಿ ಎಸ್.ಎಸ್.ಪಾಟೀಲ ಆರೋಪಿಸಿದರು. ಅವರು ಕೃಷ್ಣಾ ಹೋರಾಟ ಸಮೀತಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

    ಒಂದು ವೇಳೆ ಇಂತಹ ಸಮಸ್ಯೆ ಮಂಡ್ಯ ಅಥವಾ ಮೈಸೂರು ಭಾಗದಲ್ಲಿದ್ದರೆ ಇಷ್ಟೊತ್ತಿಗಾಗಲೇ ರಾಜ್ಯದ ಮುಖ್ಯಮಂತ್ರಿ ಸಮಸ್ಯೆ ಬಗೆ ಹರಿಸಲು ಹರ ಸಾಹಸ ಪಡುತ್ತಿದ್ದರು. ಅದರೆ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಗೋಳು ಸಹಿಸಿಕೊಂಡ ಈ ಭಾಗದ ಜನ 12 ದಿನಗಳಿಂದ ಕೃಷ್ಣಾ ಹೋರಾಟ ಸಮೀತಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದರೂ ಕೂಡ ಯಾರೊಬ್ಬ ರಾಜಕಾರಣಿಯೂ ಸ್ಪಂದಿಸದೇ ಇದ್ದುದು ವಿಷಾದದ ಸಂಗತಿ ಇಷ್ಟೇ ಅಲ್ಲ ಕಾವೇರಿ ವಿಷಯ ಬಂದಾಗ ರಾಜ್ಯದ ರಾಜಕಾಣಿಗಳು, ಕನ್ನಡ ಪರ ಸಂಘಟನೆಗಳು, ಚಲನಚಿತ್ರ ತಾರೆಯರು,  ಸಾಹಿತಿಗಳು ಒಂದಾಗಿ ಹೋರಾಟ ನಡೆಸುತ್ತಾರಲ್ಲದೆ ತಮ್ಮ ಹೋರಾಟವನ್ನು ರಾಜ್ಯವ್ಯಾಪಿಗೊಳಿಸುತ್ತಾರೆ ಎಂದ ಅವರು ಕಾವೇರಿ ನದಿ ಹೋರಾಟದಲ್ಲಿ ಕಾವೇರಿ ನಮ್ಮದು ಎನ್ನುವ ಭಾವದಿಂದ ಉತ್ತರ ಕನರ್ಾಟಕ ಭಾಗದವರಾದ ನಾವೂ ಕೂಡ ಭಾಗವಹಿಸುತ್ತೇವೆ ಆದರೆ ನಮ್ಮ ಕೃಷ್ಣಾ ನದಿ ಅಥವಾ ನೀರಿನ ಸಮಸ್ಯೆ ತಲೆ ದೋರಿದಾಗ ಮೈಸೂರು ಮತ್ತು ಮಂಡ್ಯ ಭಾಗದವರು ಹೋರಾಟ ತಮಗೆನು ಸಂಬಂಧ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವುದು ನಮ್ಮನ್ನು ಕೆರಳಿಸುತ್ತಿದೆ ಎಂದು ಹೇಳಿದರು. 

ಇದೇ ರೀತಿ ತಾರತಮ್ಯ ನೀತಿ ಮುಂದುವರೆದಲ್ಲಿ ಅಥವಾ ಉತ್ತರ ಕನರ್ಾಟಕದ ಸಮಸ್ಯೆಗಳನ್ನು ಬಗೆ ಹರಿಸದೇ ಇದ್ದಲ್ಲಿ ಅನಿವಾರ್ಯವಾಗಿ ನಾವು ಉತ್ತರ ಕನರ್ಾಟಕದ ಪ್ರತ್ಯೇಕ ರಾಜ್ಯ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. 

   ಕಳೆದ 12 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೂಡ ರಾಜ್ಯ ಸರಕಾರದ ಯಾರೊಬ್ಬ ಪ್ರತಿನಿಧಿಯೂ ಕೂಡ ಸ್ಪಂದಿಸದೇ ಇದ್ದುದರಿಂದ ಹೋರಾಟಗಾರರು ತಮ್ಮ ಕಿವಿಯಲ್ಲಿ ದಾಶ್ವಾಳ ಹೂ ಇಟ್ಟುಕೊಂಡು  ವ್ಯಂಗ್ಯವಾಗಿ  ಬೊಬ್ಬೆ ಚಳುವಳಿ ನಡೆಸಿದರಲ್ಲದೆ ಒಂದು ವೇಳೆ ನಮ್ಮ ಹೋರಾಟಕ್ಕೆ ಸ್ಪಂದಿಸಿ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ತಕ್ಷಣ ಒಪ್ಪಂದ ಮಾಡಿಕೊಂಡು ನೀರು ಬಿಡಿಸುವುದಷ್ಟೇ ಅಲ್ಲ ಶಾಶ್ವತ ಪರಿಹಾರ ಕಲ್ಪಿಸದೇ ಇದ್ದಲ್ಲಿ ಅನಿವಾರ್ಯವಾಗಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಬಸನಗೌಡಾ ಪಾಟೀಲ, ಮಹಾಂತೇಶ ಬಾಡಗಿ, ದೀಪಕ ಶಿಂಧೆ,  ವಿಜಯಕುಮಾರ ಅಡಹಳ್ಳಿ,  ರಾಕೇಶ ಮೈಗೂರ,  ಹಣಮಂತ ಕಂಠಿಕರ,  ಫಿರೋಜ ಕರೋಲಿ,  ರಮೇಶ ಬಾದವಾಡಗಿ, ಲೆನಿನ್ ಹಳಿಂಗಳಿ, ಸುನೀಲ ಸಂಕ,ಎಸ್.ಸಿ. ನಾಯಿಕ, ಪಿ.ಜಿ. ಬಿಸಗಪ್ಪಿ, ಪರಶುರಾಮ ತುಬಚಿ, ಜಬ್ಬರ ಚಿಂಚಲಿ, ಪ್ರಕಾಶ ಕಾಂಬಳೆ, ಪ್ರಶಾಂತ ತೊಡಕರ, ಸುಭಾಶ ಕಾಂಬಳೆ, ಕಲ್ಲೇಶ ಮಡ್ಡಿ,  ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.